ರೈತರಿಂದ 4 ಗಂಟೆ ರೈಲ್ ರೋಕೋ | ಕೇವಲ ಸಾಂಕೇತಿಕ ಪ್ರತಿಭಟನೆಗಷ್ಟೇ ರೈಲು ತಡೆ ಸೀಮಿತ
ನವದೆಹಲಿ(ಫೆ.19): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ, ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದ ರೈತರ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಗುರುವಾರ ದೇಶದೆಲ್ಲೆಡೆ ರೈಲು ರೋಕೋ ನಡೆಸಿದವು.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ನಡೆದ ರೈಲು ತಡೆಗೆ ಪಂಜಾಬ್ ಹಾಗೂ ಹರ್ಯಾಣ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಮಹಾರಾಷ್ಟ್ರ, ಮಧ್ಯ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿಯೂ ರೈಲು ತಡೆ ನಡೆಸಲಾಯಿತು.
ಲಡಾಖ್‌ನಲ್ಲಿ ಸ್ವಲ್ಪದರಲ್ಲೇ ತಪ್ಪಿತು ಯುದ್ಧ!
ಜ.26ರಂದು ದೆಹಲಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಹಿಂಸಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ರೈಲ್ ರೋಕೋ ವೇಳೆ ರೈಲು ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ದೇಶದೆಲ್ಲೆಡೆ ಶಾಂತಿಯುತವಾಗಿ ತೈಲು ತಡೆ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ವರದಿ ಆಗಿಲ್ಲ.
ಹಲವು ಕಡೆ ರೈತ ಮಹಿಳೆಯರೂ ಪ್ರತಿಭಟನೆಯಲ್ಲಿ ಭಾಗಿಯಾಗದರು. ರೈಲು ಮಾರ್ಗದಲ್ಲಿಯೇ ಟೆಂಟ್ ಹಾಕಿ ಪ್ರತಿಭಟನೆ ನಡೆಸಲಾಗಿತ್ತು. ಪೊಲೀಸ್ ಬಂದೋಬಸ್ತ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲಾಗಿದೆ.
ಅಲ್ಲದೇ ರೈತರ ರೈಲು ತಡೆಯಿಂದ ರೈಲು ಸಂಚಾರಕ್ಕೆ ಯಾವುದೇ ವ್ಯತ್ಯಯ ಆಗಿಲ್ಲ. 4 ಗಂಟೆಗೆ ರೈಲು ತಡೆ ಮುಗಿದ ಬಳಿಕ ಒಂದು ಗಂಟೆಯ ಅಂತರದಲ್ಲೇ ರೈಲು ಸಂಚಾರ ಸಹಜ ಸ್ಥಿತಿಗೆ ಮರಳಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
100 ರು. ಗಡಿ ದಾಟಿದ ಪೆಟ್ರೋಲ್ ದರ : ಅತೀ ಹೆಚ್ಚು ದಾಖಲೆ
ಇದೇ ವೇಳೆ ರೈಲ್ ರೋಕೋ ಹಿನ್ನೆಲೆಯಲ್ಲಿ ಟಿಕ್ರಿ ಗಡಿಯಲ್ಲಿ ದೆಹಲಿ ಮೊಟ್ರೋ ರೈಲು ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರವನ್ನು ಬಂದ್ ಮಾಡಲಾಗಿತ್ತು.