
ಬೆಂಗಳೂರು (ಜು. 17): ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ರಮೇಶ್ ಜಾರಕಿಹೊಳಿ 2018ರ ಜನವರಿಯಲ್ಲಿ ಬಂಡಾಯ ಹೂಡಿದಾಗ ಬಿಜೆಪಿ ಶಾಸಕರು ಶಿಫ್ಟ್ ಆಗಿದ್ದು ದಿಲ್ಲಿಯಿಂದ 50 ಕಿಲೋಮೀಟರ್ ದೂರ ಇರುವ ಗುರುಗ್ರಾಮದ ಮಾನೇಸರ್‌ನ ಐಟಿಸಿ ಗ್ರಾಂಡ್ ಭಾರತ 7 ಸ್ಟಾರ್ ಹೋಟೆಲ್‌ಗೆ.
ಸಚಿನ್ ಪೈಲಟ್ VS ಅಶೋಕ್ ಗೆಹ್ಲೋಟ್; ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರವೇನು?
ಈಗ ಸಚಿನ್ ಪೈಲಟ್ ಪರ ಇರುವ 18 ಶಾಸಕರು ಇರುವುದೂ ಇದೇ ಹೋಟೆಲ್‌ನಲ್ಲಿ. ಹರಾರಯಣದ ಖಟ್ಟರ್ ಸರ್ಕಾರ ಐಟಿಸಿ ಗ್ರಾಂಡ್ ಭಾರತ ಹೋಟೆಲ್‌ಗೆ ಆಗಲೂ ಭದ್ರತೆ ಒದಗಿಸಿತ್ತು, ಈಗಲೂ ಒದಗಿಸಿದೆ. ಅಂದಹಾಗೆ, ಇನ್ನೊಂದು ಸಾಮ್ಯತೆಯೂ ಇದೆ; ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದ ಶಾಸಕರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದು ದಿವಂಗತ ಅರುಣ್ ಜೇಟ್ಲಿ ಆಪ್ತಮಿತ್ರ ಮುಕುಲ್ ರೋಹಟಗಿ, ಈಗ ಸಚಿನ್ ಪೈಲಟ್ ಜೊತೆಗಿರುವ ಶಾಸಕರ ಪರವಾಗಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ವಾದ ಹೂಡುತ್ತಿರುವವರೂ ಮುಕುಲ್ ರೋಹಟಗಿ ಅವರೇ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ