
ಭೋಪಾಲ್(ಡಿ.27): ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಮಾಫಿಯಾ ಚಟುವಟಿಕೆಗಳು ನಿಲ್ಲಬೇಕು. ಇಲ್ಲದಿದ್ದರೆ ಇಂಥ ಕೃತ್ಯಗಳಲ್ಲಿ ತೊಡಗಿರುವವರನ್ನು 10 ಅಡಿ ಗುಂಡಿಯಲ್ಲಿ ಹಾಕಿ ಹೂತು ಹಾಕುತ್ತೇನೆ ಎಂದು ಮಾಫಿಯಾ ಗ್ಯಾಂಗ್‌ಗಳ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಗುಡುಗಿದ್ದಾರೆ.
‘ರಾಜ್ಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡಲಾಗದು. ಅಂಥವರು ರಾಜ್ಯವನ್ನು ಬಿಟ್ಟು ತೊಲಗಬೇಕು. ಇಲ್ಲದಿದ್ದರೆ ಅವರನ್ನು 10 ಅಡಿ ಗುಂಡಿಗೆ ಹಾಕುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ದೇಶ, ಒಂದು ಚುನಾವಣೆಗಾಗಿ ಬಿಜೆಪಿ ಶೀಘ್ರದಲ್ಲೇ ವೆಬಿನಾರ್
‘ನಮ್ಮ ಸರ್ಕಾರವು ಕಾನೂನು ಪಾಲನೆ ಮಾಡುವ ಜನ ಸಾಮಾನ್ಯರಿಗೆ ಹೂವಿನಷ್ಟೇ ಮೃದುವಾಗಿರುತ್ತದೆ. ಆದರೆ ಅಕ್ರಮ ಚಟುವಟಿಕೆಗಳಲ್ಲಿ ವಿನಾಶಕಾರಿಗಿಂತಲೂ ಭಯಂಕರವಾಗಿರಲಿದೆ’ ಈ ಹಿಂದೆ ಕೂಡ ಚೌಹಾಣ್ ಹೇಳಿದ್ದರು.
ರಾಷ್ಟ್ರವ್ಯಾಪಿ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಆನ್‌ಲೈನ್ ಸಂವಾದದ ಮುನ್ನ ಹೋಶಂಗಾಬಾದ್ ಜಿಲ್ಲೆಯ ಬಾಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾನ್ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ