ವಿವಾದಿತ ಹೇಳಿಕೆ ನೀಡಿ ಕೋರ್ಟ್ ವಿಚಾರಣೆಯಿಂದ ಗೈರಾದ ರಾಹುಲ್ ಗಾಂಧಿಗೆ ಯುಪಿ ಕೋರ್ಟ್ ಸಮನ್ಸ್!

Published : Dec 16, 2023, 07:52 PM IST
ವಿವಾದಿತ ಹೇಳಿಕೆ ನೀಡಿ ಕೋರ್ಟ್ ವಿಚಾರಣೆಯಿಂದ ಗೈರಾದ ರಾಹುಲ್ ಗಾಂಧಿಗೆ ಯುಪಿ ಕೋರ್ಟ್ ಸಮನ್ಸ್!

ಸಾರಾಂಶ

ವಿವಾದಿತ ಹೇಳಿಕೆ ನೀಡಿ ಕೋರ್ಟ್ ವಿಚಾರಣೆಯಿಂದ ಗೈರಾಗುತ್ತಿರುವ ರಾಹುಲ್ ಗಾಂಧಿಗೆ ಇದೀಗ ಸಂಕಷ್ಟ ಶುರುವಾಗಿದೆ. ಜನವರಿ 6 ರಂದು ತಪ್ಪದೆ ಕೋರ್ಟ್‌ಗೆ ಹಾಜರಾಗುವಂತೆ ಯುಪಿ ಕೋರ್ಟ್ ಸಮನ್ಸ್ ನೀಡಿದೆ.

ಲಖನೌ(ಡಿ.16) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹೊಸ ತಲೆನೋವು ಶುರುವಾಗಿದೆ. 2018ರಲ್ಲಿ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿ ವಿವಾದ ಸೃಷ್ಟಿಸಿದ್ದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದೇ ಗೈರಾಗಿದ್ದ ರಾಹುಲ್ ಗಾಂಧಿಗೆ ಇದೀಗ ಯುಪಿ ಎಂಪಿ ಎಎಲ್‌ಎ ಕೋರ್ಟ್ ಸಮನ್ಸ್ ನೀಡಿದೆ. ಜನವರಿ 6 ರಂದು ಕೋರ್ಟ್‌ಗೆ ಹಾಜರಾಗಿ ಉತ್ತರ ನೀಡಲು ಸಮನ್ಸ್ ನೀಡಲಾಗಿದೆ. 

ಡಿಸೆಂಬರ್ 16 ರಂದು ರಾಹುಲ್ ಗಾಂಧಿಗೆ ಕೋರ್ಟ್‌ಗೆ ಹಾಜರಾಗಿ ಉತ್ತರ ನೀಡಬೇಕಿತ್ತು. ಆದರೆ ಇಂದೂ ಕೂಡ ರಾಹುಲ್ ಗಾಂಧಿ ಕೋರ್ಟ್‌ಗೆ ಗೈರಾಗಿದ್ದಾರೆ. ಹೀಗಾಗಿ ಕೋರ್ಟ್ ಸಮನ್ಸ್ ನೀಡಿದೆ. ಆಗಸ್ಟ್ 4, 2018ರಲ್ಲಿ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕ ವಿಜಯ್ ಮಿಶ್ರಾ ದೂರು ದಾಖಲಿಸಿದ್ದರು. 

ಸಂಸತ್ತಿನ ಭದ್ರತಾ ಲೋಪಕ್ಕೆ ನಿರುದ್ಯೋಗವೇ ಕಾರಣ: ರಾಹುಲ್ ಗಾಂಧಿ

ಈ ಪ್ರಕರಣ ಕುರಿತು ನೆಂಬರ್ 18 ರಂದು ಕೋರ್ಟ್ ವಿಚಾರಣೆ ನಡೆಸಿತ್ತು. ಬಳಿಕ ನವೆಂಬರ್ 27ಕ್ಕೆ ಮುಂದೂಡಲಾಗಿತ್ತು. ಎರಡು ಬಾರಿ ಗೈರಾದ ರಾಹುಲ್ ಗಾಂಧಿ, ಇಂದು(ಡಿಸೆಂಬರ್ 16) ಕೂಡ ರಾಹುಲ್ ಗಾಂಧಿ ವಿಚಾರಣೆಗೆ ಗೈರಾಗಿದ್ದಾರೆ. ವಿಜಯ್ ಮಿಶ್ರಾ ಪರ ವಾದ ಮಂಡಿಸಿದ ಸಂತೋಷ್ ಪಾಂಡೆ, ರಾಹುಲ್ ಗಾಂಧಿ ಗೈರಾಗುತ್ತಿರುವು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ವಿಚಾರಣೆ ಅಂತ್ಯದಲ್ಲಿ ಕೋರ್ಟ್ ರಾಹುಲ್ ಗಾಂಧಿ ಸಮನ್ಸ್ ಜಾರಿ ಮಾಡಿದೆ.

2018ರಲ್ಲಿ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಭಾಷಣದಲ್ಲಿ ಅಮಿತ್ ಶಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ವಾಗ್ದಾಳಿ ನಡೆಸಿದ್ದರು. ಇದರ ಜೊತೆಗೆ ಕೆಲ ವಿವಾದಾತ್ಮಕ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದರು. ಈ ಹೇಳಿಕೆ ವಿರುದ್ದ ಪ್ರಕರಣ ದಾಖಲಾಗಿತ್ತು. ಇನ್ನು 2019ರ ಚುನಾವಣೆ ವೇಳೆ ರಾಹುಲ್ ಗಾಂಧಿ ಮೋದಿ ಸರ್ನೇಮ್ ಹೊಂದಿರುವ ಎಲ್ಲರೂ ಕಳ್ಳರು ಎಂದು ಭಾಷಣ ಮಾಡಿದ್ದರು. ಈ ಕುರಿತು ರಾಹುಲ್ ಗಾಂಧಿ ತಪ್ಪಿತಸ್ಛ ಎಂಬುದು ಸಾಬೀತಾಗಿತ್ತು. 2 ವರ್ಷ ಶಿಕ್ಷೆ ಕೂಡ ಪ್ರಕಟಗೊಂಡಿತ್ತು. ಇದೇ ವೇಳೆ ರಾಹುಲ್ ಗಾಂಧಿ ಸಂಸದ ಸ್ಥಾನ ಕೂಡ ಅನರ್ಹಗೊಂಡಿತ್ತು.

ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!

 

ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕಾರಣ  4 ತಿಂಗಳ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮತ್ತೆ ಲೋಕಸಭಾ ಸದಸ್ಯತ್ವ ಸಿಕ್ಕಿತ್ತು. ‘ಮೋದಿ ಎಂಬ ಸರ್‌ನೇಮ್‌ ಹೊಂದಿರುವವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ’ ಎಂದು 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರಾರ‍ಯಲಿ ವೇಳೆ ರಾಹುಲ್‌ ಪ್ರಶ್ನಿಸಿದ್ದರು. ಇದು ಮೋದಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಗುಜರಾತ್‌ನ ಮಾಜಿ ಶಾಸಕ, ಬಿಜೆಪಿಯ ಪೂರ್ಣೇಶ್‌ ಮೋದಿ ಕ್ರಿಮಿನಲ್‌ ಮಾನನಷ್ಟಕೇಸು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ಮಾ.23ರಂದು ರಾಹುಲ್‌ರನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಶಿಕ್ಷೆ ಜಾರಿಗೆ ತಡೆ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್