ಸೋನಿಯಾ ಬಂಗಲೆಯಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರಕ್ಕೆ ನಿರ್ಧರಿಸಿದ ರಾಹುಲ್!

By Suvarna News  |  First Published Jul 12, 2023, 1:40 PM IST

ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಅನಿವಾರ್ಯವಾಗಿ ಅಧಿಕೃತ ಸರ್ಕಾರಿ ಬಂಗಲೆ ತೆರವು ಮಾಡಿದ ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿ ಮನೆಗೆ ಸ್ಥಳಾಂತರವಾಗಿದ್ದರು. ಇದೀಗ ರಾಹುಲ್ ಗಾಂಧಿ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರವಾಗಲು ನಿರ್ಧರಿಸಿದ್ದಾರೆ.


ನವದೆಹಲಿ(ಜು.12) ಮೋದಿ ಸರ್ನೇಮ್ ಟೀಕಿಸಿ ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಗಾಂಧಿ ಅನಿವಾರ್ಯವಾಗಿ ಸರ್ಕಾರಿ ಅಧಿಕೃತ ಬಂಗಲೆ ತೆರವುಗೊಳಿಸಿದ್ದರು. ದೆಹಲಿಯ ತುಘಲಕ್‌ ಲೇನ್‌ನಲ್ಲಿರುವ 12ನೇ ನಂಬರ್‌ ಮನೆಯನ್ನು ಖಾಲಿ ಮಾಡುವಂತೆ ಬಂದ ಸೂಚನೆಯಿಂದ ಮನೆ ತೆರವುಗೊಳಿಸಿದ್ದ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಮನೆಗೆ ತೆರಳಿದ್ದರು. ಇದೀಗ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಬಂಗಲೆಯಿಂದ, ದೆಹಲಿ ಮಾಜಿ ಸಿಎಂ, ದಿವಂಗತ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರವಾಗಲು ನಿರ್ಧರಿಸಿದ್ದಾರೆ.

ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪೂರ್ವದ ಬಿ2ನಲ್ಲಿರುವ ಶೀಲಾ ದೀಕ್ಷಿತ್ ಅವರ ಬಂಗಲೆಗೆ  ಸ್ಥಳಾಂತರವಾಗಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ದೆಹಲಿಯ ಸಿಎಂ ಆಗಿ, ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2019ರ ಜುಲೈ 20 ರಂದು ಶೀಲಾ ದೀಕ್ಷೀತ್ ನಿಧನರಾಗಿದ್ದಾರೆ.ಸದ್ಯ ಈ ಮನೆಯಲ್ಲಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ವಾಸವಾಗಿದ್ದಾರೆ. ಆದರೆ ಸಂದೀಪ್ ದೀಕ್ಷಿತ್ ಸದ್ಯದಲ್ಲೇ ತಮ್ಮ ಕುಟುಂಬಸ್ಥರ ಮನೆಗೆ ಸ್ಥಳಾಂತರವಾಗುತ್ತಿದ್ದಾರೆ. ಹೀಗಾಗಿ ಖಾಲಿಯಾಗುವ ಶೀಲಾ ದೀಕ್ಷಿತ್ ಮನೆಗೆ ರಾಹುಲ್ ಗಾಂಧಿ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ.

Tap to resize

Latest Videos

ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ, ಉಚಿತ ಗ್ಯಾರೆಂಟಿ ಜೊತೆ ಹೊಸ ಕಾರ್ಯಕ್ರಮ ಘೋಷಣೆ!

ಮೋದಿ ಸರ್‌ನೇಮ್ ಟೀಕಿಸಿದ ಕ್ರಿಮಿನಲ್‌ ಪ್ರಕರಣದಲ್ಲಿ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಸಂಸದನಿಗೆ ನೀಡಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನು ಏ.22ರೊಳಗೆ ಖಾಲಿ ಮಾಡಿ ಎಂದು ಸರ್ಕಾರ ರಾಹುಲ್‌ಗೆ ಸೂಚಿಸಿತ್ತು. ಸರ್ಕಾರದ ಆದೇಶದಂತೆ ಮನೆ ಖಾಲಿ ಮಾಡಿದ ರಾಹುಲ್ ಗಾಂಧಿ ಅಧಿಕಾರಿಗಳಿಗೆ ಕೀ ಹಸ್ತಾಂತರಿಸಿದ್ದರು.ಬಳಿಕ ಮನೆಯ ಬಾಗಿಲು, ಕಿಟಿಕಿ ಹಾಗೂ ಬೀಗವನ್ನು ಸ್ವತಃ ತಾವೇ ಹಾಕಿ, ಮನೆಯ ಸಿಬ್ಬಂದಿಗೆ ಹಸ್ತಲಾಘವ ಮಾಡಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ತೆರಳಿದರು.

ಮನೆಯಲ್ಲಿದ್ದ ವಸ್ತುಗಳನ್ನು ಲಾರಿಯಲ್ಲಿ ತುಂಬಿ ಸೋನಿಯಾ ಗಾಂಧಿ ಮನಗೆ ತೆರಳಿದ್ದರು. ಮನೆ ಖಾಲಿ ಮಾಡಿದ ಬಳಿಕ ಮಾತನಾಡಿದ್ದ ರಾಹುಲ್ ಗಾಂಧಿ ಹಿಂದೂಸ್ತಾನದ ಜನರು 19 ವರ್ಷಗಳ ಕಾಲ ನನಗೆ ಈ ಮನೆಯನ್ನು ನೀಡಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಸತ್ಯ ಮಾತನಾಡಿದ್ದಕ್ಕಾಗಿ ನಾನು ಈ ಬೆಲೆ ತೆತ್ತಿದ್ದೇನೆ. ಸತ್ಯವನ್ನು ಹೇಳಲು ಯಾವುದೇ ಬೆಲೆ ತೆರಲು ನಾನು ಸಿದ್ಧನಿದ್ದೇನೆ’ ಎಂದರು. ಜೊತೆಗೆ ಮುಂದಿನ ಕೆಲ ದಿನಗಳ ಕಾಲ ತಾಯಿಯ ಮನೆಯಲ್ಲೇ ಇರುವುದಾಗಿ ಹೇಳಿದ್ದರು.

ರಾಹುಲ್‌ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್‌: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ

2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೋಲಾರದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ, ‘ನೀರವ್‌ ಮೋದಿ, ಲಲಿತ್‌ ಮೋದಿ, ನರೇಂದ್ರ ಮೋದಿ. ಹೀಗೆ ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮವನ್ನೇ ಏಕೆ ಹೊಂದಿರುತ್ತಾರೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು. ಇದರ ವಿರುದ್ಧ ಗುಜರಾತ್‌ನ ಮಾಜಿ ಶಾಸಕ, ಬಿಜೆಪಿಯ ಪೂರ್ಣೇಶ್‌ ಮೋದಿ ಕೇಸು ದಾಖಲಿಸಿದ್ದರು. ಈ ಕುರಿತು 2023ರ ಮಾಚ್‌ರ್‍ನಲ್ಲಿ ಸೂರತ್‌ ಮ್ಯಾಜಿಸ್ಪ್ರೇಟ್‌ ಕೋರ್ಟು ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

click me!