
ನವದೆಹಲಿ[ನ.23]: ದೆಹಲಿ-ಲಖನೌ ಮಾರ್ಗದ ತೇಜಸ್ ಎಕ್ಸ್‌ಪ್ರೆಸ್ ರೈಲು ಖಾಸಗಿಕರಣಗೊಂಡ ಬೆನ್ನಲ್ಲೇ, ಈ ರೈಲಿನ ಪ್ರಯಾಣದ ವೇಳೆ ಪ್ರಯಾಣಿಕರ ಮನೆಯಲ್ಲಿ ಕಳುವಾದರೆ, ಅಂಥ ಪ್ರಯಾಣಿಕರಿಗೆ 1 ಲಕ್ಷ ರು.ವರೆಗೂ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಪ್ರಯಾಣಿಕರು ಮನೆಯ ಕಡೆಗಿನ ಚಿಂತೆಗಳಿಲ್ಲದೆ ನೆಮ್ಮದಿಯಾಗಿ ಸುಖಕರವಾಗಿ ಸಂಚರಿಸಲಿ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ. ಪ್ರಯಾಣಿಕರಿಗೆ ಉಚಿತವಾಗಿ ಈ ವಿಮೆ ಸೌಲಭ್ಯ ಕಲ್ಪಿಸಲು ಐಆರ್‌ಸಿಟಿಸಿ ನಿರ್ಧರಿಸಿರುವುದು ವಿಶೇಷ ಸಂಗತಿ.
ಈ ವಿಮೆ ಸೌಲಭ್ಯ ಪಡೆಯಲು ರೈಲು ಪ್ರಯಾಣದ ವೇಳೆ ತಮ್ಮ ಮನೆಯಲ್ಲಿ ಕಳವು ನಡೆದಿದೆ ಎಂಬುದರ ಬಗ್ಗೆ ದೂರು ದಾಖಲಿಸಬೇಕು. ರೈಲು ಪ್ರಯಾಣದ ವೇಳೆಯೇ ಪ್ರಯಾಣಿಕರ ಮನೆಯಲ್ಲಿ ಕಳವು ಪ್ರಕರಣ ನಡೆದಿರುವುದು ಸಾಬೀತಾದರೆ, ಅಂಥ ಪ್ರಯಾಣಿಕರಿಗೆ ವಿಮೆ ಹಣವನ್ನು ಪಾವತಿಸಲಾಗುತ್ತದೆ. ಈ ಕುರಿತಾದ ಒಪ್ಪಂದಕ್ಕೆ ಐಆರ್‌ಸಿಟಿಸಿಯು ಲಿಬರ್ಟಿ ಜನರಲ್ ಇನ್ಶುರೆನ್ಸ್ ಕಂಪನಿ ಲಿ. ಜೊತೆ ಒಪ್ಪಂದ ಮಾಡಿಕೊಂಡಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಖಾಸಗೀಕರಣಗೊಳ್ಳಲಿರುವ ಮುಂಬೈ-ಅಹಮದಾಬಾದ್ ಮಾರ್ಗದ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲೂ ಈ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಐಆರ್‌ಸಿಟಿಸಿ ಚಿಂತನೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ