
ಲಖನೌ(ಫೆ.11) ಲೋಕಸಭಾ ಚುನಾವಣೆಗೂ ಮೊದಲು ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಒಂದೊಂದು ರಾಜ್ಯ ತಲುಪುತ್ತಿದ್ದಂತೆ, ಅಲ್ಲಿನ ಪ್ರಾದೇಶಿಕ ಪಕ್ಷಗಳು ಇಂಡಿಯಾ ಮೈತ್ರಿ ಮುರಿದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ತಲುಪುತ್ತಿದ್ದಂತೆ ಟಿಎಂಸಿ ಏಕಾಂಗಿ ಸ್ಪರ್ಧೆ ಘೋಷಿಸಿತ್ತು. ಬಿಹಾರಕ್ಕೆ ಎಂಟ್ರಿಕೊಡುವ ಮೊದಲು ಜೆಡಿಯು ಮೈತ್ರಿ ಮುರಿದುಕೊಂಡಿತ್ತು. ಇದೀಗ ಉತ್ತರ ಪ್ರದೇಶ ತಲುಪುತ್ತಿದ್ದಂತೆ ಆರ್‌ಎಲ್‌ಡಿ ಪಕ್ಷ ಇಂಡಿಯಾ ಮೈತ್ರಿ ಮುರಿದುಕೊಂಡಿದೆ. ಈ ಮುಖಭಂಗ ತಪ್ಪಿಸಲು ಇದೀಗ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ.ಪಶ್ಚಿಮ ಉತ್ತರ ಪ್ರದೇಶದಿಂದ ಹಾದುಹೋಗಬೇಕಿದ್ದ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಇದೀಗ ಎರಡು ದಿನ ಮುಂಚಿತವಾಗಿ ಮಧ್ಯಪ್ರದೇಶಕ್ಕೆ ತೆರಳಲಿದೆ.
ಮೊದಲಿನ ಪ್ಲಾನ್ ಪ್ರಕಾರ ಫೆಬ್ರವರಿ 14ರಂದು ಉತ್ತರ ಪ್ರದಶಕ್ಕೆ ನ್ಯಾಯ ಯಾತ್ರೆ ಪ್ರವೇಶ ಮಾಡಬೇಕಿತ್ತು. ಆದರೆ ಇದೀಗ ಫೆಬ್ರವರಿ 16ಕ್ಕೆ ಉತ್ತರ ಪ್ರದೇಶಕ್ಕೆ ತಲುಪಲಿದೆ. ಇನ್ನು ಫೆಬ್ರವರಿ 27-28ಕ್ಕೆ ಉತ್ತರ ಪ್ರದೇಶದಿಂದ ಮಧ್ಯಪ್ರದೇಶಕ್ಕೆ ನಿರ್ಗಮಿಸಬೇಕಿದ್ದ ಯಾತ್ರೆ ಇದೀಗ ಫೆಬ್ರವರಿ 22-23ರಂದು ಯುಪಿಯಿಂದ ನಿರ್ಗಮಿಸಲಿದೆ.
ರಾಹುಲ್ ಗಾಂಧಿ ವಯನಾಡು ಕ್ಷೇತ್ರ ಕೇಳಿದ ಮುಸ್ಲಿಂ ಲೀಗ್, ಮೈತ್ರಿಯಲ್ಲಿ ಸೀಟು ಹಂಚಿಕೆ ಕಸರತ್ತು!
ಚಂದೌಲಿ ಮೂಲಕ ರಾಹುಲ್ ಗಾಂಧಿ ಯಾತ್ರೆ ಉತ್ತರ ಪ್ರದೇಶದಲ್ಲಿ ಆರಂಭಗೊಳ್ಳಲಿದೆ. ವಾರಣಾಸಿ, ಬಧೋಗಿ, ಪ್ರಯಾಗರಾಜ್, ಪ್ರತಾಪಗಢ, ಅಮೇಥಿ, ರಾಯಬರೇಲಿ ಹಾಗೂ ಲಖನೌ ಮೂಲಕ ರಾಹುಲ್ ಗಾಂಧಿ ಯಾತ್ರೆ ಸಾಗಲಿದೆ. ಪ್ರಾನ್ ಪ್ರಕಾರ ಅಮೇಥಿ ಹಾಗೂ ರಾಯಬರೇಲಿಗೆ ಫೆಬ್ರವರಿ 19 ರಂದು ತಲುಪಲಿದೆ. ಲಖನೌದಿಂದ ಸೀತಾಪುರಕ್ಕೆ ತೆರಳುವ ಯಾತ್ರೆಯನ್ನು ಬದಲಾಯಿಸಲಾಗಿದೆ. ಇದೀಗ ಲಖನೌದಿಂದ ಕಾನ್ಪುರಕ್ಕೆ ತೆರಳಿ ಮಧ್ಯಪ್ರದೇಶದ ಝಾನ್ಸಿಗೆ ತೆರಳಲಿದೆ. ಮೊದಲ ಪ್ಲಾನ್‌ನಲ್ಲಿ ಕಾನ್ಪುರ ಹಾಗೂ ಝಾನ್ಸಿ ಇರಲಿಲ್ಲ, ಇದೀಗ ಪಶ್ಚಿಮ ಉತ್ತರ ಪ್ರದೇಶದ ಯಾತ್ರೆ ಸಂಪೂರ್ಣ ಬದಲಾಯಿಸಲಾದಿದೆ.
ಪಶ್ಚಿಮ ಉತ್ತರ ಪ್ರದೇಶದ 3 ಲೋಕಸಭಾ ಕ್ಷೇತ್ರಗಳಲ್ಲಿ ಆರ್‌ಎಲ್‌ಡಿ ಪ್ರಾಬಲ್ಯ ಸಾಧಿಸಿದೆ. ಆದರೆ ಆರ್‌ಎಲ್‌ಡಿ ಈಗಾಗಲೇ ಇಂಡಿಯಾ ಮೈತ್ರಿ ಮುರಿದುಕೊಂಡು, ಎನ್‌ಡಿಎಯತ್ತ ವಾಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್, ಕೆಲ ಲಾಜಿಸ್ಟಿಕ್ ಸಮಸ್ಯೆಗಳು ಎದುರಾಗಿದೆ. ಕಾರ್ಯಕರ್ತರು ಶಾಲೆ, ಕಾಲೇಜುಗಳಲ್ಲಿ ತಂಗುತ್ತಿದ್ದರು. ಆದರೆ ಸದ್ಯ ಶಾಲಾ ಕಾಲೇಜುಗಳು ಪರೀಕ್ಷಾ ಕಾರಣದಿಂದ ಲಭ್ಯವಿಲ್ಲ. ಹೀಗಾಗಿ ಮಾರ್ಗ ಬದಲಾಯಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ರಾಹುಲ್ ಭಾರತ್ ಜೋಡೋ ಯಾತ್ರೆಗೆ 71 ಕೋಟಿ ರು. ಖರ್ಚು: 22-23ರಲ್ಲಿ 452 ಕೋಟಿ ರು. ಆದಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ