
ನವದೆಹಲಿ(ಜ. 9): ಭಾರತಕ್ಕೆ ಈಗಾಗಲೇ ಆತಂಕ ಹುಟ್ಟಿಸಿರುವ ಕೋವಿಡ್-19ನ (Covid-19) ಮೂರನೇ ಅಲೆಯು (Third Wave) ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಚಾಚುತ್ತಿದೆ. ಭಾರತದಲ್ಲಿ (India) ಕಳೆದ 24 ಗಂಟೆಗಳಲ್ಲಿ ಒಟ್ಟು 1.59, 632 ಹೊಸ ಕೋವಿಡ್-19 ಕೇಸ್ ಗಳು ದಾಖಲಾಗಿದ್ದು, ಇದರ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಭಾನುವಾರ ಸಂಜೆ 4.30ಕ್ಕೆ ಪರಿಶೀಲನಾ ಸಭೆಯನ್ನು (COVID-19 situation Review) ಕರೆದಿದ್ದಾರೆ. ಮುಂಬರುವ ದಿನಗಳಲ್ಲಿ ಸಂಭಾವ್ಯ ಕೋವಿಡ್-19 ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಪರಿಸ್ಥಿತಿ ಹಾಗೂ ಸಿದ್ಧತೆಯನ್ನು ಇಲ್ಲಿ ಅವಲೋಕನ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಈವರೆಗೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 3,55,28,004 ಕೋಟಿಗೆ ಏರಿದೆ. ಶನಿವಾರ ಪ್ರಕಟವಾದ ಹೊಸ ಕೇಸ್ ಗಳ ಪೈಕಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾದ 3,623 ಒಮಿಕ್ರಾನ್ (Omicron) ರೂಪಾಂತರದ ಪ್ರಕರಣಗಳು ಸೇರಿವೆ. ಸೋಂಕಿನ ಹರಡುವಿಕೆಯನ್ನು ಸೂಚಿಸುವ ಭಾರತದ ಆರ್ ನಾಟ್ ವ್ಯಾಲ್ಯು (R naught value ) ಈ ವಾರ 4 ರಲ್ಲಿ ದಾಖಲಾಗಿದೆ. ಕೋವಿಡ್-19 ಸಾಂಕ್ರಾಮಿಕದ 2ನೇ ಅಲೆಯ ಉತ್ತುಂಗದ ವೇಳೆ ಆರ್ ನಾಟ್ ವ್ಯಾಲ್ಯು ಪ್ರಮಾಣ 1.69 ಆಗಿತ್ತು.
ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.66% ಆಗಿದೆ. ಇನ್ನು ರಾಷ್ಟ್ರೀಯ ಕೋವಿಡ್-19 ಚೇತರಿಕೆಯ ದರವು (national COVID-19 recovery rate) 96.98%ಗೆ ಇಳಿದಿದೆ ಎಂದು ವರದಿಯಾಗಿದೆ. ಭಾನುವಾರ ಬೆಳಗ್ಗಿನ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ 1,18,442 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದಿನನಿತ್ಯದ ಪಾಸಿಟಿವಿಟಿ ಪ್ರಮಾಣ ಶೇಕಡಾ 10.21 ಆಗಿದ್ದರೆ, ವಾರದ ಪಾಸಿಟಿವಿಟಿ ಪ್ರಮಾಣ 6.77 ಆಗಿದೆ. ಇನ್ನು ದೇಶಾದ್ಯಂತ ಕೋವಿಡ್-19 ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ 151.58 ಕೋಟಿ ಡೋಸ್ ಗಳನ್ನುಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು 15 ರಿಂದ 18 ವರ್ಷದ ಒಳಗಿನ ಮಕ್ಕಳ ಪೈಕಿ, ಒಂದು ವಾರದ ಒಳಗಾಗಿ ಅಂದಾಜು 2 ಕೋಟಿ ಮಂದಿ ಮೊದಲ ಡೋಸ್ ನ ಕೋವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಯನ್ನು ಶ್ಲಾಘನೆ ಮಾಡಿರುವ ಪ್ರಧಾನಿ ಮೋದಿ, ಇದರ ವೇಗವನ್ನು ಹೀಗೆ ಮುಂದುವರಿಸುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ, ಶನಿವಾರ 41,434 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿರುವುದರಿಂದ ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಇದರ ಪೈಕಿ ಮುಂಬೈನಲ್ಲಿಯೇ 5 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 20,318 ಕೇಸ್ ವರದಿಯಾಗಿದ್ದು, ಶುಕ್ರವಾರದ (20,971) ಕೇಸ್ ಗಳಿಂತ ಸ್ವಲ್ಪ ಕಡಿಮೆ ಎನಿಸಿದೆ. ದೆಹಲಿಯಲ್ಲಿ 20,181 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಇದು ಕಳೆದ ವರ್ಷ ಮೇ ನಂತರದ ಒಂದೇ ದಿನದಲ್ಲಿ ಗರಿಷ್ಠ ಏರಿಕೆ ಇದಾಗಿದೆ. ರಾಷ್ಟ್ರ ರಾಜಧಾನಿ ಕಳೆದ 24 ಗಂಟೆಗಳಲ್ಲಿ 7 ಸಾವುಗಳನ್ನು ವರದಿ ಮಾಡಿದೆ. ಪಾಸಿಟಿವಿಟಿ ದರ 19.60 ಪ್ರತಿಶತಕ್ಕೆ ಏರಿದೆ.
Covid 19: ಮಹಾರಾಷ್ಟ್ರದಲ್ಲಿ ಫೆಬ್ರವರಿ 15ರವರೆಗೂ ಶಾಲೆ ಬಂದ್
ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 327 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇದು ಕಳೆದ ಕೆಲವು ತಿಂಗಳುಗಳಲ್ಲಿ ಕೇರಳದಲ್ಲಿ ಸಂಭವಿಸಿದ 242 ಸಾವುಗಳನ್ನು ಒಳಗೊಂಡಿದೆ.
27 ರಾಜ್ಯಗಳಲ್ಲಿ ಒಮಿಕ್ರಾನ್ ಕೇಸ್: ಒಂದೇ ದಿನದಲ್ಲಿ 616 ಒಮಿಕ್ರಾನ್ ಕೇಸ್ ಗಳೊಂದಿಗೆ ಭಾರತದಲ್ಲಿ ಈಗ ಕರೋನಾ ವೈರಸ್ ಹೊಸ ರೂಪಾಂತರವಾದ ಒಮಿಕ್ರಾನ್ ನ 3,623 ಕೇಸ್ ಗಳು ದಾಖಲಾದಂತಾಗಿದೆ. ದೇಶದ 27 ರಾಜ್ಯಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.ಮಹಾರಾಷ್ಟ್ರದಲ್ಲಿ ಗರಿಷ್ಠ 109 ಕೇಸ್ ಗಳಿದ್ದರೆ, ದೆಹಲಿ 513 ಕೇಸ್ ಗಳೊಂದಿಗೆ 2ನೇ ಸ್ಥಾನದಲ್ಲಿದೆ. ಒಟ್ಟಾರೆ ಒಮಿಕ್ರಾನ್ ಕೇಸ್ ಗಳ ಪೈಕಿ 1409 ಮಂದಿ ಚೇತರಿಕೆ ಕಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ