ಸೀರಂಗೆ 3000 ಕೋಟಿ, ಭಾರತ್‌ ಬಯೋಟೆಕ್‌ಗೆ 1500 ಕೋಟಿ ರು. ನೆರವು!

By Suvarna NewsFirst Published Apr 20, 2021, 12:31 PM IST
Highlights

ಸೀರಂಗೆ 3000 ಕೋಟಿ, ಭಾರತ್‌ ಬಯೋಟೆಕ್‌ಗೆ 1500 ಕೋಟಿ ರು. ನೆರವು| ಲಸಿಕೆ ಉತ್ಪಾದನೆ ಹೆಚ್ಚಿಸಲು ಕೇಂದ್ರದಿಂದ ನೆರವು ಘೋಷಣೆ

ನವದೆಹಲಿ(ಏ.20): ಲಸಿಕೆ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಿಂದ ಸೀರಂ ಇನ್‌ಸ್ಟಿಟ್ಯೂಟ್‌ ಹಾಗೂ ಭಾರತ್‌ ಬಯೋಟೆಕ್‌ಗೆ ಕೇಂದ್ರ ಸರ್ಕಾರ ಸಾಲ ರೂಪದ ನೆರವು ಘೋಷಿಸಿದೆ.

ಅದರಂತೆ ಸೀರಂ ಇನ್‌ಸ್ಟಿಟ್ಯೂಟ್‌ 3,000 ಕೋಟಿ ರು. ಹಾಗೂ ಭಾರತ್‌ ಬಯೋಟೆಕ್‌ 1,500 ಕೋಟಿ ರು. ಸಾಲ ರೂಪದ ನೆರವು ಪಡೆದುಕೊಳ್ಳಲಿವೆ. ಆತ್ಮನಿರ್ಭರ ಭಾರತ 3.0 ಕೋವಿಡ್‌ ಸುರಕ್ಷಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾರತ್‌ ಬಯೋಟೆಕ್‌ನ ಬೆಂಗಳೂರಿನ ಲಸಿಕೆ ಉತ್ಪಾದನೆ ಘಟಕಕ್ಕೆ ಕೇಂದ್ರ ಸರ್ಕಾರ 65 ಕೋಟಿ ರು. ಹಣಕಾಸು ನೆರವು ಘೋಷಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

click me!