ಸರ್ಕಾರಿ ನೌಕರರು ಇನ್ನು ಆರೆಸ್ಸೆಸ್‌ ಸೇರಬಹುದು; ಕೇಂದ್ರದ ಬೆನ್ನಲ್ಲೇ ನಿಷೇಧ ರದ್ದು ಮಾಡಿದ ರಾಜಸ್ಥಾನ ಸರ್ಕಾರ!

By Kannadaprabha News  |  First Published Aug 25, 2024, 10:44 AM IST

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಆರೆಸ್ಸೆಸ್‌ ಸಂಬಂಧಿತ ಚಟುವಟಿಕೆಗಳ ಮೇಲೆ ಹೇರಿದ್ದ ನಿರ್ಬಂಧ ವಾಪಸು ಪಡೆದ ಬೆನ್ನಲ್ಲೇ, ರಾಜಸ್ಥಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮೇಲೆ ಇದ್ದ ಇದೇ ತೆರನಾದ ನಿರ್ಬಂಧವನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ.


ಪಿಟಿಐ ಜೈಪುರ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಆರೆಸ್ಸೆಸ್‌ ಸಂಬಂಧಿತ ಚಟುವಟಿಕೆಗಳ ಮೇಲೆ ಹೇರಿದ್ದ ನಿರ್ಬಂಧ ವಾಪಸು ಪಡೆದ ಬೆನ್ನಲ್ಲೇ, ರಾಜಸ್ಥಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮೇಲೆ ಇದ್ದ ಇದೇ ತೆರನಾದ ನಿರ್ಬಂಧವನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ.

ಶುಕ್ರವಾರ ರಾಜಸ್ಥಾನ ಸರ್ಕಾರದ ಸಿಬ್ಬಂದಿ ಇಲಾಖೆ ಸುತ್ತೋಲೆ ಹೊರಡಿಸಿ ಈ 52 ವರ್ಷಗಳ ಹಿಂದಿನ ನಿಷೇಧವನ್ನು ತೆಗೆದುಹಾಕಿದ ಘೋಷಣೆ ಮಾಡಿದೆ. ಇದರಿಂದಾಗಿ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಲಿದೆ.

Latest Videos

undefined

ಸರ್ಕಾರಿ ಅಧಿಕಾರಿಗಳ ಮೇಲಿದ್ದ ಆರೆಸ್ಸೆಸ್‌ ನಿಷೇಧ ಹಿಂಪಡೆದ ಕೇಂದ್ರ!

1972 ಹಾಗೂ 1981ರಲ್ಲಿ 2 ಪ್ರತ್ಯೇಕ ಆದೇಶಗಳನ್ನು ಹೊರಡಿಸಿ ಆರೆಸ್ಸೆಸ್‌ ಸಂಬಂಧಿತ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆ ಪ್ರಕಾರ, ಸರ್ಕಾರಿ ನೌಕರರು ಆರ್‌ಎಸ್‌ಎಸ್ ಶಾಖೆಗಳಿಗೆ ಮತ್ತು ಇತರ ಯಾವುದೇ ಕಾರ್ಯಕ್ರಮಗಳಿಗೆ ಹೋಗುವಂತಿರಲಿಲ್ಲ. ಸರ್ಕಾರಿ ನೌಕರ ಕೂಡ ರಜೆ ವೇಳೆಯೂ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿರಲಿಲ್ಲ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಈ ನಿಷೇಧವನ್ನು ತೆಗೆದುಹಾಕಿತ್ತು. ಇದಾದ ಬಳಿಕ ಬಿಜೆಪಿ ಆಡಳಿತವಿರುವ ಒಂದೊಂದೇ ರಾಜ್ಯಗಳಲ್ಲೂ ಇದನ್ನು ತೆಗೆದುಹಾಕಲಾಗುತ್ತಿದೆ.

click me!