
ನವದೆಹಲಿ (ಅ.2): "ಮಮ್ಮಾ ನಾ ಕರೋ (ಅಮ್ಮ ಹಾಗೆ ಮಾಡಬೇಡಿ)" ಎಂದು ಪಂಜಾಬಿ ಭಾಷೆಯಲ್ಲಿ ಹುಡುಗನೊಬ್ಬ ಹುಡುಗನೊಬ್ಬ ಹೇಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗನ ತಾಯಿ, ತನ್ನ ಅತ್ತೆಯಾಗಿರುವ ವೃದ್ಧ ಮಹಿಳೆಯನ್ನು ಭೀಕರವಾಗಿ ಥಳಿಸುತ್ತಿರುವುದು ಕಂಡುಬಂದಿದೆ. ಸೊಸೆ ತನ್ನ ಅತ್ತೆಯ ಕೂದಲನ್ನು ಹಿಡಿದು, ಆಕೆಯ ಕೆನ್ನೆಗೆ ಹೊಡೆದು ಪರಿಪರಿಯಾಗಿ ನಿಂದಿಸಿದ್ದಾಳೆ. ಈ ವೇಳೆ ತನ್ನ ಮಗ ಆಕೆಯನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ಮಾಡಿರುವ ಮನವಿಯನ್ನೂ ನಿರ್ಲಕ್ಷ್ಯ ಮಾಡಿದ್ದಾಳೆ. ಇಡೀ ಹಲ್ಲೆಯನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವ ಹುಡುಗ, ಪಂಜಾಬ್‌ನ ಗುರುದಾಸ್ಪುರದಲ್ಲಿರುವ ತನ್ನ ಮನೆಯಲ್ಲಿ ಇದು ಪ್ರತಿದಿನವೂ ನಡೆಯುತ್ತಿರುವ ಘಟನೆ ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೋ ಹುಡುಗನ ತಾಯಿ ಹರ್ಜೀತ್ ಕೌರ್, ಆಕೆಯ ಅತ್ತೆ ಗುರ್ಬಜನ್ ಕೌರ್ ಅವರ ಕೂದಲನ್ನು ಹಿಡಿದು ಎಳೆದಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಆಕೆಯ ಮಗ ಅಜ್ಜಿಯನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಾಗ, ಆಕೆ ಅದೇ ರೀತಿ ಮಾಡುತ್ತಾಳೆ. ಆದರೆ, ವೃದ್ಧೆಯ ಮೇಲೆ ಹೊಡೆತ ಹಾಗೂ ಅವಾಚ್ಯ ಶಬ್ದಗಳ ಸುರಿಮಳೆಯೇ ಆಗುತ್ತಿರುತ್ತದೆ.
"ತು ಕೆ***ಯಿ ಆ (ನೀನು ಸೂ*ಳೆಯಾ?)" ಎಂದು ಹರ್ಜೀತ್ ಕೌರ್ ತನ್ನ ಅತ್ತೆಯನ್ನು ಕೇಳುತ್ತಾ, ಆಕೆಯ ವಯಸ್ಸನ್ನೂ ನೋಡದೇ ಸೋಫಾಗೆ ತಳ್ಳುತ್ತಾಳೆ. ಆ ಬಳಿಕ ಹರ್ಜೀತ್ ಕೌರ್, ಸ್ಟೀಲ್ ಗ್ಲಾಸ್‌ಅನ್ನು ಹಿಡಿದು ಗುರ್ಬಜನ್ ಕೌರ್ ಗೆ ಎರಡು ಬಾರಿ ಹೊಡೆದು ನಂತರ ಅದನ್ನು ನೆಲಕ್ಕೆ ಬಡಿಯುತ್ತಿರುವುದು ದಾಖಲಾಗಿದೆ.
ಕೆಲ ಸಮಯ ಜಗಳವಾದ ಬಳಿಕ ಹರ್ಜೀತ್ ಕೌರ್ ಮತ್ತೊಮ್ಮೆ ತನ್ನ ಅತ್ತೆಯನ್ನು ತಳ್ಳುತ್ತಾಳೆ. ಗುರ್ಬಜನ್ ಕೌರ್ ತನ್ನ ಕಾಲನ್ನು ಬಳಸಿ ತನ್ನ ಸೊಸೆಯನ್ನು ದೂರ ತಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಾಳೆ, ಆದರೆ ಸೊಸೆಯ ಆಕೆಯ ಕಾಲನ್ನು ಹಿಡಿದು ಮತ್ತೆರಡು ಬಾರಿ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಅಸಹಾಯಕಳಾಗುವ ಗುರ್ಬಜನ್ ಕೌರ್ ಜೋರಾಗಿ ಅಳುತ್ತಾಳೆ.
ಈ ಘಟನೆ ಭಾನುವಾರ ನಡೆದಿದ್ದು, ಹರ್ಜೀತ್ ಕೌರ್ ತನ್ನ ಅತ್ತೆ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಹುಡುಗ ರೆಕಾರ್ಡ್ ಮಾಡಿದ್ದಾನೆ. ನನ್ನ ಎಲ್ಲಾ ಆಸ್ತಿಯನ್ನು ವರ್ಗಾಯಿಸುವಂತೆ ಹರ್ಜೀತ್ ಒತ್ತಡ ಹೇರುತ್ತಿದ್ದಾಳೆ ಎಂದು ವಿಧವೆ ಗುರ್ಬಜನ್ ಕೌರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆಕೆಯ ಮೊಮ್ಮಗ ಚರತ್‌ವೀರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದು, ತನ್ನ ತಾಯಿ ಕುಡಿದು ಅಜ್ಜಿಯನ್ನು ಆಗಾಗ್ಗೆ ಹೊಡೆಯುತ್ತಿದ್ದರು ಮತ್ತು ನಿಂದಿಸುತ್ತಿದ್ದರು ಎಂದಿದ್ದು, ತಾಯಿ ತನ್ನನ್ನು ಮತ್ತು ತನ್ನ ತಂದೆಯನ್ನು ಸಹ ಹೊಡೆದಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಚರತ್‌ವೀರ್ ತನ್ನ ವೀಡಿಯೊದೊಂದಿಗೆ ಪೊಲೀಸರ ಬಳಿಗೆ ಹೋದಾಗ, ಹಲ್ಲೆಯನ್ನು ರೆಕಾರ್ಡ್ ಮಾಡುವ ಬದಲು ಏಕೆ ಮಧ್ಯಪ್ರವೇಶಿಸಲಿಲ್ಲ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.
"ನಾನು ಘಟನೆಯನ್ನು ಸಾಕ್ಷಿ ಬೇಕು ಎನ್ನುವ ಕಾರಣಕ್ಕೆ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದೇನೆ. ನನ್ನ ತಾಯಿ ಒಮ್ಮೆ ನನ್ನ ವಿರುದ್ಧವೂ ದೂರು ದಾಖಲಿಸಿದ್ದಾರೆ ಮತ್ತು ಸೇಡು ತೀರಿಸಿಕೊಳ್ಳುವುದಾಗಿ ಮತ್ತು ತನ್ನ ಕೃತ್ಯಗಳನ್ನು ಪುನರಾವರ್ತಿಸುವುದಾಗಿ ಬೆದರಿಕೆ ಹಾಕಿದ್ದಾರೆ" ಎಂದು ಹುಡುಗ ಹೇಳಿದ್ದಾನೆ.
ಗುರ್ಬಜನ್ ಕೌರ್ ತಮ್ಮ ಸೊಸೆಯ ಮೇಲೆ "ದೈಹಿಕ ಹಲ್ಲೆಯ ದೀರ್ಘ ಇತಿಹಾಸ"ವಿದ್ದು, ಇದನ್ನು ಅವರ ಮೊಮ್ಮಗ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಚರತ್‌ವೀರ್ ಹಂಚಿಕೊಂಡ ವೀಡಿಯೊಗಳಲ್ಲಿ ಒಂದರಲ್ಲಿ, ಹರ್ಜೀತ್ ಕೌರ್ ತನ್ನ ಪತಿಗೆ ಚಪ್ಪಲಿಯಿಂದ ಹೊಡೆಯುವುದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ, ಚರತ್‌ವೀರ್ ಅವರನ್ನು ಅಜ್ಜಿಯಿಂದ ದೂರವಿಡಲು ಅವರ ತಾಯಿ ಬಂಧಿಸಿರುವಂತೆ ಕಂಡಿದೆ. ಪೊಲೀಸರು ಹರ್ಜೀತ್ ಕೌರ್ ಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ