ರಾಹುಲ್‌ ಇಂದಿನ ಭಾರತದ ಮೀರ್‌ ಜಾಫರ್‌: ಬಿಜೆಪಿ

Published : Mar 22, 2023, 06:24 AM ISTUpdated : Mar 22, 2023, 03:02 PM IST
 ರಾಹುಲ್‌ ಇಂದಿನ ಭಾರತದ ಮೀರ್‌ ಜಾಫರ್‌: ಬಿಜೆಪಿ

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭಾರತೀಯ ರಾಜಕೀಯದ ಇಂದಿನ ‘ಮೀರ್‌ ಜಾಫರ್‌’ ಎಂದು ಬಿಜೆಪಿ ಮಂಗಳವಾರ ಕರೆದಿದೆ ಹಾಗೂ ಇವರು ‘ಭಾರತದ ನವಾಬ್‌’ ಆಗಲು ವಿದೇಶಿ ಶಕ್ತಿಗಳ ಸಹಾಯ ಕೋರಿ ವಿದೇಶಕ್ಕೆ ತೆರಳಿದ್ದರು ಎಂದು ಕಿಡಿಕಾರಿದೆ.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭಾರತೀಯ ರಾಜಕೀಯದ ಇಂದಿನ ‘ಮೀರ್‌ ಜಾಫರ್‌’ ಎಂದು ಬಿಜೆಪಿ ಮಂಗಳವಾರ ಕರೆದಿದೆ ಹಾಗೂ ಇವರು ‘ಭಾರತದ ನವಾಬ್‌’ ಆಗಲು ವಿದೇಶಿ ಶಕ್ತಿಗಳ ಸಹಾಯ ಕೋರಿ ವಿದೇಶಕ್ಕೆ ತೆರಳಿದ್ದರು ಎಂದು ಕಿಡಿಕಾರಿದೆ. ಅವರು ಕ್ಷಮೆ ಕೇಳುವವರಗೆ ಬಿಜೆಪಿ ಸುಮ್ಮನಿರಲ್ಲ ಎಂದಿದೆ.
ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ (BJP spokesperson Sambit Patra) ಮಾತನಾಡಿ, ‘ರಾಹುಲ್‌ ಗಾಂಧಿ ಅವರನ್ನು ಭಾರತೀಯ ರಾಜಕೀಯದ ಮೀರ್‌ ಜಾಫರ್‌ ಎಂದರೆ ಅಪಭ್ರಂಶವಾಗುವುದಿಲ್ಲ. ಲಂಡನ್‌ನಲ್ಲಿ ಅವರು ಮಾಡಿರುವುದು ಮೀರ್‌ ಜಾಫರ್‌ ಕೆಲಸವನ್ನೇ’ ಎಂದು ಆರೋಪಿಸಿದರು.

‘ರಾಹುಲ್‌ ಗಾಂಧಿ ಕೂಡ ತಮ್ಮ ಲಂಡನ್‌ ಭೇಟಿಯ (London Visit) ಸಂದರ್ಭದಲ್ಲೂ ಅದೇ ಕೆಲಸ ಮಾಡಿದರು. ಅವರು ವಿದೇಶಿ ಪಡೆಗಳನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಿದರು. ಶೆಹಜಾದಾ ನವಾಬ್‌ ಆಗಲು ಈಸ್ವ್‌ ಇಂಡಿಯಾ ಕಂಪನಿಯ ಸಹಾಯ ಕೇಳಿದ್ದಾರೆ’ ಎಂದು ದೂರಿದರು. ‘ಗಾಂಧಿ ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಇದು ಕಾಂಗ್ರೆಸ್‌ ಪಕ್ಷ (Congress Party) ಮತ್ತು ಗಾಂಧಿ ಕುಟುಂಬದ (Gandhi Family) ಸ್ಥಿರವಾದ ಪಿತೂರಿ’ ಎಂದರು.

ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

ಯಾರು ಮೀರ್‌ ಜಾಫರ್‌?

ಸಿರಾಜ್‌ ಉದ್‌-ದೌಲಾ (siraj ud doul) ಅವರ ನೇತೃತ್ವದಲ್ಲಿ ಬಂಗಾಳದ ಸೈನ್ಯದಲ್ಲಿ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ ಮೀರ್‌ ಜಾಫರ್‌ ಈಸ್ಟ್‌ ಇಂಡಿಯಾ ಕಂಪನಿಯ ಬಂಗಾಳದ ಮೊದಲ ನವಾಬನಾಗಿದ್ದ. ಆತ ಪ್ಲಾಸಿ ಕದನದಲ್ಲಿ ಸಿರಾಜ್‌ ಉದ್‌-ದೌಲಾಗೆ ದ್ರೋಹ ಬಗೆದಿದ್ದ. ಇದು ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ದಾರಿ ಮಾಡಿಕೊಟ್ಟಿತ್ತು.

ಸಂಸತ್‌ ಬಿಕ್ಕಟ್ಟು 7ನೇ ದಿನವೂ ಮುಂದುವರಿಕೆ

ಭಾರತದ ಜನತಂತ್ರ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಮಂಗಳವಾರವೂ ಪಟ್ಟು ಹಿಡಿಯಿತು. ಇನ್ನೊಂದೆಡೆ ಅದಾನಿ ಸಮೂಹದ ಅಕ್ರಮಗಳ ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ವಿಪಕ್ಷಗಳು ಕೋಲಾಹಲ ಸೃಷ್ಟಿಸಿದವು. ಇದರ ಪರಿಣಾಮ ಸತತ 7ನೇ ದಿನವೂ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳಿಗೆ ಅಡ್ಡಿ ಆಗಿದ್ದು, ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ರಾಹುಲ್‌ ಕರ್ನಾಟಕ ಪ್ರವಾಸ ಬಳಿಕ ಕಾಂಗ್ರೆಸ್‌ ಪಟ್ಟಿ ಬಿಡುಗಡೆ: ಡಿಕೆಶಿ

ಬಿಕ್ಕಟ್ಟು ಮುಗಿಯುವ ಲಕ್ಷಣ ಕಾಣದ ಕಾರಣ ಸಭಾಧ್ಯಕ್ಷ ಓಂ ಬಿರ್ಲಾ (Om Birla) ಅವರು ಸರ್ವಪಕ್ಷ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕೂಡ ಕಾಂಗ್ರೆಸ್‌ ಹಾಗೂ ಇತರ ಪ್ರತಿಪಕ್ಷಗಳು, ಅದಾನಿ (Govtam adani) ವಿರುದ್ಧ ತನಿಖೆಗೆ ಜೆಪಿಸಿ ರಚನೆ ಆಗಲೇಬೇಕು ಎಂಬ ಪಟ್ಟು ಸಡಿಲಿಸಲಿಲ್ಲ. ಇದನ್ನು ಬಿಜೆಪಿ ಸಂಸದರು ತೀವ್ರವಾಗಿ ವಿರೋಧಿಸಿದರು. ಇದೇ ವೇಳೆ, ರಾಹುಲ್‌ ಅವರಿಗೆ ಮಾತನಾಡಲು ಸಂಸತ್ತಲ್ಲಿ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ (Adhir choudhari) ಕೋರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ