ಸ್ವಾಮಿ ವಿವೇಕಾನಂದರನ್ನು ಲೇವಡಿ ಮಾಡಿದ ಸನ್ಯಾಸಿ ಅಮೋಘ್ ಲೀಲಾ ದಾಸ್: ಇಸ್ಕಾನ್‌ನಿಂದ ಬ್ಯಾನ್‌

By BK AshwinFirst Published Jul 12, 2023, 12:35 PM IST
Highlights

ಸ್ವಾಮಿ ವಿವೇಕಾನಂದ ಅವರನ್ನು ಲೇವಡಿ ಮಾಡಿದ್ದಕ್ಕೆ ಸನ್ಯಾಸಿಯನ್ನು ಇಸ್ಕಾನ್ ಒಂದು ತಿಂಗಳ ಕಾಲ ನಿಷೇಧಿಸಿದೆ. ಅಮೋಘ ಲೀಲಾ ದಾಸ್ ಈಗ ಗೋವರ್ಧನ ಬೆಟ್ಟಗಳಲ್ಲಿ ಈ ಒಂದು ತಿಂಗಳು ಪ್ರಾಯಶ್ಚಿತ್ತಕ್ಕಾಗಿ ಹೋಗುತ್ತಾರೆ ಎಂದೂ ಇಸ್ಕಾನ್ ತಿಳಿಸಿದೆ.

ದೆಹಲಿ (ಜುಲೈ 12, 2023): ಇಸ್ಕಾನ್‌ನ ಸನ್ಯಾಸಿ ಅಮೋಘ ಲೀಲಾ ದಾಸ್ ಅವರು ಸ್ವಾಮಿ ವಿವೇಕಾನಂದರನ್ನು ಲೇವಡಿ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್‌ನ ಸನ್ಯಾಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರೂ ಆಗಿರುವ ಇವರು 'ದಿವ್ಯ ಪುರುಷ' ಮೀನು ತಿನ್ನಬಹುದೇ ಎಂದು ಹಿಂದುತ್ವವನ್ನು ವಿಶ್ವಮಟ್ಟದಲ್ಲಿ ಹೆಚ್ಚು ಪ್ರಚುರಪಡಿಸಿದ ಸ್ವಾಮಿ ವಿವೇಕಾನಂದರನ್ನು ಲೇವಡಿ ಮಾಡಿದ್ದಾರೆ. 

ವಿಡಿಯೋವೊಂದರಲ್ಲಿ (Video) ಅವರು ಈ ಹೇಳಿಕೆ ನೀಡಿದ್ದು, ಈ ಹಿನ್ನೆಲೆ ಸನ್ಯಾಸಿ ಅಮೋಘ ಲೀಲಾ ದಾಸ್ (Monk Amogh Lila Das) ಅವರ ಇತರ ಅನೇಕ ವಿಡಿಯೋಗಳಂತೆ ಈ ವಿಡಿಯೋ ಸಹ ವೈರಲ್‌ (Viral Video) ಆಗಿದೆ. ವಿಡಿಯೋದಲ್ಲಿ ನೀಡಿರುವ ಹೇಳಿಕೆಗಳನ್ನು ಗಮನಿಸಿದ ಇಸ್ಕಾನ್ (ISKCON) ಅವರನ್ನು ಒಂದು ತಿಂಗಳ ಕಾಲ ನಿಷೇಧಿಸಿದೆ. ಅಮೋಘ ಲೀಲಾ ದಾಸ್  ಈಗ ಗೋವರ್ಧನ ಬೆಟ್ಟಗಳಲ್ಲಿ ಈ ಒಂದು ತಿಂಗಳು ಪ್ರಾಯಶ್ಚಿತ್ತಕ್ಕಾಗಿ ಹೋಗುತ್ತಾರೆ ಎಂದೂ ಇಸ್ಕಾನ್ ತಿಳಿಸಿದೆ.

ಇದನ್ನು ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌

ಯಾರಾದರೂ ದೈವಿಕ ವ್ಯಕ್ತಿ ಪ್ರಾಣಿಯನ್ನು ಕೊಂದು ತಿನ್ನುತ್ತಾರಾ? ಅವರು ಮೀನು (Fish) ತಿನ್ನುತ್ತಾರಾ..? ಮೀನಿಗೂ ನೋವು ಉಂಟಾಗುತ್ತದೆ. ಮತ್ತು ವಿವೇಕಾನಂದರು ಮೀನು ತಿಂದಿದ್ದರೆ, ದೈವಿಕ ವ್ಯಕ್ತಿಗೆ ಸಾಧ್ಯವೇ ಎಂಬುದು ಪ್ರಶ್ನೆ. ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಹಾಗೆ, ಬದನೆ ಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ ಎಂದು ಅವರು ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ ಅಥವಾ ಅವರು ಭಗವದ್ಗಿತೆ ಅಧ್ಯಯನಕ್ಕಿಂತ ಫುಟ್‌ಬಾಲ್ ಆಡುವುದು ಮುಖ್ಯ ಎಂದು ಹೇಳಬಹುದೇ? ಇದು ಸರಿಯಲ್ಲ. ಆದರೆ ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ನಾನು ಹೇಳಲೇಬೇಕು. ಅವರು ಇಲ್ಲಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಪ್ರತಿಯೊಂದನ್ನೂ ನಾವು ಕುರುಡಾಗಿ ನಂಬಬಾರದು ಎಂದು ಅಮೋಘ ಲೀಲಾ ದಾಸ್ ಅವರು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋಗೆ ಇಸ್ಕಾನ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕಾಮೆಂಟ್‌ಗಳು ಅಗೌರವಯುತವಾಗಿರುವುದು ಮಾತ್ರವಲ್ಲದೆ ಅಮೋಘ ಲೀಲಾ ದಾಸ್ ಅವರ "ಆಧ್ಯಾತ್ಮಿಕ ಮಾರ್ಗಗಳ ವೈವಿಧ್ಯತೆ ಮತ್ತು ವೈಯಕ್ತಿಕ ಆಯ್ಕೆಗಳ" ಬಗ್ಗೆ ಅರಿವಿನ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಇಸ್ಕಾನ್ ಹೇಳಿದೆ. "ಶ್ರೀ ಅಮೋಘ ಲೀಲಾ ದಾಸ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಸ್ಕಾನ್‌ನ ಮೌಲ್ಯಗಳು ಮತ್ತು ಬೋಧನೆಗಳನ್ನು ಪ್ರತಿನಿಧಿಸುವುದಿಲ್ಲ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ. ನಮ್ಮ ಸಂಸ್ಥೆ ಯಾವಾಗಲೂ ಎಲ್ಲಾ ಆಧ್ಯಾತ್ಮಿಕ ಮಾರ್ಗಗಳು ಮತ್ತು ಸಂಪ್ರದಾಯಗಳ ಕಡೆಗೆ ಸಾಮರಸ್ಯ, ಗೌರವ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಯಾವುದೇ ರೀತಿಯ ಅಗೌರವವನ್ನು ಅಥವಾ ಇತರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಕಡೆಗೆ ಅಸಹಿಷ್ಣುತೆಯನ್ನು  ನಾವು ಖಂಡಿಸುತ್ತೇವೆ’’ ಎಂದೂ ಇಸ್ಕಾನ್‌ ಹೇಳಿಕೆ ನೀಡಿದೆ. 

ಇದನ್ನೂ ಓದಿ; ಭಾರತದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ ಗ್ರೂಪ್‌: ರಾಜ್ಯದಲ್ಲೇ ಐಫೋನ್‌ 15 ಉತ್ಪಾದನೆ!

ಅಮೋಘ ಲೀಲಾ ದಾಸ್ ಯಾರು?
ಅಮೋಘ ಲೀಲಾ ದಾಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೇರಕ ಭಾಷಣಕಾರರಾಗಿ (Motivational Speaker) ಜನಪ್ರಿಯ ಮುಖ. 43 ವರ್ಷದ ಅವರು ಪ್ರಸ್ತುತ ಇಸ್ಕಾನ್ ದ್ವಾರಕಾದ ದ್ವೇಕಾ ಅಧ್ಯಾಯದ ಉಪಾಧ್ಯಕ್ಷರಾಗಿದ್ದಾರೆ. ವರದಿಗಳ ಪ್ರಕಾರ, ಅವರ ಮೂಲ ಹೆಸರು ಆಶಿಶ್ ಅರೋರಾ. ಸನ್ಯಾಸತ್ವ ತೆಗೆದುಕೊಳ್ಳುವ ಮೊದಲು, ಅವರು ಎಂಜಿನಿಯರ್ ಆಗಿದ್ದರು.

ಇದನ್ನೂ ಓದಿ: ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ

click me!