ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ; ಲಿಕ್ವಿಡ್ ಆಕ್ಸಿನ್ ಹಾಗೂ ಸಿಲಿಂಡರ್ ಸರಬರಾಜು!

By Suvarna News  |  First Published Apr 18, 2021, 7:00 PM IST

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿನ್ ಸಿಲಿಂಡರ್  ಸೇರಿದಂತೆ ಹಲವು ಅಭಾವ ಕೇಂದ್ರದ ತಲೆನೋವು ಹೆಚ್ಚಿಸಿದೆ. ಇದೀಗ ಭಾರತೀಯ ರೈಲ್ವೇ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಮೂಲೆ ಮೂಲೆಗೂ ಲಿಕ್ವಿಡ್ ಮೆಡಿಕಲ್ ಆಕ್ಸಿನ್ ಹಾಗೂ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ(ಏ.18): ಕೊರೋನಾ ವೈರಸ್ ದೇಶದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣಗಾಡುತ್ತಿದೆ.  ಇದರ ನಡುವೆ ಕೇಂದ್ರ ಸರ್ಕಾರ ದೇಶದ ಎಲ್ಲಾ ಭಾಗಗಳಲ್ಲಿ ಆಸ್ಪತ್ರೆ, ಬೆಡ್, ಐಸಿಯೂ, ವೈದ್ಯಕೀಯ ಸಲಕರಣೆಗಳ ಕೊರತೆಯಾಗದಂತೆ ನೋಡಿಕೊಳ್ಳವುದೇ ಬಹುದೊಡ್ಡ ತಲೆನೋವಾಗಿದೆ. ಇದೀಗ ಭಾರತೀಯ ರೈಲ್ವೇ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಎಲ್ಲಾ ಭಾಗದಕ್ಕೆ ಲಿಕ್ವಿಡ್ ಮೆಡಿಕಲ್ ಆಕ್ಸಿನ್ ಹಾಗೂ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಲು ಮುಂದಾಗಿದೆ.

"

Tap to resize

Latest Videos

undefined

ಕೊರೋನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ!

ಕೋವಿಡ್ ಸೋಂಕಿತರಿಗೆ ಆಮ್ಲಜನಕ ಲಭ್ಯತೆ ಅತೀ ಅವಶ್ಯಕವಾಗಿದೆ. ಆದರೆ ನಗರದಲ್ಲಿನ ಹಲವು ಆಸ್ಪತ್ರೆಗಳು ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಿಸುತ್ತಿದೆ. ಹೀಗಾಗಿ ಮಹರಾಷ್ಟ್ರ ಹಾಗೂ ಮಧ್ಯ ಪ್ರದೇಶ ಸರ್ಕಾರ ರೈಲಿನ ಮೂಲಕ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವೇ ಎಂದು ಈ ಹಿಂದೆ ಸಂಪರ್ಕಿಸಿತ್ತು. ಈ ಕುರಿತು ತಾಂತ್ರಿಕತೆ ಹಾಗೂ ಇತರ ವಿಚಾರಗಳನ್ನು ಪರಿಶೀಲನೆ ನಡೆಸಿದ ರೈಲ್ವೇ ಇಲಾಖೆ ಈ ಕುರಿತು ತ್ವರಿತಗತಿಯಲ್ಲಿ ಕಾರ್ಯಚರಣೆ ಆರಂಭಿಸಿತು.

ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಾಗೂ ಆಕ್ಸಿಜನ್ ಸಿಲಿಂಡರ್ ಸರಬರಾಜಿಗೆ ಆಕ್ಸಿನ್ ಎಕ್ಸ್‌ಪ್ರೆಸ್ ರೈಲು ಸಜ್ಜುಗೊಳಿಸಲಾಗಿದೆ. ಇದಕ್ಕಾಗಿ ಅಡೆ ತಡೆ ಇಲ್ಲದ ಗ್ರೀನ್ ಕಾರಿಡಾರ್ ರೂಪಿಸಲಾಗಿದೆ. ಕೆಲ ತಾಂತ್ರಿಕ ಪ್ರಯೋಗದ ಬಳಿಕ  ಖಾಲಿ ಟ್ಯಾಂಕರ್‌ಗಳನ್ನು ಕಲಂಬೋಲಿ / ಬೋಯಿಸರ್, ಮುಂಬೈ ಮತ್ತು ಹತ್ತಿರದ ರೈಲ್ವೆ ನಿಲ್ದಾಣಗಳಿಂದ ಸ್ಥಳಾಂತರಿಸಲಾಗುತ್ತದೆ. ಲಿಕ್ವಿಡ್  ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ಲೋಡ್ ಮಾಡಲು ವೈಜಾಗ್ ಮತ್ತು ಜಮ್‌ಶೆಡ್ಪುರ / ರೂರ್ಕೆಲಾ / ಬೊಕಾರೊಗೆ ಕಳುಹಿಸಲಾಗುತ್ತದೆ.  

ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿ ಡ್ಯಾನ್ಸ್; ವಿಡಿಯೋ ವೈರಲ್!.

ರೈಲು ಸಂಚರಿಸುವ ಮಾರ್ಗ ಕ್ಲೀಯರ್ ಮಾಡಲಾಗಿದೆ . ಕ್ರಯೋಜೆನಿಕ್ ಟ್ಯಾಂಕರ್‌ಗಳಲ್ಲಿ LMOನ RO RO ಚಲನೆಗೆ ವಾಣಿಜ್ಯ ಬುಕಿಂಗ್ ಮತ್ತು ಸರಕು ಪಾವತಿಯನ್ನು ಸಕ್ರಿಯಗೊಳಿಸುವ ಸಲುವಾಗಿ, ರೈಲ್ವೆ ಸಚಿವಾಲಯವು ಏಪ್ರಿಲ್ 16 ರಂದು ಸುತ್ತೋಲೆಯನ್ನು ಹೊರತಂದಿದೆ.

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್

ಆಕ್ಸಿನ್ ಸಿಲಿಂಡರ್ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಲೋಡ್ ಮಾಡಲು,  ವೈಝಾಗ್, ಅಂಗುಲ್, ಭಲೈನಲ್ಲಿ ಲೋಡಿಂಗ್ ರಾಂಪ್ ನಿರ್ಮಸಲಾಗಿದೆ.  ಏಪ್ರಿಲ್ 19ಕ್ಕೆ ಕಲಂಬೋಲಿ ರಾಂಪ್ ಸಿದ್ದವಾಗಲಿದೆ. ರೈಲ್ವೆ ಮೂಲಕ ಆಮ್ಲಜನಕದ ಚಲನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಪೂರ್ವಭಾವಿಯಾಗಿ ಸಹಾಯ ಮಾಡುವಂತೆ ನಿರ್ದೇಶಿಸಿದೆ . ಸಂಪೂಪ್ಣ ಸರಬರಾಜು ಮೇಲ್ವಿಚಾರಣೆಗೆ ರೈಲ್ವೆ ಮಂಡಳಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

click me!