ರಾಹುಲ್ ಗಾಂಧಿ ಮೇಲೆ ಜೆಪಿ ನಡ್ಡಾ ವಾಗ್ದಾಳಿ/ ರಾಹುಲ್ ಗೆ ತಿಳಿವಳಿಕೆ ಕಮ್ಮಿ ಎಂದ ನಡ್ಡಾ/ ಕೊರೋನಾ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ/ ಕಾಂಗ್ರೆಸ್ ಹೇಳಿಕೆಗಳು ಪರಿಹಾರ ಸೂಚಿಸುವಂತೆ ಇಲ್ಲ
ನವದೆಹಲಿ(ಮೇ 30) ಕೇಂದ್ರದ ಮೋದಿ ಸರ್ಕಾರ ಕೊರೋನಾ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸರಿಯಾದ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಎನಿಸಿಕೊಂಡಿರುವ ರಾಹುಲ್ ಗಾಂಧಿಯಯವರಿಗೆ ಕೊರೋನಾ ವೈರಸ್ ವಿಚಾರದಲ್ಲಿ ಅಲ್ಪ ತಿಳಿವಳಿಕೆ ಇದೆ. ಅವರ ಎಲ್ಲ ಹೇಳಿಕೆಗಳು ಸಮಸ್ಯೆ ಬಗೆಹರಿಸುವ ಕುರಿತಾಗಿ ಇಲ್ಲ, ಎಲ್ಲವೂ ರಾಜಕಾರಣದ ಮಯ ಎಂದು ನಡ್ಡಾ ಹೇಳಿದ್ದಾರೆ.
undefined
ಜಗತ್ತಿನೆಲ್ಲೆಡೆ ಮೋದಿ ಹವಾ; ಕೊರೋನಾ ನಿರ್ವಹಣೆ ನಂಬರ್ ಒನ್
ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, ನಾವು ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ದಿಟ್ಟ ತೀರ್ಮಾನ ತೆಗೆದುಕೊಂಡಿದ್ದೇವೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೇ ಕೊರೋನಾ ವಿರುದ್ಧ ಹೋರಾಡಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ನಮ್ಮ ರಾಷ್ಟ್ರ ವಿಷಮ ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದಿದ್ದಾರೆ.
ದಿಟ್ಟ ಮತ್ತು ಸಮಯೋಚಿತ ತೀರ್ಮಾನಗಳೆ ಈ ಒಂದು ವರ್ಷದ ಹೈಲೈಟ್ಸ್. ಕೊರೋನಾ ವಿರುದ್ಧ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳೆ ನಮ್ಮನ್ನು ಕಾಪಾಡುತ್ತಿವೆ ಎಂದಿದ್ದಾರೆ.
ಲಾಕ್ ಡೌನ್ ವಿಚಾರದಲ್ಲಿಯೂ ರಾಹುಲ್ ಗಾಂಧಿಗೆ ತಿಳಿವಳಿಕೆ ಇಲ್ಲ. ಅವರ ಗೊಂದಲಕಾರಿ ಹೇಳಿಕೆಗಳೇ ಅವರ ಜ್ಞಾನ ಮಟ್ಟ ಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ.
ಅವರ ಎಲ್ಲ ಹೇಳಿಕೆಗಳು ರಾಜಕಾರಣದ ಸುತ್ತವೇ ಗಿರಕಿ ಹೊಡೆಯುತ್ತಿವೆ. ಅವರದ್ದು ಬರೀ ರಾಜಕಾರಣವೇ ಹೊರತು ಜನಪರ ಚಿಂತನೆ ಅಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯಂತೆ ಕಾಂಗ್ರೆಸ್ ಸಹ ಕೊರೋನಾ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ನಡ್ಡಾ ಆರೋಪ ಮಾಡಿದ್ದಾರೆ.