Asianet Suvarna News Asianet Suvarna News

ರಾಜ್ಯಸಭೆ ಸಭಾಪತಿಗೆ ಬೇಷರತ್‌ ಕ್ಷಮೆಯಾಚಿಸಿ, ಸಂಸದ ರಾಘವ್‌ ಚಡ್ಡಾಗೆ ಸಲಹೆ ನೀಡಿದ ಸುಪ್ರೀಂ ಕೋರ್ಟ್‌

ಎಎಪಿ ಶಾಸಕರ ಕ್ಷಮೆಯಾಚನೆಯನ್ನು ರಾಜ್ಯಸಭಾ ಅಧ್ಯಕ್ಷರು ಕೂಡ ಸಹಾನುಭೂತಿಯಿಂದ ಪರಿಗಣಿಸಬೇಕು ಮತ್ತು ಮುಂದಿನ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
 

Supreme Court suggests AAP MP Raghav Chadha to tender unconditional apology to RS chairperson san
Author
First Published Nov 3, 2023, 6:07 PM IST

ನವದೆಹಲಿ (ನ.13): ಸೆಲೆಕ್ಟ್‌ ಕಮಿಟಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧಂಕರ್‌ ಅವರನ್ನು ಭೇಟಿ ಮಾಡಿ ಬೇಷರತ್‌ ಕ್ಷಮೆಯಾಚನೆ ಮಾಡುವಂತೆ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸಲಹೆ ನೀಡಿದೆ.  ಆಮ್‌ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದರ ಕ್ಷಮೆಯಾಚನೆಯನ್ನು ರಾಜ್ಯಸಭಾ ಅಧ್ಯಕ್ಷರು ಕೂಡ  ಸಹಾನುಭೂತಿಯಿಂದ ಪರಿಗಣಿಸಬೇಕು ಮತ್ತು ಮುಂದಿನ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅವರು ಸದಸ್ಯರಾಗಿರುವ ಸದನದ ಘನತೆಗೆ ಧಕ್ಕೆ ತರುವ ಉದ್ದೇಶವನ್ನು ಸಂಸದರು ಹೊಂದಿಲ್ಲ ಮತ್ತು ಅವರು ಬೇಷರತ್ ಕ್ಷಮೆ ಯಾಚಿಸಲು ರಾಜ್ಯಸಭಾ ಅಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಲಿದ್ದಾರೆ ಎಂದು ರಾಘವ್‌ ಚಡ್ಡಾ ಅವರನ್ನು ಪ್ರತಿನಿಧಿಸುವ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು ಎಂದು ಎಎನ್‌ಐ ವರದಿ ಮಾಡಿದೆ. ದೀಪಾವಳಿ ರಜೆಯ ನಂತರ ನ್ಯಾಯಾಲಯವು ಈಗ ಅರ್ಜಿಯನ್ನು ಆಲಿಸಲಿದೆ.

ಆಗಸ್ಟ್ 11 ರಂದು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ರಾಷ್ಟ್ರೀಯ ರಾಜಧಾನಿ ದೆಹಲಿಯ ಸರ್ಕಾರದ (ತಿದ್ದುಪಡಿ) ಮಸೂದೆ 2023 ಅನ್ನು ಸೆಲಕ್ಟ್‌ ಕಮಿಟಿಗೆ ವಹಿಸಬೇಕು ಎಂದು ಐವರು ರಾಜ್ಯಸಭಾ ಸದಸ್ಯರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ರಾಘವ್‌ ಚಡ್ಡಾ ಸದನದಲ್ಲಿ ತೋರಿಸಿದ್ದರು. ಆದರೆ, ಐವರು ರಾಜ್ಯಸಭಾ ಸದಸ್ಯರು ಈ ವಿಚಾರವಾಗಿ ರಾಘವ್‌ ಚಡ್ಡಾ ನಮ್ಮ ಒಪ್ಪಿಗೆ ಕೇಳಿರಲಿಲ್ಲ. ನಾವು ಅದಕ್ಕೆ ಸಹಿ ಹಾಕಿರಲಿಲ್ಲ ಎಂದಿದ್ದರು. ಇದರ ಬೆನ್ನಲ್ಲಿಯೇ ಇದು ವಿಶೇಷ ಹಕ್ಕುಗಳ ಉಲ್ಲಂಘನೆ ಎಂದು ಬಿಜೆಪಿ ಟೀಕಿಸಿತ್ತು. ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಯು, ರಾಷ್ಟ್ರ ರಾಜಧಾನಿಯ ಕೆಲವು ಸೇವೆಗಳಲ್ಲಿ ಅಧಿಕೃತ ಸರ್ಕಾರಕ್ಕಿಂತ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ.

ವಿಶೇಷ ಹ್ಕು ಉಲ್ಲಂಘನೆಯ ಆರೋಪದ ಮೇಲೆ ಐವರು ಸಂಸದರು ನೀಡಿದ ದೂರಿನ ಮೇರೆಗೆ ಪ್ರಿವಿಲಜ್‌ ಸಮಿತಿಗೆ ಸೂಚಿಸಲಾಯಿತು ಮತ್ತು ಸಮಿತಿಯು ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ ರಾಘವ್‌ ಚಡ್ಡಾ ಅವರನ್ನು ಅಮಾನತು ಮಾಡಲಾಗಿದೆ.  ಅಕ್ಟೋಬರ್ 30 ರಂದು, ಸುಪ್ರೀಂ ಕೋರ್ಟ್, ತನ್ನ ಅನಿರ್ದಿಷ್ಟ ಅಮಾನತುಗೊಳಿಸುವಿಕೆಯನ್ನು ಪ್ರಶ್ನಿಸಿ ಚಡ್ಡಾ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಸಂಸತ್ತಿನ ಸದಸ್ಯರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದು, ವಿಶೇಷವಾಗಿ ವಿರೋಧ ಪಕ್ಷದವರು, ಸಾಂವಿಧಾನಿಕ ನ್ಯಾಯಾಲಯಕ್ಕೆ "ಗಂಭೀರ ಕಾಳಜಿ"ಯ ವಿಷಯವಾಗಿದೆ ಎಂದು ಹೇಳಿತ್ತು.

ಬಾಲ್ಯದ ಹಣಕಾಸಿನ ತೊಂದರೆ ಬಗ್ಗೆ ಪರಿಣಿತಿ ಹೇಳಿರುವುದು ಸುಳ್ಳು; ಸಹಪಾಠಿಯ ಆರೋಪ

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು, ಸಂಸತ್ತು ಆಡಳಿತ ವಿನಿಯೋಗಕ್ಕಿಂತ ಭಿನ್ನವಾದ ಧ್ವನಿಯನ್ನು ಹೊಂದಿರಬೇಕು ಎಂದು ಹೇಳಿದೆ.

ಪರಿಣಿತಿ ಮದುವೆಗೆ ಗೈರಾಗಿ ಸ್ನೇಹಿತೆಯ ಸಮಾರಂಭದಲ್ಲಿ ಪ್ರಿಯಾಂಕಾ, ತಂಗಿಗಿಂತ ಸ್ನೇಹಿತರೇ ಹೆಚ್ಚಾ?

Follow Us:
Download App:
  • android
  • ios