18 ವರ್ಷಗಳ ಕಠಿಣ ವ್ರತಾಚರಣೆಯ ನಂತರ ಜನಿಸಿದ ಮಗು ವಿಕ್ಸ್ ಡಬ್ಬಿಯ ಮುಚ್ಚಳ ನುಂಗಿ ಸಾವನ್ನಪ್ಪಿದೆ. ರಾಜಸ್ಥಾನದ ಬಾಂಸ್ವಾಡದಲ್ಲಿ ನಡೆದ ಈ ಘಟನೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.
ರಾಜಸ್ಥಾನ (ಡಿ.17): ಈ ದಂಪತಿ ಮದಿವೆಯಾಗಿ 18 ವರ್ಷಗಳು ಕಳೆದರೂ ಮಗುವಾಗಿರಲಿಲ್ಲ. ತಮಗೆ ಯಾರಾರು ಏನು ಹೇಳುತ್ತಾರೋ ಅದೆಲ್ಲವನ್ನೂ ಮಾಡಿದ್ದಾರೆ. ದೇವರು, ಪೂಜೆ-ಪುನಸ್ಕಾರ, ವ್ರಥ, ಹರಕೆ, ಪಥ್ಯ, ಆಯುರ್ವೇದ, ಗಿಡಮೂಲಿಕೆ ಹಾಗೂ ಆಸ್ಪತ್ರೆ ಚಿಕಿತ್ಸೆ ಸೇರಿ ನೂರಾರು ಕಾರ್ಯಗಳನ್ನು ಮಾಡಿದ್ದಾರೆ. 18 ವರ್ಷಗಳ ನಂತರ ದಂಪತಿಗೆ ಗಂಡು ಮಗು ಜನಿಸಿದೆ. ಆದರೆ, ಈ ಗಂಡು ಮಗು ಕೇವಲ 14 ತಿಂಗಳು ಕೂಡ ಬದುಕಲಿಲ್ಲ. ವಿಕ್ಸ್ ಡಬ್ಬಿ ನುಂಗಿ, ಸಕಾಲಕ್ಕೆ ಚಿಕಿತ್ಸೆ ಸಿಗದೇ ತಂದೆ-ತಾಯಿಯ ಕೈಯಲ್ಲಿರುವಾಗಲೇ ಉಸಿರು ಚೆಲ್ಲಿದೆ.
ಪಾಲಕರ 18 ವರ್ಷದ ಕಠಿಣ ವ್ರತಾಚರಣೆಯ ನಂತರ ಹುಟ್ಟಿದ ಮಗು, ವಿಕ್ಸ್ ಡಬ್ಬಿಯ ಮುಚ್ಚಳದಿಂದಾಗಿ 14 ತಿಂಗಳ ನಂತರ ಸಾವನ್ನಪ್ಪಿದೆ. ಈ ಘಟನೆ ರಾಜಸ್ಥಾನದ ಬಾಂಸ್ವಾಡದ ಲೋಹಾರಿ ಠಾಣಾ ಪ್ರದೇಶದ ಸರೆಡಿ ಪಟ್ಟಣದಲ್ಲಿ ನಡೆದಿದೆ. ಇನ್ನು 14 ತಿಂಗಳ ಮಗುವಿನ ಸಾವು ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗಿಸಿದೆ. ಆಟವಾಡುವಾಗ ಮಗು ವಿಕ್ಸ್ ಡಬ್ಬಿಯ ಮುಚ್ಚಳವನ್ನು ನುಂಗಿತ್ತು, ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅದರ ಪ್ರಾಣ ಹೋಯಿತು.
undefined
ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಮಗ ಮಾನ್ವಿಕ್ ಸೋಮವಾರ ರಾತ್ರಿ ವಿಕ್ಸ್ ಡಬ್ಬಿಯ ಜೊತೆಗೆ ಆಟವಾಡುತ್ತಿದ್ದನು. ಆಟವಾಡುವಾಗ ಡಬ್ಬಿಯ ಮುಚ್ಚಳ ನುಂಗಿದೆ. ಆಗ, ಬಾಯಿಂದ ಮುಚ್ಚಳ ತೆಗೆಯಲು ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಮಗುವಿನ ಸ್ಥಿತಿ ಹದಗೆಡುತ್ತಿತ್ತು. ಇದನ್ನು ನೋಡಿದ ಪೋಷಕರು ತಕ್ಷಣ ಸರೆಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಅಲ್ಲಿ ವೈದ್ಯರು ಸಿಗದ ಕಾರಣ ಅವರಿಗೆ ನಿರಾಸೆಯಾಯಿತು. ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬ ನರ್ಸ್ ಮತ್ತು ಕಾಯಂ ಸಿಬ್ಬಂದಿ ಇದ್ದರು. ವೈದ್ಯರ ಅನುಪಸ್ಥಿತಿಯಿಂದಾಗಿ ಪೋಷಕರು ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು, ಆದರೆ, ದಾರಿ ಮಧ್ಯೆ ಮಗು ಸಾವನ್ನಪ್ಪಿತು. ದುಃಖಿತ ಪೋಷಕರು ಮಗುವನ್ನು ಮನೆಗೆ ಕರೆದೊಯ್ದರು.
ಇದನ್ನೂ ಓದಿ: ಸ್ನೇಹಮಯಿ ಕೃಷ್ಣ ನಾಪತ್ತೆ: ಸಿಎಂ ವಿರುದ್ಧ ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಂಡಿತಾ ಸರ್ಕಾರ?
18 ವರ್ಷಗಳ ನಂತರ ಜನಿಸಿದ ಮಗು: ಮಗು ಪ್ರಾಣಾಪಾಯದಲ್ಲಿದ್ದಾಗ ವೈದ್ಯರು ಲಭ್ಯವಿಲ್ಲದೇ ಚಿಕಿತ್ಸೆ ಸಿಗದ ಕಾರಣ ಬೇಸತ್ತ ಪೋಷಕರು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದರು. ಆಸ್ಪತ್ರೆಗೆ ಬೀಗ ಹಾಕಿ ವೈದ್ಯಕೀಯ ಇಲಾಖೆ ಮತ್ತು ಆಡಳಿತದ ವಿರುದ್ಧ ಘೋಷಣೆ ಕೂಗಿದರು. ವೈದ್ಯರ ಅನುಪಸ್ಥಿತಿಯಿಂದಾಗಿ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಪ್ರಾಣ ಹೋಗಿದೆ ಎಂದು ಆರೋಪಿಸಿದರು. ಇನ್ನು ಮೃತ ಮಗುವಿನ ತಂದೆ ಹೀರೆನ್ ಜೋಶಿ ಸರ್ಕಾರಿ ಶಿಕ್ಷಕರಾಗಿದ್ದಾರೆ. ಇನ್ನು ಸರ್ಕಾರಿ ಶಾಲೆ ಶಿಕ್ಷಕನಿಗೆ ಈಗಾಗಲೇ 2 ಹೆಣ್ಣು ಮಕ್ಕಳಿದ್ದು, 3ನೇ ಮಗುವಿಗಾಗಿ ಕುಟುಂಬವು 18 ವರ್ಷಗಳಿಂದ ಕಾಯುತ್ತಿತ್ತು. 18 ವರ್ಷಗಳ ನಂತರ ಗಂಡು ಮಗು ಜನಿಸಿತ್ತು. ಆದರೆ ವಿಧಿ ಮಗುವನ್ನು 14 ತಿಂಗಳ ನಂತರ ಕಸಿದುಕೊಂಡಿತು. ಅಕಾಲಿಕ ಮರಣ ಎಲ್ಲರನ್ನೂ ಆಘಾತಕ್ಕೆ ದೂಡಿದೆ.
ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುತ್ತಿತ್ತು: ಇನ್ನು ಮಗು ವಿಕ್ಸ್ ಬಾಟಲಿ ಮುಚ್ಚಳ ನುಂಗಿದ ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸ್ಥಳೀಯ ವೈದ್ಯರು ಲಭ್ಯವಿದ್ದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗಿ ಮಗುವನ್ನು ಉಳಿಸಬಹುದಾಗಿತ್ತು. ಆದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಆಗಾಗ್ಗೆ ಗೈರುಹಾಜರಾಗುತ್ತಾರೆ. ತೀವ್ರ ತುರ್ತು ಸಂದರ್ಭಗಳಲ್ಲಿಯೂ ಚಿಕಿತ್ಸೆ ಸಿಗುವುದಿಲ್ಲ, ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಾರೆ. ಮಗುವ ವಿಕ್ಸ್ ಡಬ್ಬಿಯ ಮುಚ್ಚಳ ನುಂಗಿದಾಗಲೂ ಚಿಕಿತ್ಸೆ ನೀಡಲು ವೈದ್ಯರು ಇರಲಿಲ್ಲ. ಆಸ್ಪತ್ರೆಗೆ ಬೀಗ ಜಡಿದು ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬ್ಲಾಕ್ ವೈದ್ಯಾಧಿಕಾರಿ ಮತ್ತು ಆಡಳಿತಾಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಜರಿರುವ ಬಗ್ಗೆ ಭರವಸೆ ನೀಡಿದರು. ನಂತರ ಪರಿಸ್ಥಿತಿ ಶಾಂತವಾಯಿತು.
ಇದನ್ನೂ ಓದಿ: ಪಾಕ್‌ಗೆ ಮಾನವ ಕಳ್ಳಸಾಗಣೆ: 22 ವರ್ಷದ ನಂತರ ತಾಯ್ನೆಲ ಭಾರತಕ್ಕೆ ಮರಳಿದ ಹಮೀದಾ ಬಾನು