ಡಿಸೆಂಬರ್‌-ಫೆಬ್ರವರಿ ನಡುವೆ ಕಾಂಗ್ರೆಸ್‌ನ 2ನೇ ಭಾರತ್‌ ಜೋಡೋ ಯಾತ್ರೆ!

Published : Nov 07, 2023, 08:57 PM IST
ಡಿಸೆಂಬರ್‌-ಫೆಬ್ರವರಿ ನಡುವೆ ಕಾಂಗ್ರೆಸ್‌ನ 2ನೇ ಭಾರತ್‌ ಜೋಡೋ ಯಾತ್ರೆ!

ಸಾರಾಂಶ

Rahul Gandhi second Bharat Jodo Yatra Route: ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ನ 2ನೇ ಭಾರತ್‌ ಜೋಡೋ ಯಾತ್ರೆ ಡಿಸೆಂಬರ್‌-ಫೆಬ್ರವರಿ ವೇಳೆಗೆ ನಡೆಯಲಿದೆ. ಗುಜರಾತ್‌ನಿಂದ ಮೇಘಾಲಯದವರೆಗೆ ಈ ಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ.

ನವದೆಹಲಿ (ನ.7): ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಎರಡನೇ ಭಾರತ್ ಜೋಡೋ ಯಾತ್ರೆ ಡಿಸೆಂಬರ್ 2023 ಮತ್ತು ಫೆಬ್ರವರಿ 2024 ರ ನಡುವೆ ನಡೆಯುವ ಸಾಧ್ಯತೆ ಇದೆ. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಗುಜರಾತ್‌ನಿಂದ ಮೇಘಾಲಯಕ್ಕೆ ಪ್ರಯಾಣಿಸಲಿದ್ದಾರೆ. ಈ ಬಾರಿಯ ಪ್ರಯಾಣ ಕೇವಲ ಕಾಲ್ನಡಿಗೆಯಲ್ಲ, ಸ್ವಲ್ಪ ದೂರವನ್ನು ವಾಹನಗಳೂ ಕೂಡ ಕ್ರಮಿಸಲಿದೆ. ಈ ಮಾರ್ಗವನ್ನು ಆಗಸ್ಟ್ 8 ರಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಘೋಷಣೆ ಮಾಡಿದ್ದರು. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೆಪ್ಟೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಯೋಜಿಸುತ್ತಿದೆ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೊದಲ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿತ್ತು. ಇದು ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯವಾಯಿತು. 145 ದಿನಗಳ ಕಾಲ ನಡೆದ ಈ ಯಾತ್ರೆಯಲ್ಲಿ 3570 ಕಿಲೋಮೀಟರ್‌ ಪ್ರಯಾಣ ಮಾಡಲಾಗಿತ್ತು. 

ಈ ಪಯಣದಲ್ಲಿ ಯಾತ್ರೆಯು 14 ರಾಜ್ಯಗಳನ್ನು ದಾಟಿ ಬಂದಿತ್ತು. ಇವುಗಳಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಯುಪಿ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿವೆ.  ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ್ದ ರಾಹುಲ್‌, ನಾನು ಈ ಯಾತ್ರೆಯನ್ನು ಮಾಡಿರುವುದು ನನಗಾಗಲಿ ಅಥವಾ ಕಾಂಗ್ರೆಸ್‌ಗಾಗಿ ಅಲ್ಲ ಆದರೆ ದೇಶದ ಜನರಿಗಾಗಿ. ಈ ದೇಶದ ಬುನಾದಿಯನ್ನು ನಾಶಮಾಡುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದರು.

ಯಾತ್ರೆಯಲ್ಲಿ ರಾಹುಲ್ ಗಾಂಧಿ 12 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು, 100 ಕ್ಕೂ ಹೆಚ್ಚು ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಅವರು ನಡೆಯುವಾಗ 275 ಕ್ಕೂ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿದ್ದರು.

ಯಾತ್ರೆಯಲ್ಲಿ ಸೆಲೆಬ್ರಿಟಿಗಳು, ಬರಹಗಾರರು, ಸೇನಾ ಯೋಧರು ಭಾಗವಹಿಸಿದ್ದರು. ಇವರಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ದೀಪಕ್ ಕಪೂರ್, ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ (ನಿವೃತ್ತ) ಎಲ್ ರಾಮದಾಸ್ ಮತ್ತು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಕೂಡ ಭಾಗಿಯಾಗಿದ್ದರು.

ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ಕೈ ರಣತಂತ್ರ; ಇಂದು ಕಾರ್ಯಕಾರಿ ಸಭೆ: 2ನೇ ಭಾರತ್ ಜೋಡೋ ಯಾತ್ರೆಗೆ ರಾಹುಲ್‌ ಸಿದ್ಧ!

ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಶಿವಸೇನೆಯ ಬಾಳ್ ಠಾಕ್ರೆ ಆದಿತ್ಯ ಠಾಕ್ರೆ, ಪ್ರಿಯಾಂಕಾ ಚತುರ್ವೇದಿ, ಸಂಜಯ್ ರಾವುತ್ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರಂತಹ ವಿರೋಧ ಪಕ್ಷದ ನಾಯಕರೂ ಮೆರವಣಿಗೆಯಲ್ಲಿ ಕೆಲವು ಸ್ಥಳಗಳಲ್ಲಿ ರಾಹುಲ್ಗೆ ಜೊತೆಯಾಗಿದ್ದರು. ರಾಹುಲ್ ಯಾತ್ರೆಯಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳೂ ಪಾಲ್ಗೊಂಡಿದ್ದರು. ಇವರಲ್ಲಿ ಸ್ವರಾ ಭಾಸ್ಕರ್ ಮತ್ತು ಊರ್ಮಿಳಾ ಮಾತೋಂಡ್ಕರ್‌ ಕೂಡ ಸೇರಿದ್ದಾರೆ. ಅದೇ ಸಮಯದಲ್ಲಿ, ಕಮಲ್ ಹಾಸನ್ ದಕ್ಷಿಣ ಭಾರತದಲ್ಲಿ ರಾಹುಲ್ ಜೊತೆ ಕಾಣಿಸಿಕೊಂಡರು. ಪೂಜಾ ಭಟ್, ರಿಯಾ ಸೇನ್, ಸುಶಾಂತ್ ಸಿಂಗ್, ರಶ್ಮಿ ದೇಸಾಯಿ, ಆಕಾಂಕ್ಷಾ ಪುರಿ ಮತ್ತು ಅಮೋಲ್ ಪಾಲೇಕರ್ ಅವರಂತಹ ಚಲನಚಿತ್ರ ಮತ್ತು ಟಿವಿ ವ್ಯಕ್ತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದರು.

ಭಾರತ್‌ ಜೋಡೋ ವರ್ಷಾ​ಚ​ರ​ಣೆ: ರಾಮನಗರದಲ್ಲಿ ಸಿಎಂ ಸಿದ್ದು ಪಾದಯಾತ್ರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ