ಟ್ವಿಟರ್‌ನಲ್ಲಿ 1 ಕೋಟಿ ಬೆಂಬಲಿಗರು; ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸಂಭ್ರಮಾಚರಣೆ

By divya perlaFirst Published Jul 10, 2019, 3:35 PM IST
Highlights

ಟ್ವಿಟರ್‌ನಲ್ಲಿ ಬೆಂಬಲಿಗರ ಸಂಖ್ಯೆ 1 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ.

ನವದೆಹಲಿ: ಟ್ವಿಟರ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿಗರ ಸಂಖ್ಯೆ 1ಕೋಟಿ ದಾಟಿದ್ದು, ಅಮೇಥಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಸ್ಮೃತಿ ಇರಾನಿ ಎದುರಾಗಿ ಸೋಲು ಕಂಡ ನಂತರ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅಮೇಥಿಗೆ ಭೇಟಿ ನೀಡುತ್ತಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಬೆಂಬಲಿಗರ ಸಂಖ್ಯೆ 10 ಮಿಲಿಯನ್ ಅಂದರೆ 1 ಕೋಟಿ ದಾಟಿದೆ. ಇದಕ್ಕಾಗಿ ರಾಹುಲ್ ಗಾಂಧಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. '1 ಕೋಟಿ ಟ್ವಿಟರ್ ಬೆಂಬಲಿಗರು- ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂದು ಅಮೇಥಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ನಾನು ಈ ಸಂಭ್ರಮವನ್ನು ಆಚರಿಸಲಿದ್ದೇನೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

10 Million Twitter followers - thank you to each and every one of you! 🙏🙏

I will celebrate the milestone in Amethi, where I will be meeting our Congress workers & supporters today.

— Rahul Gandhi (@RahulGandhi)

ಕಳೆದ ವರ್ಷ ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಬೆಂಬಲಿಗರನ್ನು ಹೊಂದಿದ ಖ್ಯಾತಿಗೆ ಪಾತ್ರರಾಗಿದ್ದರು. ಇದೀಗ ಶಶಿ ತರೂರ್ 6.9 ದಶಲಕ್ಷ ಬೆಂಬಲಿಗರನ್ನಷ್ಟೇ ಹೊಂದಿದ್ದು, ಅವರನ್ನು ಹಿಂದಿಕ್ಕಿ ರಾಹುಲ್ ಗಾಂಧಿ ಮುಂದೆ ಬಂದಿದ್ದಾರೆ. ಆದರೂ ರಾಹುಲ್ ಗಾಂಧಿ ಟ್ವಿಟರ್ ಬೆಂಬಲಿಗರನ್ನು ಹೊಂದುವುದರಲ್ಲಿ ಪ್ರಧಾನಿ ಮೋದಿಗಿಂತ ಬಹಳಷ್ಟು ಹಿಂದಿದ್ದಾರೆ. ಮೋದಿಯವರು ಸುಮಾರು 4.8 ಕೋಟಿ ಬೆಂಬಲಿಗರನ್ನು ಹೊಂದಿದ್ದಾರೆ.

ತಾನಾ ಶಾಹೀ ಬಂದ್ ಕರೋ: ಸದನದಲ್ಲಿ ರಾಹುಲ್ ಗುಡುಗು!

click me!