ರೈಲಿನ ಕಸವನ್ನು ಹಳಿಯಲ್ಲೇ ಚೆಲ್ಲಿದ ಸಿಬ್ಬಂದಿ, ವೈರಲ್ ವಿಡಿಯೋ ಬೆನ್ನಲ್ಲೇ ಎಚ್ಚೆತ್ತ ಇಲಾಖೆ!

Published : Sep 13, 2023, 06:53 PM IST
ರೈಲಿನ ಕಸವನ್ನು ಹಳಿಯಲ್ಲೇ ಚೆಲ್ಲಿದ ಸಿಬ್ಬಂದಿ, ವೈರಲ್ ವಿಡಿಯೋ ಬೆನ್ನಲ್ಲೇ ಎಚ್ಚೆತ್ತ ಇಲಾಖೆ!

ಸಾರಾಂಶ

ರೈಲು ಬೋಗಿಯ ಕಸಗಳನ್ನು ತೆಗೆದು ರೈಲು ಹಳಿ ಹಾಗೂ ಪರಿಸಕ್ಕೆ ಚೆಲ್ಲಿದ ರೈಲ್ವೇ ಸಿಬ್ಬಂದಿಗಳ ನಡೆ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಈ ಕುರಿತು ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಲಾಖೆ ಕ್ರಮಕ್ಕೆ ಮುಂದಾಗಿದೆ.    

ನವದೆಹಲಿ(ಸೆ.13) ಭಾರತೀಯ ರೈಲ್ವೇ ಕಳೆದ ಕೆಲ ವರ್ಷಗಳಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಹೊಸ ರೈಲು, ಅತ್ಯುತ್ತಮ ಸೇವೆ, ಆನ್‌ಲೈನ್ ಬುಕಿಂಗ್ ಸೇರಿದಂತೆ ಹಲವು ವ್ಯವಸ್ಥೆಗಳು ಸುಧಾರಿಸಿದೆ. ಆದರೆ ಕೆಲ ಸಮಯ ಪ್ರಜ್ಞೆಗಳು, ಶುಚಿತ್ವದ ವಿಚಾರದಲ್ಲಿರಬೇಕಾದ ಶ್ರದ್ಧೆ ಬದಲಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದೆ. ಚಲಿಸುತ್ತಿರುವ ರೈಲಿನಲ್ಲಿ ಬೋಗಿಗಳ ಶುಚಿ ಮಾಡುತ್ತಿದ್ದ ಸಿಬ್ಬಂದಿ, ಪ್ಲಾಸ್ಟಿಕ್ ಬಾಟಲಿ ಸೇರಿದಂತೆಹಲವು ಕಸಗಳನ್ನು ನೇರವಾಗಿ ರೈಲಿನಿದ ಹೊರಕ್ಕೆ ಎಸೆದಿದ್ದಾರೆ.  ಈ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈಲ್ವೇ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಸ್ವಚ್ಚ ಭಾರತ ಅಭಿಯಾನ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮ ಮಾಡಿದರೂ ಸರ್ಕಾರದ ಸಿಬ್ಬಂದಿಗಳೇ ನಿರ್ಲಕ್ಷ್ಯವಹಿಸುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನ ಬೋಗಿಯಲ್ಲಿ ರೈಲ್ವೇ ಸಿಬ್ಬಂದಿಗಳು ಶುಚಿತ್ವ ಕಾರ್ಯದಲ್ಲಿ ತೊಡಗಿದ್ದಾರೆ. ರೈಲಿನ ಸೀಟು ಸೇರಿದಂತೆ ಎಲ್ಲೆಡೆ ಬಿದ್ದಿದ್ದ ಕಸಗಳನ್ನು ತೆಗೆದು ನೇರವಾಗಿ ಹೊರಕ್ಕೆ ಎಸೆದಿದ್ದಾರೆ.

ಕಾಸು ಕೊಡಲಿಲ್ಲ ಅಂತ ಹಾವನ್ನೇ ಬೋಗಿಯೊಳಗೆ ಬಿಟ್ಟ: ಹಾವಾಡಿಗನ ಅವಾಂತರಕ್ಕೆ ರೈಲು ಪ್ರಯಾಣಿಕರು ಸುಸ್ತು

ರೈಲು ಚಲಿಸುತ್ತಿರುವಾಗಲೇ ಕಸಗಳನ್ನು ಹೊರಗಡೆ ಚೆಲ್ಲಿದ್ದಾರೆ. ರೈಲು ಹಳಿ ಹಾಗೂ ಪರಿಸರಕ್ಕೆ ಈ ಕಸಗಳನ್ನು ಚೆಲ್ಲಲಾಗಿದೆ. ಕಸದ ಚೀಲಕ್ಕೆ ತುಂಬಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಪದ್ಧತಿ ರೈಲ್ವೇ ಇಲಾಖೆಯಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೈಲು ಬೋಗಿಗಳಲ್ಲಿನ ಟನ್‌ಗಟ್ಟಲೇ ಕಸಗಳನ್ನು ಇದೇ ರೀತಿ ವಿಲೇವಾರಿ ಮಾಡಲಾಗುತ್ತಿದೆ. ರೈಲು ಬೋಗಿಗಳ ಶುಚಿಗೊಳಿಸುವ ಸಿಬ್ಬಂದಿಗಳು ವಿಲೇವಾರಿ ಮಾಡಿದ ಉದಾಹರಣೆಗಳಿಲ್ಲ. ಬಹುತೇಕ ಎಲ್ಲಾ ರೈಲಿನಲ್ಲೂ ಇದೇ ರೀತಿ ಸಂಭವಿಸುತ್ತಿದೆ ಎಂದು ರೈಲು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

 

 

ವಂದೇ ಭಾರತ್ ಹಾಗೂ ತೇಜಸ್ ರೈಲು ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ರೈಲುಗಳಲ್ಲಿ ಇದೇ ಪರಿಪಾಠವಿದೆ.  ಯಾರೂ ಕೂಡ ಕಲ ವಿಲೇವಾರಿ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಶುಚಿತ್ವದ ಪಾಠ ಹೇಳಿ ರೈಲ್ವೇ ಇಲಾಖೆ ಹೀಗೆ ಮಾಡಿದರೆ ಹೇಗೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

ಗಣೇಶ ಹಬ್ಬಕ್ಕೆ ಕನ್ನಡಿಗರಿಗೆ ಗುಡ್ ನ್ಯೂಸ್, ವಿಶೇಷ ಟ್ರೈನ್ ಘೋಷಿಸಿದ ನೈರುತ್ಯ ರೈಲ್ವೇ!

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ರೈಲ್ವೆ ಇಲಾಖೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದೆ. ಈ ರೈಲಿನ ನಂಬರ್, ದಿನಾಂಕ ಕುರಿತು ಮಾಹಿತಿ ನೀಡಿ. ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದೆ. ಆದರೆ ರೈಲ್ವೇ ಇಲಾಖೆ ಪ್ರತಿಕ್ರಿಯೆಗೂ ಟೀಕೆಗಳು ವ್ಯಕ್ತವಾಗಿದೆ. ಇದು ಒಂದು ರೈಲಿನ ಕತೆಯಲ್ಲ ಬಹುತೇಕ ಎಲ್ ರೈಲಿನಲ್ಲಿ ಇದೇ ರೀತಿ ಆಗುತ್ತಿದೆ. ನೀವು ಶುಚಿತ್ವದ ಜವಾಬ್ದಾರಿ ವಹಿಸಿಕೊಂಡಿರುವ ಸಿಬ್ಬಂದಿಗಳನ್ನು ಪ್ರಶ್ನಿಸಿ. ಇದುವರೆಗೆ ಏಷ್ಟು ಬ್ಯಾಗ ಕಸ ಸಂಗ್ರಹಿಸಿದ್ದಾರೆ ಎಂದು ಕೇಳಿದರೆ ಉತ್ತರ ಶೂನ್ಯ ಎಂದು ಟ್ವಿಟರ್‌ನಲ್ಲಿ ತಿರೇಗೇಟು ನೀಡಿದ್ದಾರೆ.

ಭಾರತೀಯ ರೈಲ್ವೇಯಲ್ಲಿ ಹಲವು ಬದಲಾವಣೆ ಆಗಿದೆ. ರೈಲು ವಿದ್ಯುದ್ದೀಕರಣ, ಸೇವೆಗಳನ್ನು ಉನ್ನತ ದರ್ಜೆಗೆ ಏರಿಸಿರುವುದು ಸೇರಿದಂತೆ ಹಲವು ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಸ್ವಚ್ಚ ಭಾರತ ಅಭಿಯಾನದ ಪೋಸ್ಟರ್ ಎಲ್ಲಡೆ ಕಾಣಲಿದೆ. ಆದರೆ ನಿಜವಾದ ಸ್ವಚ್ಚತೆ, ವಿಲೇವಾರಿ ಮಾತ್ರ ಇದುವರೆಗೂ ಆಗಿಲ್ಲ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್