ರಾಮ್‌ದೇವ್‌ ಕಂಪನಿಯ 545ರ ಕೊರೋನಿಲ್‌ ಕಿಟ್‌ 2000 ರುಪಾಯಿಗೆ ಸೇಲ್‌

Kannadaprabha News   | Asianet News
Published : Jul 17, 2020, 05:04 PM IST
ರಾಮ್‌ದೇವ್‌ ಕಂಪನಿಯ 545ರ ಕೊರೋನಿಲ್‌ ಕಿಟ್‌ 2000 ರುಪಾಯಿಗೆ ಸೇಲ್‌

ಸಾರಾಂಶ

ಪತಂಜಲಿ ಕಂಪನಿ ಕೊರೋನಿಲ್‌ ಕಿಟ್‌ ಆಂಧ್ರಪ್ರದೇಶದಲ್ಲಿ ಕಾಳಸಂತೆಯಲ್ಲಿ ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಖರೀದಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹೈದರಾಬಾದ್(ಜು.17)‌: ಜೀವನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ಬಾಬಾ ರಾಮ್‌ದೇವ್‌ ಅವರ ಪತಂಜಲಿ ಕಂಪನಿ ಕೊರೋನಿಲ್‌ ಕಿಟ್‌ ಆಂಧ್ರಪ್ರದೇಶದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. 

ಹೇಗಾದರೂ ಮಾಡಿ ಕೊರೋನಾ ಬರದಂತೆ ತಡೆಯಲು ಯತ್ನಿಸುತ್ತಿರುವ ಜನರು, ಒಂದಕ್ಕೆ ನಾಲ್ಕು ಪಟ್ಟು ಹಣ ಕೊಟ್ಟು ರಾಮ್‌ದೇವ್‌ ಕಂಪನಿ ಉತ್ಪನ್ನ ಖರೀದಿಸುತ್ತಿದ್ದಾರೆ. ಪತಂಜಲಿ ಕಂಪನಿಯ ಕೊರೋನಿಲ್‌ ಕಿಟ್‌ನಲ್ಲಿ 3 ಬಗೆಯ ಔಷಧಗಳಿದ್ದು, ಅದರ ದರ 545 ರು. ಆದರೆ ಅದನ್ನು 2000 ರು.ವರೆಗೂ ಕಾಳಸಂತೆಯಲ್ಲಿ ಮಾರಲಾಗುತ್ತಿದೆ. 

ಪತಂಜಲಿಯ ಕೊರೋನಿಲ್‌ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌!

ಸ್ಥಳೀಯ ರಖಂ ಮಾರಾಟಗಾರರು, ಕೊರೋನಿಲ್‌ ಔಷಧ ಮಾರುಕಟ್ಟೆಗೆ ಬಿಡುಗಡೆಯಾದ ದಿನದಂದೇ ಭಾರೀ ಪ್ರಮಾಣದಲ್ಲಿ ಖರೀಸಿದಿಟ್ಟುಕೊಂಡಿದ್ದು, ಈಗ 3-4 ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಂಗಳವಾರ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

ಜೂನ್ 23 ರಂದು ಬಾಬಾ ರಾಮ್‌ದೇವ್ ಕೊರೋನಾ ಗುಣಪಡಿಸಲು ರಾಮಬಾಣವಾದ ಕೊರೋನಿಲ್ ಔಷಧವನ್ನು ಕಂಡುಹಿಡಿದಿದ್ದಾಗಿಯೂ, ಕೇವಲ 14 ದಿನಗಳಲ್ಲಿ ಸೋಂಕಿತರು ಗುಣಮುಖರಾಗುವುದಾಗಿಯೂ ತಿಳಿಸಿದ್ದರು. ಇದಾದ ಮರು ದಿನವೇ ಆಯುಷ್ ಇಲಾಖೆ ಶಾಕ್ ನೀಡುತ್ತಿದ್ದಂತೆ ಬಾಬಾ ರಾಮ್‌ ದೇವ್ ಉಲ್ಟಾ ಹೊಡೆದಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ
ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್