ಕಾಲರ್‌ ಟ್ಯೂನ್‌ಗೆ ಸೋಂಕಿತ ಅಮಿತಾಬ್‌ ಧ್ವನಿ ಬೇಡ: ಹೈ ಕೋರ್ಟ್‌ನಲ್ಲಿ ಅರ್ಜಿ

By Suvarna News  |  First Published Jan 8, 2021, 3:23 PM IST

ಸ್ವತಃ ಕೊರೋನಾ ಸೋಂಕಿಗೆ ತುತ್ತಾದ ಅಮಿತಾಭ್‌ ಬಚ್ಚನ್‌ ಅವರ ಧ್ವನಿ ಇರುವ ಕಾಲರ್‌ ಟ್ಯೂನ್‌ಅನ್ನು ತೆಗೆದು ಹಾಕಲು ಡೆಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ನವದೆಹಲಿ(ಜ.08): ಕೊರೋನಾ ವೈರಸ್‌ ಜಾಗೃತಿ ಕುರಿತಂತೆ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರ ಧ್ವನಿ ಇರುವ ಕಾಲರ್‌ ಟ್ಯೂನ್‌ಅನ್ನು ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. 

ಸ್ವತಃ ಬಚ್ಚನ್‌ ಮತ್ತು ಅವರ ಕುಟುಂಬ ಸದಸ್ಯರೇ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರ ಬಳಿ ಮುಂಜಾಗ್ರತೆ ಕುರಿತು ಸಲಹೆ ನೀಡುವುದು ಸರಿಯಲ್ಲ. ಬೇರೆಯವರು ಉಚಿತವಾಗಿ ಈ ಸೇವೆಗೆ ಸಿದ್ಧರಿರುವಾಗ ಬಚ್ಚನ್‌ಗೆ ಹಣ ಕೊಟ್ಟು ಸೇವೆ ಪಡೆದಿದ್ದು ಸರಿಯಲ್ಲ ಎಂದು ರಾಕೇಶ್‌ ಎಂಬ ಸಾಮಾಜಿಕ ಕಾರ್ಯಕರ್ತ ಈ ಅರ್ಜಿ ಸಲ್ಲಿಸಿದ್ದಾರೆ.

Latest Videos

undefined

ಕರ್ನಾಟಕದಲ್ಲಿ ಕೊರೋನಾ: ಜ.07ರ ಅಂಕಿ-ಸಂಖ್ಯೆ ಇಲ್ಲಿದೆ

ಖ್ಯಾತ ಕೊರೋನಾ ವಾರಿಯರ್‌ಗಳು ಉಚಿತವಾಗಿ ಕೊರೋನಾ ಕಾಲರ್ ಟ್ಯೂನ್‌ಗೆ ತಮ್ಮ ಧ್ವನಿ ನೀಡಲು ಸಿದ್ದರಿದ್ದಾರೆ. ಹೀಗಿರುವಾಗ ಬಚ್ಚನ್ ಅವರಿಗೇಕೆ ಹಣ ನೀಡಿ ಅವರಿಂದ ಸೇವೆ ಪಡೆಯತ್ತಿರುವುದೇಕೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಜಸ್ಟೀಸ್ ಡಿ.ಎನ್‌. ಪಟೇಲ್‌ ಹಾಗೂ ಜಸ್ಟೀಸ್‌ ಜ್ಯೋತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಜನವರಿ 18ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. 
 

click me!