
ಗುರುಗಾಂವ್ (ಜು.15) ಪ್ರತಿಭಾನ್ವಿತ ಟೆನಿಸ್ ಪಟು ರಾಧಿಕಾ ಯಾದವ್ ಹತ್ಯೆ ಕುರಿತು ತನಿಖೆ ನಡೆಯುತ್ತಿದೆ. ತಂದೆಯ ಗುಂಡೇಟಿಗೆ ಬಲಿಯಾದ ರಾಧಿಕಾ ಯಾದವ್ ಹತ್ಯೆ ಕುರಿತು ತನಿಖೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಹಲವು ಪ್ರಶ್ನೆಗಳು ಮೂಡಿದೆ. ಪ್ರಮುಖವಾಗಿ ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಖಾತೆ ಹಾಗೂ ಪೋಸ್ಟ್ ಹಲವು ಅನುಮಾನ ಹೆಚ್ಚಿಸಿದೆ. ಪ್ರಮುಖವಾಗಿ ಈಕೆಯ ಬಯೋದಲ್ಲಿ ಸ್ಪಾನಿಶ್ ಭಾಷೆಯಲ್ಲಿ ಬರೆದಿರುವ ವಾಕ್ಯ ಹಾಗೂ ಆಕೆಯ ಪೋಸ್ಟ್ ಇದೀಗ ಹತ್ಯೆ ಹಿಂದಿನ ಅನುಮಾನ ಹೆಚ್ಚಿಸಿದೆ.
ತೊಡೊ ಪಸಾ ಪೊರ್ ಅಲ್ಗೋ, ಸ್ಪಾನೀಶ್ ಭಾಷೆಯ ಈ ವಾಕ್ಯದ ಅರ್ಥವೇನು?
ತೊಡೊ ಪಸಾ ಪೊರ್ ಅಲ್ಗೋ ಇದು ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಖಾತೆ ಬಯೋದಲ್ಲಿ ಬರೆಯಲಾಗಿದೆ. ಇದರ ಅರ್ಥ ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ. ಇದು ಆಕೆಯ ಬಯೋದಲ್ಲಿ ಉಲ್ಲೇಖಿಸಲಾಗಿದೆ. ಈಕೆಯ ಬಯೋ ಅಪ್‌ಡೇಟ್ ಮಾಡಿದ ಬಳಿಕ ರಾಧಿಕಾ ಯಾದವ್ ಹತ್ಯೆಯಾಗಿದೆ. ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಬಯೋ ಅಪ್‌ಡೇಟ್ ಬಳಿಕ ಹತ್ಯೆ ನಡೆದಿದೆ ಅನ್ನೋದು ಹಲವು ಅನುಮಾನ ಹೆಚ್ಚಿಸಿದೆ.
ರಾಧಿಕಾ ಯಾದವ್ ಖಾತೆಯಲ್ಲಿ 6 ಪೋಸ್ಟ್
ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಖಾತೆಯನ್ನು ನಿರ್ವಹಿಸುತ್ತಿರುವುದು ಆಕೆಯ ಗೆಳತಿ ಹಿಮಾಂಶಿಕಾ ಸಿಂಗ್ ರಜಪೂತ್. ಈ ಖಾತೆಯಲ್ಲಿ ಒಟ್ಟು 6 ಪೋಸ್ಟ್ ಮಾಡಲಾಗಿದೆ. ಈ ಪೈಕಿ ಒಂದು ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಗೆ ಟ್ಯಾಗ್ ಮಾಡಿದ್ದಾಳೆ. ಇನ್ನುಳಿದ 5 ಪೋಸ್ಟ್ ಹಾಗೇ ಪೋಸ್ಟ್ ಮಾಡಲಾಗಿದೆ. ರಾಧಿಕಾ ಯಾದವ್ ಖಾತೆಯನ್ನು ಗೆಳತಿ ನಿರ್ವಹಿಸುತ್ತಿರುವುದೇಕೆ? ಆಕೆಯ ಆರೋಪ ಹಾಗೂ ಕುಟುಂಬಸ್ಥರ ಮಾತುಗಳು ತಾಳೆಯಾಗುತ್ತಿಲ್ಲ. ರಾಧಿಕಾ ಯಾದವ್ ಮೇಲೆ ತಂದೆ ಗುಂಡು ಹಾರಿಸಲು ಮೂರನೇ ವ್ಯಕ್ತಿ ಕಾರಣ ಅನ್ನು ಅನುಮಾನಗಳು ಹೆಚ್ಚಾಗುತ್ತಿದೆ.
ರಾಧಿಕಾ ಮನೆಯಲ್ಲಿ ಆಕೆಗೆ ನಿರ್ಬಂಧ ಆರೋಪ ತಳ್ಳಿ ಹಾಕಿದ ಕುಟುಂಬ
ರಾಧಿಕಾ ಯಾದವ್ ಸಾವಿನ ಬಳಿಕ ಹಲವು ಆರೋಪಗಳ ಪೈಕಿ ಆಕೆಯ ಕುಟುಂಬದ ಮೇಲೆ ಗೆಳತಿ ಗಂಭೀರ ಆರೋಪ ಮಾಡಿದ್ದರು. ಈ ಪೈಕಿ ರಾಧಿಕಾ ಯಾದವ್‌ಗೆ ಕುಟುಂಬಸ್ಥರು ತೀವ್ರ ನಿರ್ಬಂಧ ವಿಧಿಸಿದ್ದರು ಎಂದು ಆರೋಪಿಸಿದ್ದರು. ಶಾರ್ಟ್ಸ್ ಹಾಕಲು ಬಿಡುತ್ತಿರಲಿಲ್ಲ, ಮಾಡರ್ನ್ ಡ್ರೆಸ್ ಹಾಕಲು ನಿರ್ಬಂಧ ಹಾಕಿದ್ದರು. ಒಬ್ಬರ ಜೊತೆ ಮಾತನಾಡಲು ಬಿಡುತ್ತಿರಲಿಲ್ಲ. ಅನುಮಾನ ವ್ಯಕ್ತಪಡಿಸುತ್ತಿದ್ದರು. ಮನೆಯಿಂದ ಕಲವೇ ಮೀಟರ್ ದೂರದಲ್ಲಿದ್ದ ಆಕೆಯ ಅಕಾಡೆಮಿಯಿಂದ ಬರಲು ಒಂದು ನಿಮಿಷ ತಡವಾದರೂ ಆಕೆಯ ಪ್ರಶ್ನೆಗಳ ಸುರಿಮಳೆ ಎದುರಿಸುತ್ತಿದ್ದಳು ಎಂದು ಹಿಮಾಂಶಿಕಾ ಸಿಂಗ್ ರಜಪೂತ್ ಆರೋಪಿಸಿದ್ದರು. ಆದರೆ ಈಕೆಯ ಆರೋಪವನ್ನು ಕುಟುಂಬಸ್ಥರು ತಳ್ಳಿ ಹಾಕಿದ್ದಾರೆ.
ರಾಧಿಕಾ ಯಾದವ್‌ಗೆ ಯಾವುದೇ ನಿರ್ಬಂಧ ಇರಲಿಲ್ಲ. ಆಕೆಯ ಗೆಳತಿ ಹೇಳಿದ ರೀತಿಯಲ್ಲಿ ಯಾವುದೇ ನಿರ್ಬಂಧವಿದ್ದರೆ ಈಕೆ ಟೆನಿಸ್ ಪಟು ಆಗಲು ಸಾಧ್ಯವಾಗುತ್ತಿರಲಿಲ್ಲ. ಟೆನಿಸ್ ಟೂರ್ನಿಗೆ ದೇಶದೆಲ್ಲೆಡೆ ಪ್ರಯಾಣಿಸಿದ್ದಾಳೆ. ತಿಂಗಳು ಗಟ್ಟಲೆ ಬೇರೆ ರಾಜ್ಯದಲ್ಲಿ ತರಬೇತಿ, ಅಭ್ಯಾಸ, ಟೂರ್ನಮೆಂಟ್ ಆಡಿದ್ದಾಳೆ. ಆಕೆಯ ಡ್ರೆಸ್, ಪ್ರಯಾಣ ಸೇರಿದಂತೆ ಯಾವ ವಿಚಾರದಲ್ಲಿ ಕುಟುಂಬ ನಿರ್ಬಂಧ ಹೇರಿಲ್ಲ ಎಂದು ಕುಟುಂಬಸ್ಥರು ತಿರುಗೇಟು ನೀಡಿದ್ದಾರೆ.
ವಿದೇಶದಲ್ಲಿ ನೆಲೆಸಲು ಬಯಸಿದ್ದಳಾ ರಾಧಿಕಾ ಯಾದವ್
ಪೊಲೀಸ್ ತನಿಖೆಯಲ್ಲಿ ರಾಧಿಕಾ ಯಾದವ್ ಕೋಚ್ ಅಜಯ್ ಸಿಂಗ್ ಜೊತೆ ನಡೆಸಿದ ಚಾಟ್ ಬಹಿರಂಗವಾಗಿದೆ. ಈ ಪೈಕಿ ಒಂದು ಚಾಟ್‌ನಲ್ಲಿ ಮನೆ ಬಿಟ್ಟು ವಿದೇಶದಲ್ಲಿ ನೆಲೆಸಲು ಬಯಸಿರುವುದಾಗಿ ಮೆಸೇಜ್ ಮಾಡಿದ್ದಳು. ಹೀಗಾಗಿ ರಾಧಿಕಾ ಯಾದವ್ ಹತ್ಯೆ ಹಲವು ಅನುಮಾನಗಳು, ಪ್ರಶ್ನೆಗಳನ್ನು ಹೆಚ್ಚಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ