ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್​ನಲ್ಲಿ ಬ್ಯುಸಿಯಾದ ರಾಹುಲ್

Published : Jun 20, 2019, 04:47 PM ISTUpdated : Jun 20, 2019, 05:22 PM IST
ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್​ನಲ್ಲಿ ಬ್ಯುಸಿಯಾದ ರಾಹುಲ್

ಸಾರಾಂಶ

ಮೋದಿ-2 ಸರ್ಕಾರದ ಮೊದಲ ಅಧಿವೇಶನದ ಜಂಟಿ ಸದನವನ್ನು ಉದ್ದೇಶಿಸಿ ಇಂದು (ಗುರುವಾರ) ಸಂಸತ್‌ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡುತ್ತಿದ್ರೆ, ಮತ್ತೊಂದೆಡೆ ರಾಹುಲ್ ಗಾಂಧಿ ಮೊಬೈಲ್​ನಲ್ಲಿ ಬ್ಯುಸಿಯಾಗಿದ್ರು.

ನವದೆಹಲಿ, (ಜೂ.20): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರದ ಪ್ರಮುಖ ಸಾಧನೆಗಳ ಬಗ್ಗೆ ತಮ್ಮ ಭಾಷಣ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಮಾತ್ರ ಮೊಬೈಲ್‌ನಲ್ಲಿ ಫುಲ್ ಮಗ್ನರಾಗಿದ್ದರು.

ಸಂಸತ್​ನ ಮುಂಗಾರು ಅಧಿವೇಶನದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡುವ ವೇಳೆ ಮೊದಲ ಸಾಲಿನಲ್ಲಿ ಕುಳಿತಿದ್ದ ರಾಹುಲ್‌ ಗಾಂಧಿ, 24 ನಿಮಿಷ ತಮ್ಮ ಮೊಬೈಲ್‌ನಲ್ಲಿ ಸ್ಕ್ರೋಲ್‌ ಮಾಡುತ್ತ ಮತ್ತು ಟೈಪ್‌ ಮಾಡುತ್ತಾ, ಮೊಬೈಲ್‌ ನೋಡುತ್ತಲೇ ಕಾಲಕಳೆದಿದ್ದಾರೆ. 

ಉನ್ನತ ಶಿಕ್ಷಣಕ್ಕೆ ಕೇಂದ್ರ ಆದ್ಯತೆ: 2 ಕೋಟಿ ಹೆಚ್ಚುವರಿ ಸೀಟು

ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವರು ರಾಷ್ಟ್ರಪತಿಯವರ ಭಾಷಣಕ್ಕೆ ಬೆಂಬಲಿಸಿ ಟೇಬಲ್ ಕುಟ್ಟಿ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ರಾಹುಲ್‌  ಮಾತ್ರ ಮೊಬೈಲ್‌ ಬಳಸುತ್ತಾ ಕುಳಿತ್ತಿದ್ದರು.

ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಸಂಸನದಲ್ಲಿ ಹೀಗೆ ಮಾಡಿದರೆ ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕಗಳು ವ್ಯಕ್ತವಾಗುತ್ತಿವೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!