ಸಂಸತ್ತಿನ ಭದ್ರತಾ ಲೋಪಕ್ಕೆ ನಿರುದ್ಯೋಗವೇ ಕಾರಣ: ರಾಹುಲ್ ಗಾಂಧಿ

By Suvarna News  |  First Published Dec 16, 2023, 4:01 PM IST

ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಿಂದಾಗಿ ನಿರುದ್ಯೋಗ ಮತ್ತು ಹಣದುಬ್ಬರವು ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಕಾರಣ ಎಂದು ಕಾಂಗ್ರೆಸ್‌ನ ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.


ನಿರುದ್ಯೋಗವೇ  (Unemployment) ಸಂಸತ್ತಿನ ಭದ್ರತಾ ಲೋಪಕ್ಕೆ ಕಾರಣ. ಪ್ರಧಾನಿ ಮೋದಿಯವರ ನೀತಿಯಿಂದಾಗಿ ದೇಶದ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ. ಭಾರತೀಯ ಜನಸಂಖ್ಯೆಯು ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅದು ನಿರುದ್ಯೋಗ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದರು. "ಭದ್ರತಾ ಉಲ್ಲಂಘನೆಯು ನಿಜವಾಗಿಯೂ ಸಂಭವಿಸಿದೆ. ಆದರೆ ಇದು ಏಕೆ ಸಂಭವಿಸಿತು? ಎನ್ನುವುದು ಮುಖ್ಯ. ಇದಕ್ಕೆ ಮುಖ್ಯ ಕಾರಣವೆಂದರೆ ನಿರುದ್ಯೋಗ. ಮೋದಿ ಅವರ ನೀತಿಗಳಿಂದಾಗಿ ಭಾರತದ ಜನರಿಗೆ ಉದ್ಯೋಗ ಸಿಗುತ್ತಿಲ್ಲ" ಎಂದ ರಾಹುಲ್ ಗಾಂಧಿ, ಪ್ರಧಾನಿಯವರ ನೀತಿಗಳಿಂದಾಗಿ ನಿರುದ್ಯೋಗ (Unemployment)ಮತ್ತು ಹಣದುಬ್ಬರವು (Inflation) ಸಂಸತ್ತಿನ ದಾಳಿಯ ಹಿಂದಿನ ಕಾರಣ ಎಂದು  ಎಂದರು. 

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರು ಮಾಧ್ಯಮಗಳೊಂದಿಗೆ ಮಾತ್ರ ಮಾತನಾಡುತ್ತಾರೆ ಆದರೆ ಸದನದಲ್ಲಿ ಈ ವಿಷಯದ ಬಗ್ಗೆ  ಒಂದು ಹೇಳಿಕೆ ನೀಡುವುದಿಲ್ಲ ಎಂದರು.

Tap to resize

Latest Videos

ಸಂಸತ್ತಿನ ದಾಳಿಯನ್ನು ವಿರೋಧ ಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂಬ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, "ಅವರು ಕಾಂಗ್ರೆಸ್‌ನ ಹೆಸರನ್ನು ತೆಗೆದುಕೊಂಡು ಮತ ಕೇಳುತ್ತಾರೆ, ನೆಹರೂ ಜಿ ಮತ್ತು ಗಾಂಧೀಜಿಯನ್ನು ನಿಂದಿಸುವ ಮೂಲಕ ಮತಗಳನ್ನು ತೆಗೆದುಕೊಳ್ಳುತ್ತಾರೆ" ಎಂದರು.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಎಡವಿದ್ದೆಲ್ಲಿ..? ಟಾರ್ಗೆಟ್ ಆಗಿದ್ದೇಕೆ..?

2001 ರ ಸಂಸತ್ ದಾಳಿಗೆ ಡಿಸೆಂಬರ್ 13 ರಂದು 22 ವರ್ಷವಾಗಿದ್ದು, ಅದೇ ದಿನ ದಾಳಿಯಾಗಿರುವುದು ಸಂಸತ್ತಿನ ಭದ್ರತೆಯ ಪ್ರಶ್ನೆಯಾಗಿದ್ದು, ಸಂಸತ್ತಿನ ಭದ್ರತೆಗೆ ಸಂಬಂಧಿಸಿದಂತೆ ಬಿಜೆಪಿ  ನೇತೃತ್ವದ ಕೇಂದ್ರ ಮತ್ತು ಪ್ರತಿಪಕ್ಷಗಳು ವಾಗ್ವಾದ ನಡೆಸಿವೆ. ಆರು ಆರೋಪಿಗಳ ಪೈಕಿ ಇಬ್ಬರಿಗೆ ಸಂದರ್ಶಕರ ಪಾಸ್‌ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಹೆಸರಿನಲ್ಲಿ ಸಿಕ್ಕಿದೆ ಎಂದು ಕಾಂಗ್ರೆಸ್ (Congress) ಮತ್ತು ಇತರ ವಿರೋಧ ಪಕ್ಷಗಳು (opposition party)ಬಿಜೆಪಿಯನ್ನು ದೂರಿವೆ.

ಜೀರೋ ಅವರ್ ನಲ್ಲಿ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ನಂತರ ತಮ್ಮ ಶೂನಲ್ಲಿ ಮುಚ್ಚಿಟ್ಟಿದ್ದ ಹಳದಿ ಬಣ್ಣದ ಸ್ಮೋಕ್ ಬಾಂಬ್ ಸಿಡಿಸುವುದರೊಂದಿಗೆ ಘೋಷಣೆಗಳನ್ನು ಕೂಗಲಾರಂಬಿಸಿದ್ದರು. ನಂತರ ಸಂಸದರು ಮತ್ತು ಸಂಸತ್ತಿನ ಭದ್ರತಾ ಸಿಬ್ಬಂದಿಗಳು ಅವರನ್ನು ಸೆರೆ ಹಿಡಿದರು. ಇನ್ನೂ ಇಬ್ಬರು ಆರೋಪಿಗಳು ಸಂಸತ್ತಿನ ಹೊರಗೆ ಪ್ರತಿಭಟನೆ ಮಾಡಿದರು. ಸಂಸತ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಲಲಿತ್ ಝಾ  ಗುರುವಾರ ರಾತ್ರಿ ಪೊಲೀಸರ ಮುಂದೆ ಶರಣಾದರು. 

ಇದನ್ನೂ ಓದಿ: ಮಹಿಳಾ ಮೀಸಲು, ಪ್ರಜಾಪ್ರಭುತ್ವ; ಸಂಸತ್‌ಗೆ ನುಗ್ಗಿದ ದಾಳಿಕೋರರ ಕೊನೇ ಸೋಶಿಯಲ್‌ ಮೀಡಿಯಾ ಪೋಸ್ಟ್‌!

ಸಂಸತ್ತಿಗೆ ನುಗ್ಗಿದ ಇಬ್ಬರು ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗುರುವಾರ 7 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಶುಕ್ರವಾರ ಲಲಿತ್ ಅವರನ್ನು ಇದೇ ಕಸ್ಟಡಿಗೆ ಕಳುಹಿಸಲಾಗಿದೆ. ಮತ್ತೋರ್ವ ಆರೋಪಿ ಮಹೇಶ್ ಕುಮಾವತ್ ನನ್ನು ಬಂಧಿಸಲಾಗಿದೆ.

-ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

click me!