ಪುಲ್ವಾಮಾ ದಾಳಿ ಲಾಭ ಆಗಿದ್ಯಾರಿಗೆ?: ರಾಹುಲ್ ಕೇಳಿದ 3 ಪ್ರಶ್ನೆಗಳು ಯಾರಿಗೆ?

By Suvarna News  |  First Published Feb 14, 2020, 12:27 PM IST

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಭರ್ತಿ ಒಂದು ವರ್ಷ| ಪುಲ್ವಾಮಾ ಹುತಾತ್ಮರನ್ನು ಸ್ವರಿಸಿದ ದೇಶ| ಪುಲ್ವಾಮಾ ಹುತಾತ್ಮರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ| ಭಿನ್ನ ಸ್ವರದಲ್ಲಿ ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿದ ರಾಹುಲ್ ಗಾಂಧಿ| ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್ ನಾಯಕ| ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ ಎಂದು ಪ್ರಶ್ನಿಸಿದ ರಾಹುಲ್| ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಕಟುಕಿದ ರಾಹುಲ್ ಗಾಂಧಿ|


ನವದೆಹಲಿ(ಫೆ.14): ಪುಲ್ವಾಮಾ ಭಯೋತ್ಪಾದಕ ದಾಳಿಗೆ ಇಂದು ಭರ್ತಿ ಒಂದು ವರ್ಷ ತುಂಬಿದ್ದು, ಇಡೀ ದೇಶ ಹುತಾತ್ಮ ಯೋಧರನ್ನು ಸ್ಮರಿಸುತ್ತಿದೆ. ಪ್ರಧಾಣಿ ಮೋದಿಯಾಗಿ ಎಲ್ಲರೂ ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

Tributes to the brave martyrs who lost their lives in the gruesome Pulwama attack last year. They were exceptional individuals who devoted their lives to serving and protecting our nation. India will never forget their martyrdom.

— Narendra Modi (@narendramodi)

ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಲ್ವಾಮಾ ಹುತಾತ್ಮರನ್ನು ಭಿನ್ನ ಸ್ವರದಲ್ಲಿ ಸ್ಮರಿಸಿದ್ದು, ಭಯೋತ್ಪಾದಕ ದಾಳಿಯಿಂದ ಯಾರಿಗೆ ಲಾಭ ಆಗಿದೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.

Latest Videos

undefined

'ನಾವು ಮರೆತಿಲ್ಲ, ನಾವು ಕ್ಷಮಿಸೋದೂ ಇಲ್ಲ': ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!

ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಸಮಯದಲ್ಲಿ ಮೂರು ಪ್ರಶ್ನೆಗಳನ್ನು ಕೇಳುವುದಾಗಿ ಹೇಳಿದ್ದಾರೆ. ರಾಹುಲ್ ಕೇಳಿದ ಪ್ರಶ್ನೆಗಳು ಇಂತಿವೆ.

1. ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ?
2. ಪುಲ್ವಾಮಾ ದಾಳಿಯ ತನಿಖೆ ಎಷ್ಟು ಪ್ರಗತಿ ಕಂಡಿದೆ?
3. ಭದ್ರತಾ ಲೋಪದ ಆರೋಪದ ಮೇಲೆ ಬಿಜೆಪಿ ಸರ್ಕಾರ ಇದುವರೆಗೆ ಯಾರ ಮೇಲೆ ಕ್ರಮ ಕೈಗೊಂಡಿದೆ?

Today as we remember our 40 CRPF martyrs in the , let us ask:

1. Who benefitted the most from the attack?

2. What is the outcome of the inquiry into the attack?

3. Who in the BJP Govt has yet been held accountable for the security lapses that allowed the attack? pic.twitter.com/KZLbdOkLK5

— Rahul Gandhi (@RahulGandhi)

ಹೀಗೆ ಪುಲ್ವಾಮಾ ದಾಳಿಯ ಕುರಿತು ಮೂರು ಪ್ರಶ್ನೆಗಳನ್ನು ಕೇಳಿರುವ ರಾಹುಲ್ ಗಾಂಧಿ, ಪರೋಕ್ಷವಾಗಿ ದಾಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ನೋಡಿ:  ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"

click me!