ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದ 50 ದಿವ್ಯಾಂಗ ಜೋಡಿ

By Anusha KbFirst Published Aug 30, 2022, 4:10 PM IST
Highlights

ಸಾಮೂಹಿಕ ವಿವಾಹ ಸಮಾರಂಭವೊಂದರಲ್ಲಿ 50 ದಿವ್ಯಾಂಗ ಜೋಡಿಗಳು ಹಸೆಮಣೆ ಏರಿದರು. ರಾಜಸ್ಥಾನದ ಉದಯ್‌ಪುರ ಈ ಅಪರೂಪದ ಮದುವೆಗೆ ಸಾಕ್ಷಿಯಾಯ್ತು,

ಸಾಮೂಹಿಕ ವಿವಾಹ ಸಮಾರಂಭವೊಂದರಲ್ಲಿ 50 ದಿವ್ಯಾಂಗ ಜೋಡಿಗಳು ಹಸೆಮಣೆ ಏರಿದರು. ರಾಜಸ್ಥಾನದ ಉದಯ್‌ಪುರ ಈ ಅಪರೂಪದ ಮದುವೆಗೆ ಸಾಕ್ಷಿಯಾಯ್ತು, ನಾರಾಯಣ ಸೇವಾ ಸಂಸ್ಥಾನ ಎಂಬ ಎನ್‌ಜಿಒ ಸಂಸ್ಥೆಯೊಂದು ಈ ವಿಶೇಷ ಮದುವೆ ಸಮಾರಂಭವನ್ನು ಆಯೋಜಿಸಿತ್ತು. ವೇದಿಕ ಮಂತ್ರ ಘೋಷಗಳೊಂದಿಗೆ ಈ ವಿಶೇಷ ಸಮಾರಂಭದಲ್ಲಿ 50 ವಿಶೇಷ ಜೋಡಿಗಳು ಹಸೆಮಣೆ ಏರಿ ಹೊಸ ಬದುಕಿಗೆ ಕಾಲಿರಿಸಿದರು. ಈ ಮದುವೆಯಲ್ಲಿ ದಂಪತಿಗಳಿಗೆ ಸಂಸ್ಥಾನವೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಿತು. 

ಈ ಬಗ್ಗೆ ಮಾತನಾಡಿದ ಈ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಕೈಲಾಸ್ ಅಗರ್ವಾಲ್‌, ಬಡ ಸಮುದಾಯದ ಈ ದಿವ್ಯಾಂಗ ಯುವಕ ಯುವತಿಯರು ತಮ್ಮ ಈ ವೈಕಲ್ಯತೆ ಹಾಗೂ ಬಡತನದ ಕಾರಣದಿಂದಾಗಿ  ಮದುವೆಯಾಗುವುದನ್ನು ಕನಿಷ್ಟ ಊಹೆಯೂ ಮಾಡಿರಲಿಲ್ಲ. ಆದರೆ ಇಂದು ಸಮಾಜದ ಸಹಕಾರದಿಂದ ಅವರು ಹಸೆಮಣೆ ಏರಿದ್ದಾರೆ. ಮದುವೆಯೂ ವೈದಿಕ ಸಂಪ್ರದಾಯದಂತೆ ವೇಧ ಘೋಷಗಳ ನಡುವೆ ನಡೆದಿದೆ ಎಂದು ಹೇಳಿದರು. 

ಇವರಿಗಿರುವುದೊಂದೇ ಕೈ ಆದರೇನು ರೆಡಿ ಮಾಡ್ತಾರೆ ರುಚಿರುಚಿ ಬಿಸಿಬಿಸಿ ಪಾವ್‌ಬಾಜಿ

ಈ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಕೈಗಾರಿಕೆ ಹಾಗೂ ಮುಜರಾಯಿ ಸಚಿವೆ, ಶಕುಂತಲಾ ರಾವತ್ ನವಜೋಡಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳು ನವ ಜೋಡಿಗಳ ಹೊಸ ಜೀವನಕ್ಕೆ ಶುಭ ಹಾರೈಸಿ, ಚಿನ್ನ ಬಟ್ಟೆ ಮೊದಲಾದವುಗಳನ್ನು ಉಡುಗೊರೆಯಾಗಿ ನೀಡಿದರು. ಈ ವಿವಾಹವನ್ನು ಆಯೋಜಿಸಿದ ನಾರಾಯಣ ಸೇವಾ ಸಂಸ್ಥಾನವೂ ದಂಪತಿಗಳಿಗೆ ಜೀವನ ನಡೆಸಲು ಅಗತ್ಯವಾಗಿರುವ ಮನೆಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಿದೆ. 

ಒಂದೇ ಕಾಲಿನಲ್ಲಿ ಕುಂಟತ್ತಲೇ 2 ಕಿ.ಮೀ ದೂರದ ಶಾಲೆಗೆ ಹೋಗುವ ಬಿಹಾರದ ಈ ಹುಡುಗಿಗೆ ವೈದ್ಯೆಯಾಗುವ ಆಸೆ!

ಇದು ನಾರಾಯಣ ಸೇವಾ ಸಂಸ್ಥಾನ ಆಯೋಜಿಸಿದ 38ನೇ ವಿಶೇಷ ಸಾಮೂಹಿಕ ವಿವಾಹ ಸಮಾರಂಭವಾಗಿದೆ. ಇದು ದಿವ್ಯಾಂಗ ಜನರಿಗೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುವ ಅದಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಈ ಬಾರಿ ಇನ್ನು ಒಂದು ಹೆಜ್ಜೆ ಮುಂದಿಟ್ಟ ಈ ಸಂಸ್ಥೆ ಹೊಸದಾಗಿ ವಿವಾಹವಾದ ಈ ದಂಪತಿಗೆ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಬಗ್ಗೆ ಸಂದೇಶ ನೀಡುವ ಜೊತೆಗೆ ಪ್ರತಿ ಜೋಡಿಗೂ ಸಸಿಗಳನ್ನು ಕೊಡುಗೆಯಾಗಿ ನೀಡಿತು. ಈ ಗಿಡಗಳನ್ನು ತಮ್ಮ ಮನೆಯ ಮುಂದೆ ನೆಡುವಂತೆ ನವದಂಪತಿಗೆ ಸಂಸ್ಥೆ ಹೇಳಿದೆ. ನಾರಾಯಣ ಸೇವಾ ಸಂಸ್ಥಾನದ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

ಹುಟ್ಟುತ್ತಲೇ ಅಂಗವೈಕಲ್ಯತೆಯಿಂದ ಜನಿಸುವ ದಿವ್ಯಾಂಗರ ಬದುಕು ಬಹಳ ಕಷ್ಟಕರವಾಗಿದೆ. ಕೈಕಾಲುಗಳ ಸ್ವಾಧೀನ ಸರಿ ಇಲ್ಲದೇ ತುತ್ತಿನ ಚೀಲಕ್ಕೆ ಕಷ್ಟಪಡುವ ದಿವ್ಯಾಂಗರ ಬದುಕಿನಲ್ಲಿ ವಿವಾಹ ಕನಸಿನ ಮಾತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ನಾರಾಯಣ ಸೇವಾ ಸಂಸ್ಥೆ ಈ ದಿವ್ಯಾಂಗರ ಬಾಳಲ್ಲಿ ಬೆಳಕಾಗಿ ಬಂದಿದೆ. 

ದಿವ್ಯಾಂಗರಿಗೆ ಉದ್ಯೋಗ
ವಿಶ್ವಾದ್ಯಂತ ಅನೇಕ ಕಂಪನಿಗಳು ಹಲವಾರು ಉದ್ಯೋಗ ಕಡಿತ ಮತ್ತು ನಷ್ಟಗಳನ್ನು ಘೋಷಿಸಿರುವ ಸಮಯದಲ್ಲಿ, ಮೈಕ್ರೋಸಾಫ್ಟ್ ದಿವ್ಯಾಂಗರನ್ನು (ಪಿಡಬ್ಲ್ಯೂಡಿ) ಸಬಲೀಕರಣಗೊಳಿಸಲು ಹೊಸ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ದಿವ್ಯಾಂಗರಿಗೆ ಒಂದು ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲು ಲಾಭರಹಿತ ಸಂಸ್ಥೆಯಾದ ಎನೇಬಲ್ ಇಂಡಿಯಾದೊಂದಿಗೆ ಮೈಕ್ರೋಸಾಫ್ಟ್‌ ಪಾಲುದಾರಿಕೆ ಮಾಡಿಕೊಂಡಿದೆ. ‘ಇನ್‌ಕ್ಲೂಷನ್‌ ಟು ಆಕ್ಷನ್‌’ ಎಂಬ ಉಪಕ್ರಮವು ಹಣಕಾಸು ಸೇವೆಗಳು, ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಟೆಕ್ ವಲಯಗಳಾದ್ಯಂತ 100 ಕ್ಕೂ ಹೆಚ್ಚು ಸಂಸ್ಥೆಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ, ಇದು ದಿವ್ಯಾಂಗರಿಗೆ  1 ಲಕ್ಷ ಉದ್ಯೋಗಾವಕಾಶಗಳನ್ನು ಅನ್‌ಲಾಕ್ ಮಾಡಲು ಟೆಕ್ ಕೌಶಲ್ಯ, ಮಾರ್ಗದರ್ಶನ, ಇಂಟರ್ನ್‌ಶಿಪ್ ಮತ್ತು ಉದ್ಯೋಗದ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತದೆ. ಮೈಕ್ರೋಸಾಫ್ಟ್ ಇಂಡಿಯಾದ ಅಧ್ಯಕ್ಷರಾದ ಅನಂತ್ ಮಹೇಶ್ವರಿ ಈ ಕುರಿತಾಗಿ ಮಾಹಿತಿ ನೀಡಿದ್ದು, ಈ ಸಹಯೋಗವು ಉದ್ಯಮದಾದ್ಯಂತ ಅನೇಕ ಪಾಲುದಾರರು, ವಕೀಲರು, ತಜ್ಞರು, ನೀತಿ ನಿರೂಪಕರು ಮತ್ತು ದಿವ್ಯಾಂಗ ಸಮುದಾಯದೊಂದಿಗೆ ದಿವ್ಯಾಂಗ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸಬಲೀಕರಣಗೊಳಿಸಲು ಮತ್ತು ಪರಿವರ್ತಿಸಲು ನಿರಂತರ ಪ್ರಯತ್ನದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
 

click me!