
ಜೈಪುರ(ಜೂ.14): æಹಲಿ ಹಾಗೂ ತಮಿಳುನಾಡಿನ ನಂತರದಲ್ಲಿ ದಿನಕ್ಕೆ ಅತಿಹೆಚ್ಚು ಕೊರೋನಾ ಪರೀಕ್ಷೆ ನಡೆಸುವ ಖ್ಯಾತಿ ಇರುವ ರಾಜಸ್ಥಾನದಲ್ಲಿ ಇದೀಗ ಪ್ರಾಣಿಗಳಿಗೂ ಸೋಂಕು ಪತ್ತೆ ಪರೀಕ್ಷೆ ಆರಂಭಿಸಲಾಗಿದೆ.
ರಾಜಸ್ಥಾನದ ರಾಜಧಾನಿ ಜೈಪುರದ ಹಾತಿ ಗಾಂವ್(ಆನೆಗಳ ಗ್ರಾಮ)ನಲ್ಲಿ ಆನೆಗಳಿಗೆ ರಾಜ್ಯ ಅರಣ್ಯ ಇಲಾಖೆ ಕೋವಿಡ್-19 ಪರೀಕ್ಷೆಯನ್ನು ಆರಂಭಿಸಿದೆ. ಈ ವೇಳೆ ಪ್ರಾಣಿಗಳ ವೈದ್ಯ ಡಾ. ಅರವಿಂದ್ ಮಾಥೂರ್ ಅವರು ಆನೆಗಳ ಗಂಟಲು ದ್ರವವನ್ನು ಸಂಗ್ರಹಿಸಿದರು.
ಈ ಗ್ರಾಮದಲ್ಲಿ 110 ಆನೆಗಳು ಇರುವ ಕಾರಣ ಈ ಗ್ರಾಮಕ್ಕೆ ಆನೆ ಗ್ರಾಮವೆಂದೇ ಪ್ರಸಿದ್ಧಿ. ಈ ಪೈಕಿ 63 ಆನೆಗಳು ಆನೆ ಗ್ರಾಮದಲ್ಲೇ ಆಶ್ರಯ ಪಡೆದಿದ್ದು, ಉಳಿದ ಆನೆಗಳು ಮಾಲಿಕರ ಬಳಿಯಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ