ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ಮಯೂರ್ ಶೇಲ್ಕೆಗೆ ಚಪ್ಪಾಳೆ ಮೂಲಕ ಸ್ವಾಗತ!

Published : Apr 20, 2021, 02:47 PM IST
ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ಮಯೂರ್ ಶೇಲ್ಕೆಗೆ ಚಪ್ಪಾಳೆ ಮೂಲಕ ಸ್ವಾಗತ!

ಸಾರಾಂಶ

ರೈಲು ಹಳಿ ಮೇಲೆ ಬಿದ್ದ ಮಗುವನ್ನು ರಕ್ಷಿಸಿದ್ದ ಮಯೂರ್ ಶೇಲ್ಕೆಗೆ ಅಧಿಕಾರಿಗಳಿಂದ ಪುರಸ್ಕಾರ | ಮಹಾರಾಷ್ಟ್ರದ ಕೇಂದ್ರ ರೇಲ್ವೆ ಕಚೇರಿಯಲ್ಲಿ ಚಪ್ಪಾಳೆ ತಟ್ಟುವುದರ ಮೂಲಕ ಅಭಿನಂದನೆ | ರೈಲು ಹಳಿ ಮೇಲೆ ಬಿದ್ದಿದ್ದ ಮಗುವನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಕಾಪಾಡಿದ್ದ ಮಯೂರ್ | ಮಯೂರ್ ಕಾರ್ಯವನ್ನು ಶ್ಲಾಘಿಸಿದ ರೇಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ 

ಮಹಾರಾಷ್ಟ್ರ(ಏ.20):  ಇತ್ತೀಚಿಗೆ ರೈಲು ಹಳಿಯ ಮೇಲೆ ಬಿದ್ದ ಮಗುವೊಂದನ್ನು ರೈಲ್ವೆ ಸಿಬ್ಬಂದಿಯೊಬ್ಬರು ತಮ್ಮ ಪ್ರಾಣವನ್ನು ಪಣಕಿಟ್ಟು ರಕ್ಷಿಸಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸ್ವತ: ರೇಲ್ವೇ ಮಂತ್ರಿ ಪಿಯೂಷ್ ಗೋಯಲ್ ಟ್ವೀಟರ್ನಲ್ಲಿ ಈ ವಿಡೀಯೋವನ್ನು ಹಂಚಿಕೊಂಡು ಮಗುವಿನ ಪ್ರಾಣ ರಕ್ಷಿಸಿದ್ದ ಮಯೂರ್ ಶೇಲ್ಕೆ ಸಾಹಸಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು.

ಮಗುವಿನ ಪ್ರಾಣ ಉಳಿಸಿದ್ದ ಮಯೂರ್ ಶೇಲ್ಕೆರಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು  ಪ್ರಶಂಸೆಗಳು ಬಂದಿದ್ದವು. ಈಗ ಮಹಾರಾಷ್ಟ್ರದ ಕೇಂದ್ರ ರೇಲ್ವೆ ಕಚೇರಿಯಲ್ಲಿ ಮಯೂರ್ ಈ ಸಾಹಸವನ್ನು ಮೆಚ್ಚಿ ಅವರಿಗೆ ಸನ್ಮಾನ ಮಾಡಲಾಗಿದ್ದು ಕಚೇರಿಯಲ್ಲಿದ್ದ ಇತರ ಸಿಬ್ಬಂದಿಗಳು ಚಪ್ಪಾಳೆ ತಟ್ಟುವುದರ ಮೂಲಕ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದ್ದು ಶೇಲ್ಕೆ ಅವರ ಕಾರ್ಯ ನಿಜವಾಗಲೂ ಅಭಿನಂದನೀಯ ಎಂದು ನೆಟ್ಟಿಗರು ಹೇಳಿದ್ದಾರೆ.

ಏಪ್ರಿಲ್ 17 ರಂದು ದೃಷ್ಟಿಹೀನ ತಾಯಿಯೊಬ್ಬರು ತಮ್ಮ ಮಗುವಿನ ಜೊತೆ ರೈಲ್ವೇ ಪ್ಲಾಟ್‌ಫಾರಂ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಅಚಾನಕ್ಕಾಗಿ ಬಲಭಾಗದಲ್ಲಿದ್ದ ಮಗು ಕೆಳಕ್ಕೆ ಬಿದ್ದಿದೆ. ಇದೆ ವೇಳೆ ಮಗು ಬಿದ್ದ ಹಳಿಯ ಮೇಳೆ ರೈಲು ಕೂಡ ಬರುತ್ತಿತ್ತು. ಮಗು ಕೈ ತಪ್ಪಿ ಹೋಗಿದ್ದನ್ನು ಅರಿತು ಮಗುವಿನ ಕೈ ಹಿಡಿಯಲು ತಾಯಿ ಪ್ರಯತ್ನಿಸಿದ್ದಾರೆ. ಆದರೆ ಅವರ ಕೈಗೆ ಮಗು ಸಿಕ್ಕಿಲ್ಲ. ಇನ್ನೊಂಡೆದೆ ಪ್ಲಾಟ್‌ ಫಾರಂ ಹತ್ತಲು ಪ್ರಯತ್ನಿಸಿದ್ದ ಮಗು ಕೂಡ ಯಶಸ್ವಿಯಾಗಿಲ್ಲ. ಇತ್ತ ತನ್ನ ಕಾರ್ಯದಲ್ಲಿ ತೊಡಗಿದ್ದ ಮಯೂರ್ ಮಗು ಬಿದ್ದಿದ್ದನ್ನು ನೋಡುತ್ತಿದ್ದಂತೆಯೇ ರೈಲು ಹಳಿಯತ್ತ ಹಾರಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ರೈಲು ಬರುತ್ತಿದ್ದ ವಿರುದ್ಧ ದಿಕ್ಕಿಗೆ ಮಿಂಚಿನ ವೇಗದಲ್ಲಿ ಓಡಿದ ಮಯೂರ್ ಕೆಲವೇ ಸೆಕೆಂಡಗಳಲ್ಲಿ ಮಗುವನ್ನು ಎತ್ತಿ ಮೇಲಕ್ಕೆ ಹಾಕಿದ್ದಾರೆ. ಬಳಿಕ ಒಂದೇ ಸೇಕೆಂಡ್ನಲ್ಲಿ ತಾವು ಮೇಲಕ್ಕೆ ಹತ್ತಿದ್ದಾರೆ.

ಮಗುವನ್ನು ರಕ್ಷಿಸುವ ಭರದಲ್ಲಿ ಸ್ವತ: ಮಯೂರ ಶೇಲ್ಕೆ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು. ಮಗುವನ್ನು ಎತ್ತಿ ಮೇಲಕ್ಕೆ ಹಾಕಿ ತಾವು ಮೇಲೆ ಹತ್ತಲು ಸ್ವಲ್ಪ ತಡವಾಗಿದ್ದರೂ ಮಯೂರ್ ಪ್ರಾಣ ಕಳೆದುಕೊಳ್ಳಬೇಕಿತ್ತು. ತನ್ನ ಪ್ರಾಣದ ಹಂಗು ತೊರೆದು ಮಗುವಿನ ಪ್ರಾಣ ರಕ್ಷಿಸಿದ ಮಯೂರ್ ಶೇಲ್ಕೆರಿಗೆ ಈಗ ಗೌರವ ಸಲ್ಲಿಸಿ ಅಭಿನಂದಿಸಲಾಗಿದೆ. ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿ ಪ್ರಶಂಸಿದ್ದ ರೈಲ್ವೇ ಸಚಿವ ಪಿಯೂಷ್ ಗೋಯಲ್ ʼ  ಮಗುವಿನ ಪ್ರಾಣವನ್ನು ರಕ್ಷಿಸಿದ ಮಯೂರ್ ಜೊತೆ ಮಾತನಾಡಿ ಅವರ ಸಾಹಸಮಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಪಡಿಸಿದ್ದೇನೆ. ಅಲ್ಲದೇ ಇಡೀ ರೇಲ್ವೆ ಪರಿವಾರಕ್ಕೆ ನಿಮ್ಮ ಮೇಲೆ ಗೌರರವಿದೆ ಎಂದು ಹೇಳಿದ್ದೇನೆ. ಒಂದು ಮಗುವಿನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಈ ಯುವಕ ʼ ನಾನು ಕೇವಲ ನನ್ನ ಜವಾಬ್ಬಾರಿ ನಿಭಾಯಿಸುತ್ತಿದ್ದೇನೆʼ ಎಂದು ಹೇಳಿದ. ಅವರ ಈ ಕಾರ್ಯವನ್ನು ಯಾವುದೇ ಪುರಸ್ಕಾರ ಅಥವಾ ಹಣಕ್ಕೆ ತುಲನೆ ಮಾಡಲು ಸಾದ್ಯವಿಲ್ಲ. ಆದರೆ ತಮ್ಮ ಜವಾಬ್ದಾರಿ ನಿಭಾಯಿಸಿದ್ದಕ್ಕಾಗಿ ಮತ್ತು ತಮ್ಮ ಈ ಕಾರ್ಯದ ಮೂಲಕ  ಮಾನವತ್ವವನ್ನು ತೋರಿಸಿದ್ದಕ್ಕಾಗಿ ಅವರಿಗೆ ಪುರಸ್ಕಾರ ಮಾಡಲಾಗುವುದುʼ ಎಂದು ಹೇಳಿದ್ದಾರೆ.

ʼನಾನು ಮಗುವಿನಿಂದ ಸುಮಾರು 60 ಮೀಟರ್ ಅಂತರದಲ್ಲಿದ್ದೆ . ನಾನು ಕೆಂಪು ಧ್ವಜವನ್ನು ತೋರಿಸಿದ್ದರೂ ರೈಲು ಮಗುವನ್ನು ದಾಟಿ ಹೋಗುತ್ತಿತ್ತು. ಏಕೆಂದರೆ ಮಗು ಮತ್ತು ರೈಲಿನ ಮಧ್ಯದ ಅಂತರ ತುಂಬಾ ಕಡಿಮೆ ಇತ್ತು ಜೊತೆಗ ರೈಲಿನ ವೇಗವು ಹೆಚ್ಚಿತ್ತು, ಹಾಗಾಗಿ ಮಗುವಿನ ಪ್ರಾಣ ರಕ್ಷೀಸಬೇಕೆಂದು ರೇಲ್ವೆ ಹಳಿಗೆ ಹಾರಿದೆ. ಮಧ್ಯ ನನಗೆ ಸ್ವಲ್ಪ ಭಯವಾಯಿತು ಆದರೆ ಧೈರ್ಯ ಮಾಡಿ ಮುಂದೆ ಸಾಗಿ ಮಗುವನ್ನು ಎತ್ತಿ ಪ್ರಾಟ್ಫಾರ್ಮ್ ಮೇಲೆ ಹಾಕಿದೆ. ಇದಾದ ಸುಮಾರು 15 ನಿಮಿಷಗಳ ಕಾಲ ನಾನು ದಿಗ್ಭ್ರಾಂತನಾಗಿದ್ದೆ. ಆದರೆ ಎಲ್ಲರೂ ಪ್ರಶಂಸಿಸಲೂ ಆರಂಭಿಸಿದ ಮೇಲೆ ಸಮಾಧಾನಗೊಂಡೆʼ ಎಂದು ಮಗುವಿನ ಪ್ರಾಣ ಉಳಿಸಿದ್ದ ಮಯೂರ್ ಶೇಲ್ಕೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!