ಮನುಸ್ಮೃತಿ ಬಗ್ಗೆ ಟೀಕೆ: ಹಿಂದೂ ಧರ್ಮದಿಂದ ರಾಹುಲ್‌ ಗಾಂಧಿಗೆ ಬಹಿಷ್ಕಾರ!

Published : Feb 11, 2025, 04:29 AM IST
ಮನುಸ್ಮೃತಿ ಬಗ್ಗೆ ಟೀಕೆ: ಹಿಂದೂ ಧರ್ಮದಿಂದ ರಾಹುಲ್‌ ಗಾಂಧಿಗೆ ಬಹಿಷ್ಕಾರ!

ಸಾರಾಂಶ

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶನಾನಂದ ಸರಸ್ವತಿ ಅವರ ಶಿಬಿರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮನುಸ್ಮೃತಿ ಕುರಿತು ರಾಹುಲ್‌ ಗಾಂಧಿ ಅವರು ತೀವ್ರ ಟೀಕೆ ಮಾಡಿದ್ದಾರೆ. ಇದರಿಂದ ಸನಾತನ ಧರ್ಮದ ಬೆಂಬಲಿಗರಿಗೆ ನೋವಾಗಿದೆ ಎಂದು ಹೇಳಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ನವದೆಹಲಿ(ಫೆ.11): ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಎಂದೇ ಕರೆಯಲಾಗುವ ಧರ್ಮ ಸಂಸತ್‌ ಸಭೆಯು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಂಡಿದೆ. ಮನುಸ್ಮೃತಿ ಕುರಿತ ಟೀಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶನಾನಂದ ಸರಸ್ವತಿ ಅವರ ಶಿಬಿರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮನುಸ್ಮೃತಿ ಕುರಿತು ರಾಹುಲ್‌ ಗಾಂಧಿ ಅವರು ತೀವ್ರ ಟೀಕೆ ಮಾಡಿದ್ದಾರೆ. ಇದರಿಂದ ಸನಾತನ ಧರ್ಮದ ಬೆಂಬಲಿಗರಿಗೆ ನೋವಾಗಿದೆ ಎಂದು ಹೇಳಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆ ಸಂಬಂಧ ತಿಂಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ತಪ್ಪಿದಲ್ಲಿ ಈ ಬಹಿಷ್ಕಾರದ ನಿರ್ಣಯವು ಜಾರಿಗೆ ಬರಲಿದೆ ಎಂದು ಧರ್ಮ ಸಂಸತ್‌ ಹೇಳಿದೆ.

ಕಾಂಗ್ರೆಸ್ ಗೆಲ್ಲುತ್ತೆ ಮುಂದಿನ ಸಲ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ: ಶಿವರಾಜ ತಂಗಡಗಿ ಭವಿಷ್ಯ

ಹಿಂದೂ ಧರ್ಮದ ಕುರಿತು ರಾಹುಲ್‌ ಗಾಂಧಿ ಅವರು ನೀಡಿರುವ ಹೇಳಿಕೆಗಳನ್ನು ಖಂಡಿಸಿರುವ ಧರ್ಮ ಸಂಸತ್‌, ಇದು ಸನಾತನ ಧರ್ಮಕ್ಕೆ ಅಗೌರವ ತೋರುವ ನಡೆ. ಅವರ ಹೇಳಿಕೆಗಳು ಸನಾತನ ಧರ್ಮದ ನಂಬಿಕೆಗಳು ಹಾಗೂ ಹಿಂಬಾಲಕರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟಿದೆ.

ಏನಿದು ಧರ್ಮ ಸಂಸತ್‌?

ಧರ್ಮ ಸಂಸತ್‌ ಒಂದು ಧಾರ್ಮಿಕ ಸಂಸತ್‌ ಆಗಿದೆ. ಹಿಂದೂ ಸಂತರು ಮತ್ತು ನಾಯಕರು ಸೇರಿ ಸನಾತನ ಧರ್ಮದ ನಂಬಿಕೆಗಳ ವಿಚಾರಕ್ಕೆ ಸಂಬಂಧಿಸಿ ಮಹತ್ವದ ವಿಷಯಗಳ ಕುರಿತು ಒಂದೆಡೆ ಸಮಾವೇಶ ಸೇರಿ ಚರ್ಚೆ ನಡೆಸುತ್ತಾರೆ. ಹಿಂದೂಗಳ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಹಿಂದೂಗಳಿಗೆ ಈ ಸಂಸತ್‌ ಮಾರ್ಗದರ್ಶನ ನೀಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ