ಸತ್ಯ ಸತ್ಯವಾಗಿಯೇ ಇರುತ್ತದೆ. ಸತ್ಯವನ್ನು ಪ್ರದರ್ಶನ ಮಾಡೋಕೆ ಆಗಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಮೋದಿಜೀ ಅವರ ಜಗತ್ತಿನಲ್ಲಿ ಸತ್ಯವನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ವಾಸ್ತವ ಜಗತ್ತಿನಲ್ಲಿ ಸತ್ಯವನ್ನು ಎಂದಿಗೂ ಪ್ರದರ್ಶಿಸಲು ಸಾಧ್ಯವಿಲ್ಲ.
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Lok sabha Opposition Leader Rahul Gandhi) ಅಬ್ಬರದ ಭಾಷಣ ಮಾಡಿದ್ದರು. ಈ ವೇಳೆ ಕೆಲವು ವಿವಾದತ್ಮಕ ಅಂಶಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸತ್ಯ ಸತ್ಯವಾಗಿಯೇ ಇರುತ್ತದೆ. ಸತ್ಯವನ್ನು ಪ್ರದರ್ಶನ ಮಾಡೋಕೆ ಆಗಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಮೋದಿಜೀ ಅವರ ಜಗತ್ತಿನಲ್ಲಿ ಸತ್ಯವನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ವಾಸ್ತವ ಜಗತ್ತಿನಲ್ಲಿ ಸತ್ಯವನ್ನು ಎಂದಿಗೂ ಪ್ರದರ್ಶಿಸಲು ಸಾಧ್ಯವಿಲ್ಲ. ನಾನು ಹೇಳಬೇಕಿತ್ತೋ ಅದನ್ನು ಸಂಸತ್ತಿನಲ್ಲಿ ಹೇಳಿದ್ದೇನೆ. ಅವರು ಎಷ್ಟು ಬಾರಿಯಾದ್ರೂ ನನ್ನ ಹೇಳಿಕೆಯನ್ನು ತಿರುಗಿಸಿ ಪ್ರದರ್ಶನ ಮಾಡಲಿ ಎಂದು ಆಡಳಿತರೂಢ ಸರ್ಕಾರಕ್ಕೆ ತಿರುಗೇಟು ನೀಡಿದರು.
ಜುಲೈ 1ರಂದು ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಹಿಂದೂ ಸೇರಿದಂತೆ ಹಲವು ಧರ್ಮಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಧರ್ಮಗಳನ್ನು ಉಲ್ಲೇಖಿಸಿ ಮಾತನಾಡಿದ್ದಕ್ಕೆ ಎನ್‌ಡಿಎ ಸದಸ್ಯರಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಬಿಜೆಪಿ ನಾಯಕರ ವಿರುದ್ಧ ರಾಗಾ ವಾಗ್ದಾಳಿ
ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದುಕೊಂಡೇ ತಮ್ಮ ವಾಗ್ದಾಳಿಯನ್ನು ಆರಂಭಿಸಿದ್ದರು. ಇಸ್ಲಾಂ, ಕ್ರಿಶ್ಚಿಯನ್, ಬುದ್ದಿಸಂ, ಜೈನಿಸಂ, ಸಿಖ್ ಹೀಗೆ ಎಲ್ಲಾ ಧರ್ಮಗಳು ನಿರ್ಭಯತ್ವದ ಬಗ್ಗೆ ಮಾತನಾಡುತ್ತವೆ. ನಮ್ಮ ಎಲ್ಲಾ ಐತಿಹಾಸಿಕ ಪುರುಷರು, ಧರ್ಮಗುರುಗಳಿ ಅಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವ ಇವರು ಕೇವಲ ಹಿಂಸಾಚಾರ, ಸುಳ್ಳು ಹಾಗೂ ದ್ವೇಷದ ಮಾತುಗಳನ್ನಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಭಾಷಣದ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ, ಇದು ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದರು. ರಾಹುಲ್ ಗಾಂಧಿ ತಮ್ಮ ಆಕ್ಷೇಪಾರ್ಹ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದರು. ಆಗ ಮೋದಿ ಅಂದ್ರೆ ಹಿಂದೂ ಸಮಾಜವಲ್ಲ. ನಾನು ಬಿಜೆಪಿ ಹಾಗೂ ಆರ್‌ಎಸ್ಎಸ್ ಕುರಿತು ಹೇಳಿಕೆಯನ್ನು ನೀಡಿದ್ದೇನೆ ಎಂದು ಹೇಳಿದರು.
ಸ್ಪೀಕರ್‌ಗೆ ದೂರು
ಇನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ. ಈ ಮೂಲಕ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ತಮ್ಮ ಬೇಜವಾಬ್ದಾರಿ ಹೇಳಿಕೆಗಳಿಂದ ಜವಾಬ್ದಾರಿಯುತ ಸ್ಥಾನವನ್ನು ಅವಮಾನಿಸಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ಹೇಳಿಕೆಗಳನ್ನು ಪ್ರಶ್ನಿಸಿ ಕ್ರಮಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ದೂರು ಸಲ್ಲಿಕೆಯಾಗಿದೆ.
ದ್ವಿವೇದಿ, ತ್ರಿವೇದಿ, ಚತುರ್ವೇದಿಯಿಂದ ಕನ್ಪ್ಯೂಸ್ ಆದೆ ಎಂದ ಖರ್ಗೆ: ಸ್ಪೀಕರ್ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಸದನ
| On portions of his speech expunged, Lok Sabha LoP Rahul Gandhi says, "In Modi ji's world, truth can be expunged. But in reality, the truth can't be expunged. I said what I had to say, that is the truth. They can expunge as much as they want. Truth is truth." pic.twitter.com/AcR3xRN6d5
— ANI (@ANI)