ಅಯ್ಯೋ ವಿಧಿಯೇ : ಮಗಳ ಚಿತೆಗೆ ಹಾರಿದ ಗ್ಯಾಂಗ್‌ ರೇಪ್ ಸಂತ್ರಸ್ತೆಯ ಅಪ್ಪ

Published : Aug 07, 2023, 04:10 PM IST
ಅಯ್ಯೋ ವಿಧಿಯೇ : ಮಗಳ ಚಿತೆಗೆ ಹಾರಿದ ಗ್ಯಾಂಗ್‌ ರೇಪ್ ಸಂತ್ರಸ್ತೆಯ ಅಪ್ಪ

ಸಾರಾಂಶ

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ 14 ವರ್ಷದ ಬಾಲಕಿಯ ತಂದೆ ಮಗಳ ಅಗಲಿಕೆಯ ನೋವು ತಾಳಲಾರದೇ ಆಕೆಯ ಶವಸಂಸ್ಕಾರದ ವೇಳೆ ಚಿತೆಗೆ ಹಾರಲೆತ್ನಿಸಿದ ಘಟನೆ ನಡೆದಿದ್ದು, ಗಾಯಗೊಂಡಿದ್ದಾರೆ.

ಬಿಲ್ವಾರ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ 14 ವರ್ಷದ ಬಾಲಕಿಯ ತಂದೆ ಮಗಳ ಅಗಲಿಕೆಯ ನೋವು ತಾಳಲಾರದೇ ಆಕೆಯ ಶವಸಂಸ್ಕಾರದ ವೇಳೆ ಚಿತೆಗೆ ಹಾರಲೆತ್ನಿಸಿದ ಘಟನೆ ನಡೆದಿದ್ದು, ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.  ಆಗಸ್ಟ್ 2 ರಂದು ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಸುಡುವ ಕಲ್ಲಿದ್ದಲು ಕುಲುಮೆಗೆ ಹಾಕಿ ಜೀವಂತ ಸುಡಲಾಗಿತ್ತು. ಆಕೆಯ ಸುಟ್ಟು ಕರಕಲಾದ ದೇಹ ಕಲ್ಲಿದ್ದಲು ಕುಲುಮೆ ಬಳಿ ಪತ್ತೆಯಾಗಿತ್ತು.

ರಾಜಸ್ಥಾನದ ಬಿಲ್ವಾರದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಮನೆಯಿಂದ ನಾಪತ್ತೆಯಾದವಳು, ಕಲ್ಲಿದ್ದಲು ಕುಲುಮೆಯ ಬಳಿ ಶವವಾಗಿ ಪತ್ತೆಯಾಗಿದ್ದಳು. ಇಂದು ಆಕೆಯ ಅಂತ್ಯಸಂಸ್ಕಾರ ನಡೆದಿದ್ದು, ಈ ವೇಳೆ ತಂದೆ ಮಗಳ ಚಿತೆಗೆ ಹಾರಿದ್ದಾನೆ. ಇದರಿಂದ ತಂದೆಗೆ ಸುಟ್ಟ ಗಾಯಗಳಾಗಿದ್ದು,  ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಯ (Govt Hospital) ನಿರ್ದೇಶಕ, ಡಾ. ಅರುಣ್ ಗೌರ್ ಹೇಳಿದ್ದಾರೆ.  ಇನ್ನು ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಕೋಟ್ರಾ ಪೊಲೀಸ್ ಠಾಣೆಯ ಎಎಸ್‌ಐನ್ನು (ASI) ಅಮಾನತುಗೊಳಿಸಲಾಗಿದೆ. 

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಜೀವಂತವಾಗಿ ಉರಿಯುತ್ತಿದ್ದ ಕಲ್ಲಿದಲ್ಲು ಕುಂಡಕ್ಕೆ ಎಸೆದ ಕಾಮಕರು!

ಬಾಲಕಿಯನ್ನು ಕೊಲೆ ಮಾಡಿ ನಂತರ ಕಲ್ಲಿದ್ದಲು ಕುಲುಮೆಗೆ ಹಾಕಿ  ಸುಡಲಾಗಿತ್ತು.  ಗ್ರಾಮದ ಜನ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ದೂರಿದ್ದರು.  ಇತ್ತ ಆಕೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾದ ಅರ್ಧ ಸುಟ್ಟ ಆಕೆಯ ಶವ ಪತ್ತೆಯಾಗಿತ್ತು. ಹಸುಗಳ ಮೇಯಿಸಲು ಹೋಗಿದ್ದ ವೇಳೆ   ಬಾಲಕಿ ನಾಪತ್ತೆಯಾಗಿದ್ದಳು. 

ಆರೋಪಿಗಳು ಸಾಕ್ಷ್ಯ ನಾಶ ಪಡಿಸಲು (Evidence Destroyed)ಬಾಲಕಿಯ ದೇಹದ ಕೆಲ ಭಾಗಗಳನ್ನು ಕೆರೆಗೆ ಎಸೆದಿದ್ದಾರೆ. ಮತ್ತೆ  ಅರ್ಧ ಭಾಗವನ್ನು ಕುಲುಮೆಯಲ್ಲಿ ಸುಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದೊಂದು ಅತ್ಯಂತ ಕ್ರೌರ್ಯದ ಪ್ರಕರಣವಾಗಿದ್ದು, ಆರೋಪಿಗಳಿಗೆ ಮರಣದಂಡನೆ ಶಿಕ್ಷೆ (death penalty)ಆಗುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಬಿಲ್ವಾರಾ ಎಸ್‌ಪಿ ಆದರ್ಶ ಸಿಧು ಹೇಳಿದ್ದಾರೆ. ಅಪರಾಧಿಗಳಿಗೆ ಗರಿಷ್ಠ ಪ್ರಮಾಣದ (capital punishment) ಶಿಕ್ಷೆಯಾಗುವುದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ. ಇದೊಂದು ಅತ್ಯಂತ ಅಪರೂಪದ ಹಾಗೂ ಕ್ರೌರ್ಯದ ಪ್ರಕರಣ ಎಂದು ಅವರು ಹೇಳಿದ್ದಾರೆ.  ಈ ಪ್ರಕರಣದಲ್ಲಿ ಒಟ್ಟು 10 ಜನ ಭಾಗಿಯಾಗಿದ್ದು, ಅದರಲ್ಲಿ ನಾಲ್ವರು ಮಹಿಳೆಯರು ಕೂಡ ಸೇರಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ. 

91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ