ಮುಂಬೈ: ಕೋವಿಡ್ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!| ಕೊರೋನಾಘಾತದಿಂದ ತೀವ್ರವಾಗಿ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈ
ಮುಂಬೈ(ಜೂ.14): ಕೊರೋನಾಘಾತದಿಂದ ತೀವ್ರವಾಗಿ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈ ನಗರದ ಆಸ್ಪತ್ರೆಗಳು ತೀವ್ರ ನಿಗಾ ಘಟಕ(ಐಸಿಯು)ಗಳು ಶೇ.99ರಷ್ಟುಹಾಗೂ ವೆಂಟಿಲೇಟರ್‌ಗಳು ಶೇ.94ರಷ್ಟುಭರ್ತಿಯಾಗಿವೆ ಎಂಬ ಆತಂಕಕಾರಿ ವಿಚಾರವನ್ನು ಬೃಹನ್ ಮುಂಬೈ ನಗರ ಪಾಲಿಕೆ ಬಹಿರಂಗಪಡಿಸಿದೆ.
ಜೂ.11ರ ಮಾಹಿತಿ ಪ್ರಕಾರ ನಗರದಲ್ಲಿರುವ 1181 ಐಸಿಯು ಬೆಡ್‌ಗಳ ಪೈಕಿ 1167 ಬೆಡ್‌ಗಳು ಭರ್ತಿಯಾಗಿವೆ. ಈ ಮೂಲಕ ಹೊಸ ರೋಗಿಗಳಿಗೆ ಕೇವಲ 14 ಬೆಡ್‌ಗಳು ಮಾತ್ರವೇ ಉಳಿದಿವೆ.
undefined
ಅಲ್ಲದೆ, ಕೋವಿಡ್ ರೋಗಿಯ ಶ್ವಾಸಕೋಶ ನಿಷ್ಕಿ್ರಯವಾದಾಗ ರೋಗಿಗೆ ಕೃತಕ ಉಸಿರಾಟ ನೀಡುವ 530 ವೆಂಟಿಲೇಟರ್‌ಗಳ ಪೈಕಿ 497 ಬಳಸಲ್ಪಡುತ್ತಿದೆ. ಜೊತೆಗೆ, ರೋಗಿಗೆ ಆಮ್ಲಜನಕ ಪೂರೈಸುವ 5260 ಬೆಡ್‌ಗಳ ಪೈಕಿ 3986 ಬೆಡ್‌ಗಳಲ್ಲಿ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಎಂಸಿ ತಿಳಿಸಿದೆ.
ಇದಲ್ಲದೆ, ಅಷ್ಟೇನೂ ಚಿಂತಾಜನಕವಲ್ಲದ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ 10,450 ಬೆಡ್‌ಗಳನ್ನು ಹೊಂದಿರುವ ಕೋವಿಡ್ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲೂ ಶೇ.87ರಷ್ಟುರೋಗಿಗಳಿಂದ ತುಂಬಿ ಹೋಗಿವೆ.