ರಾಹುಲ್ ಗಾಂಧಿ ಬಳಸಿದ ಭಾಷೆ, ಅವಹೇಳನ ಕುರಿತು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಮಧ್ಯಪ್ರದೇಶದ ಸಮಾವೇಶದಲ್ಲಿ ಜನತೆಗೆ ವಿಶೇಷ ಮನವಿ ಮಾಡುವ ಮೂಲಕ ಮೋದಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ(ಏ.25) ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಮತದಾರರೇ ನೀವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನ್ನ ವಿರುದ್ಧ ಬಳಸಿದ ಭಾಷೆ, ಅವಹೇಳನದಿಂದ ಬೇಸರಪಡಬೇಡಿ. ಬಿಜೆಪಿಯ ಕಾಮ್ದಾರಿಗೆ, ಕಾಂಗ್ರೆಸ್ ನಾಮ್ದಾರಿಗಳು ಹಲವು ಬಾರಿ ಈ ರೀತಿ ಅವಹೇಳನ ಮಾಡಿದ್ದಾರೆ. ಬಡತನದಲ್ಲಿ ಬೆಳೆದ ನಾನು ಹಲವು ಬಾರಿ ಈ ರೀತಿಯ ಅವಮಾನ ಎದುರಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೀಗ ಮಧ್ಯಪ್ರದೇಶದ ಮೊರೆನಾದಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರ ರಂಗೇರಿದೆ. ಆರೋಪ ಹಾಗೂ ಪ್ರತ್ಯಾರೋಪಗಳು ಸಾಮಾನ್ಯವಾಗಿದೆ. ಮೋದಿ ಮಾತುಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಜನರು ಕಾಂಗ್ರೆಸ್ ಶೆಹಜಾದ್ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಸಮಯ ವ್ಯರ್ಥ ಮಾಡಬೇಡಿ. ಕಾಂಗ್ರೆಸ್ ನಾಯಕ ಈಗಾಗಲೇ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಇಂತಹ ಅವಮಾನ ಹೇಳಿಕೆಗಳು ನಿರಂತವಾಗಿ ಬರಲಿದೆ. ನಾವೆಲ್ಲಾ ಸಾಮಾನ್ಯರು. ನಾನು ಬಡತನದಲ್ಲಿ ಬೆಳೆದು ಬಂದಿದ್ದೇನೆ. ಇಂತಹ ಅಪಮಾನ ಹೇಳಿಕೆಗಳನ್ನು ಹಲವು ಬಾರಿ ಎದುರಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಶಾಕ್, ಏ.29ಕ್ಕೆ ಡೆಡ್‌ಲೈನ್!
ಪ್ರಧಾನಿ ನರೇಂದ್ರ ಮೋದಿ ಯಾವುದೇ ನಿರ್ದಿಷ್ಠ ಹೇಳಿಕೆಯನ್ನು ಮುಂದಿಟ್ಟು ವಾಗ್ದಾಳಿ ನಡೆಸಿಲ್ಲ. ಆದರೆ ಮಾತಿನ ಆರಂಭದಲ್ಲೇ ಕೆಲವರು ಕಾಂಗ್ರೆಸೆ್ ಶೆಹಜಾದ್ ನನ್ನ ವಿರುದ್ದ ನೀಡಿದ ಹೇಳಿಕೆ, ಬಳಸಿದ ಭಾಷೆಯಿಂದ ನೊಂದಿದ್ದಾರೆ. ಈ ಮೂಲಕ ನಿಮ್ಮೆಲ್ಲರಲ್ಲಿ ನಾನು ವಿನಂತಿಸುತ್ತೇನೆ, ಇಂತಹ ಮಾತುಗಳಿಂದ ನೀವು ಯಾರೂ ಕೂಡ ಬೇಸರಗೊಳ್ಳಬೇಡಿ, ನಿರಾಶರಾಗಬೇಡಿ. ಆಕ್ರೋಶ ಹೊರಹಾಕಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಮಿಕರ, ಶ್ರಮಿಕರ ಪಕ್ಷ, ಈ ಆರೋಪ ಮಾಡುತ್ತಿರುವರು ರಾಜವಂಶದ ಪಕ್ಷ. ಹಿಂದಿನಿಂದಲು ರಾಜವಂಶ, ಶ್ರಮಿಕವರ್ಗದ ಮೇಲೆ ಅಪಾಮಾನ, ಆರೋಪ, ದಬ್ಬಾಳಿಕೆ ಮಾಡುತ್ತಲೇ ಬಂದಿದೆ ಎಂದು ಮೋದಿ ಹೇಳಿದ್ದಾರೆ. ನಾಳೆ ದೇಶಾದ್ಯಂತ ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಭಾರಿ ಸಂಚಲನ ಸೃಷ್ಟಿಸಿದೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಮೋದಿ ಭಾಷಣ ಹಾಗೂ ರಾಹುಲ್ ಗಾಂಧಿ ಹೇಳಿಕೆ ವಿರುದ್ದ ದೂರುಗಳು ದಾಖಲಾಗಿತ್ತು. ಈ ಕುರಿತು ಉತ್ತರಿಸುವಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಏಪ್ರಿಲ್ 29ರ ಬೆಳಗ್ಗೆ 11 ಗಂಟೆಗೆ ಉತ್ತರಿಸುವಂತೆ ಸೂಚಿಸಿದೆ.
ಮೋದಿಯಿಂದ ಭಾರತದಲ್ಲಿ ಅಗಾಧ ಬದಲಾವಣೆ: ಜೆಪಿ ಮೋರ್ಗನ್ ಸಿಇಒ ಪ್ರಶಂಸೆ