ಬಹುಮತ ಬರದಿದ್ದರೆ ಬಿಜೆಪಿಯ ಪ್ಲಾನ್ ಬಿ ಏನು? ಅಮಿತ್ ಶಾ ನೀಡಿದ ಉತ್ತರ ಹೀಗಿತ್ತು

ಈ ಬಾರಿ 400ಕ್ಕೂ ಅಧಿಕ ಕ್ಷೇತ್ರದಲ್ಲಿ  ಗೆಲುವು ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಅಖಾಡಕ್ಕೆ ಬಿಜೆಪಿ ಧುಮುಕಿದೆ. ಒಂದು  ವೇಳೆ ಬಹುಮತ  ಬರದಿದ್ರೆ ಪ್ಲಾನ್ ಬಿ  ಏನು ಎಂಬ ಪ್ರಶ್ನೆಗೆ ಅಮಿತ್ ಶಾ ಉತ್ತರ ನೀಡಿದ್ದಾರೆ.

what is plan B  if bjp not getting majority in lok sabha  election mrq

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂದರ್ಶನದಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದರೆ ಪಕ್ಷದ ಪ್ಲಾನ್ ಬಿ ಏನಾಗಿರುತ್ತೆ ಎಂಬ ಪ್ರಶ್ನೆಗೆ ಸ್ವಾರಸ್ಯಕರವಾಗಿ  ಉತ್ತರಿಸಿದ್ದಾರೆ. 

ಜೂನ್ ನಾಲ್ಕರಂದು ಬಿಜೆಪಿಗೆ 272 ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕರೆ, ನಿಮ್ಮ ಪಕ್ಷದ ಪ್ಲಾನ್ ಬಿ ಏನಾಗಿರುತ್ತದೆ ಎಂದು ಕೇಳಲಾಯ್ತು. ಈ  ಪ್ರಶ್ನೆಗೆ ಉತ್ತರಿಸಿದ  ಅಮಿತ್ ಶಾ, ಇಂತಹ ಸನ್ನಿವೇಶ ಬರುತ್ತೆ ಎಂದು  ನನಗೆ ಅನ್ನಿಸುತ್ತಿಲ್ಲ. 60 ಕೋಟಿಯ ಫಲಾನುಭವಿಗಳ  ಸುಭದ್ರವಾದ ಕೋಟೆ  ಪ್ರಧಾನಿಗಳ ನರೇಂದ್ರ ಮೋದಿ ಅವರ ಜೊತೆಯಲ್ಲಿದೆ. ಇವರೆಲ್ಲರೂ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಏನು ಮತ್ತು ಯಾಕೆ ಅವರಿಗೆ  400  ಸೀಟ್‌ಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊತ್ತಿದೆ ಎಂದು  ಹೇಳಿದರು.

ಪ್ಲಾನ್ ಬಿ ಅವಶ್ಯಕತೆ ಇಲ್ಲ

ಪ್ಲಾನ್ ಎ ಫೇಲ್ ಆಗುತ್ತೆ  ಎಂಬ ಅನುಮಾನ ಇದ್ರೆ  ಮಾತ್ರ ಪ್ಲಾನ್ ಬಿ ರಚನೆ  ಮಾಡಲಾಗಿರುತ್ತದೆ. ನಮ್ಮ ಪ್ಲಾನ್ ಎ ಸಕ್ಸಸ್ ಆಗಲಿದೆ. ಆದ್ದರಿಂದ ನಮಗೆ ಪ್ಲಾನ್ ಬಿ  ಮಾಡುವ  ಅವಶ್ಯಕತೆ ಇಲ್ಲ ಎಂದು  ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಕಾಶ್ಮೀರದಲ್ಲಿ ಶಾಂತಿಯುತ ಮತದಾನ

ಆರ್ಟಿಕಲ್  370 ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಶೇ.40ರಷ್ಟು ಮತದಾನ ಆಗಿದೆ. ಇದಕ್ಕಿಂತ ಯಶಸ್ಸು ಮತ್ತೇನು ಬೇಕು ಎಂದು ಅಮಿತ್ ಶಾ ಹೇಳಿದರು.

ಎಲ್ಲಾ ಮೂಲಭೂತವಾದಿಗಳ ಗುಂಪು ಇದೀಗ ಪ್ರಜಾಪ್ರಭುತ್ವದ  ಭಾಗಿಯಾಗಿದ್ದಾರೆ. ಇವರೆಲ್ಲರೂ ಬಂದು ಮತದಾನ ಮಾಡಿದ್ದಾರೆ. ಈ  ಹಿಂದೆ ಕಾಶ್ಮೀರದಲ್ಲಿ ಚುನಾವಣೆಗಳನ್ನು ಬಹಿಷ್ಕಾರ  ಮಾಡಲಾಗುತ್ತಿತ್ತು. ಆದರೆ ಈಗ ಕಾಶ್ಮೀರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ  ಎಂದು ತಿಳಿಸಿದರು.

ದೇಶ ನಡೆಸೋದು ಮಕ್ಕಳಾಟ ಅಲ್ಲ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಐಎನ್‌ಡಿಐಎ ವಿರುದ್ಧ ಅಮಿತ್ ಶಾ ವಾಗ್ದಾಳಿ

ಇದೇ ವೇಳೆ ಐಎನ್‌ಡಿಐಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಇದರಲ್ಲಿರೋ  ಎಲ್ಲರೂ ವಂಶಾಡಳಿತ ರಾಜಕಾರಣದಿಂದ  ಬಂದಿದ್ದಾರೆ. ಇವರು ಆರ್ಟಿಕಲ್ 370 ಮರು ಸ್ಥಾಪನೆಯ ಬಗ್ಗೆ ಮಾತನಾಡುತ್ತಿದ್ದಾರೆ. ತ್ರಿಪಲ್  ತಲಾಖ್ ನಿಷೇಧ ಕಾನೂನು ರದ್ದು ಮಾಡ್ತಾರಂತೆ.  ಈ ಒಕ್ಕೂಟದಲ್ಲಿರುವ ನಾಯಕರು  ಸಿಎಎ  ವಿರೋಧಿಸುತ್ತಾರೆ. ಐಎನ್‌ಡಿಐಎ ಹಂಚಿಕೆಯ ಸಂಸ್ಕೃತಿಯನ್ನು ಹೊಂದಿದೆ ಎಂದು  ಆಕ್ರೋಶ  ವ್ಯಕ್ತಪಡಿಸಿದರು.

ರಾಮನ ಬಳಿಕ ಈಗ ಸೀತಾ ಮಂದಿರ ನಿರ್ಮಾಣ: ಅಮಿತ್‌ ಶಾ

ಬಿರುಸಿನ ಪ್ರಚಾರ

ಲೋಕಸಭಾ ಚುನಾವಣೆಯ ನಾಲ್ಕು ಹಂತ ಮುಕ್ತಾಯವಾಗಿವೆ. ಈ ಬಾರಿಯೂ ಎನ್‌ಡಿಎ ಮೈತ್ರಿಕೂಟವೇ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹೇಳುತ್ತಿದೆ. ಇತ್ತ  ಐಎನ್‌ಡಿಐಎ ಕೂಟ  ಜೂನ್ 4 ರಂದು ದೇಶದಲ್ಲಿ ಬಿಜೆಪಿ ಆಡಳಿತ ಅಂತ್ಯವಾಗಲಿದೆ ಎಂದು ಹೇಳುತ್ತಿದೆ. ಸದ್ಯ ಬಾಕಿ ಉಳಿದಿರುವ ಮೂರು ಹಂತಗಳ ಚುನಾವಣೆ ಮೇಲೆ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಿವೆ.

ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅಮಿತ್‌ ಶಾ, ‘ಬಿಜೆಪಿ ಎಂದಿಗೂ ಪ್ರತಿಪಕ್ಷಗಳ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ರೀತಿ ಸೀತಾಮಢಿಯಲ್ಲೂ ಸೀತಾಮಂದಿರ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios