Punjab: ಸಿನಿಮಾ ಸ್ಟ್ರೈಲ್‌ನಲ್ಲಿ ಪೊಲೀಸರ ಡ್ರಾಮಾ, ಹಿಂದೂ ಪೂಜಾರಿ ಮನೆಯಲ್ಲಿ ಡ್ರಗ್ಸ್; ಗುಟ್ಟುರಟ್ಟು ಮಾಡಿದ CC ಕ್ಯಾಮೆರಾ!

Published : Nov 03, 2026, 12:53 PM IST
punjab police cctv video screen screenshot

ಸಾರಾಂಶ

ಪಂಜಾಬ್‌ನ ಖನ್ನಾದಲ್ಲಿ ಹಿಂದೂ ಪೂಜಾರಿಯೊಬ್ಬರ ಮನೆಯಲ್ಲಿ ಪೊಲೀಸರೇ ಡ್ರಗ್ಸ್ ಇಟ್ಟು ಸಿಕ್ಕಿಹಾಕಿಸುವ ಯತ್ನ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಐ ಸುಖ್‌ದೇವ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದ್ದು, ಬಂಧಿತ ಪೂಜಾರಿಯನ್ನು ಬಿಡುಗಡೆ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಪ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

ಅಮೃತಸರ: ಡ್ರಗ್ ಪ್ರಕರಣದಲ್ಲಿ ಹಿಂದೂ ದೇವಾಲಯದ ಪೂಜಾರಿಯನ್ನು ಸಿಕ್ಕಿ ಬೀಳುವಂತೆ ಮಾಡಲು ಪೊಲೀಸರೇ ನಡೆಸಿದ ಡ್ರಾಮಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲೇ ಮಾಡಿದ ಪ್ಲ್ಯಾನ್‌ನಂತೆ ಎಲ್ಲವೂ ನಡೆದಿತ್ತು. ಆದರೆ ಕೊನೆಗೆ ರಹಸ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕ ದೃಶ್ಯಗಳು ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಸಾಕ್ಷಿಯೊಂದಿಗೆ ಪೊಲೀಸರ ಸಂಚು ಬೆಳಕಿಗೆ ಬಂದ ಬೆನ್ನಲ್ಲೇ ಪಂಜಾಬ್‌ನಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ.

ಪಂಜಾಬ್‌ನ ಲುಧಿಯಾ ಜಿಲ್ಲೆಯ ಖನ್ನಾದಲ್ಲಿ ನೆಲೆಸಿರುವ ಹಿಂದೂ ಧರ್ಮದ ಮುಖಂಡ ಮನೆಯಲ್ಲಿ ಸರ್ಚ ನಡೆಸಲು ಪೊಲೀಸರು ಅನುಮತಿ ಪಡೆದುಕೊಂಡಿದ್ದರು. ಆದರೆ ಸರ್ಚ್ ನಡೆಸುವ ಮುನ್ನ ಪೊಲೀಸರೇ ಹಿಂದೂ ಮುಖಂಡರ ಮನೆಯ ಹಾಸಿಗೆ ಕೆಳಗೆ ಡ್ರಗ್ಸ್ ಇಟ್ಟಿದ್ದರು. ಆದರೆ ಈ ರೂಮ್‌ನಲ್ಲಿ ಸಿಸಿಟಿವಿ ಇರುವುದು ಪೊಲೀಸರ ಗಮನಕ್ಕೆ ಬಂದಿರಲಿಲ್ಲ.

ಇದರೊಂದಿಗೆ ಡ್ರಗ್ಸ್ ಇಟ್ಟಿದ್ದ ಸಿಐಎ ವಿಭಾಗದ ಎಸ್‌ಐ ಸುಖ್‌ದೇವ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಖನ್ನಾ ಎಸ್ಎಸ್ಪಿ ಡಾಕ್ಟರ್ ದರ್ಪಣ್ ತಿಳಿಸಿದ್ದಾರೆ. ಅಲ್ಲದೇ ಡ್ರಗ್ಸ್ ಕೇಸ್‌ನಲ್ಲಿ ಬಂಧನ ಮಾಡಲಾಗಿದ್ದ ಮಹೋಂತ್ ಕಾಶ್ಮೀರ್ ಗಿರಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಅಸಲಿಗೆ ನಡೆದಿದ್ದೇನು?

ಖನ್ನಾ ಪಟ್ಟಣದ ಮಹೋಂತ್ ಕಾಶ್ಮೀರ್ ಗಿರಿ ನಿವಾಸದಲ್ಲಿ ಪೊಲೀಸರು ನಡೆದ ತನಿಖೆಯೇ ವಿವಾದ ಮೂಲವಾಗಿದೆ. ಪೊಲೀಸರು ತಿಳಿಸಿರುವ ಅನ್ವಯ, ಕಾಶ್ಮೀರ್ ಗಿರಿ ಚಾಲಕ ಗುರ್ಜಂತ್ ಸಿಂಗ್ ಅಲಿಯಾಸ್ ಜಂಟಾ ಬಳಿ 7.5 ಗ್ರಾಂ ಹೇರಾಯಿನ್ ಸಿಕ್ಕಿದೆ ಎಂದು ಆತನನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಸಿಕ್ಕ ಮಾಹಿತಿಯ ಅನ್ವಯ, ಕಾಶ್ಮೀರ್ ಗಿರಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಮನೆಯಲ್ಲಿ ಸರ್ಚ್ ನಡೆಸಿದ ಸಂದರ್ಭದಲ್ಲಿ ಮಂಚದ ಕೆಳಗೆ ಸುಮಾರು 30 ಗ್ರಾಂ ಹೇರಾಯಿನ್ ವಶಕ್ಕೆ ಪಡೆದುಕೊಂಡಿದ್ದರು. ಇದರೊಂದಿಗೆ ಗಿರಿಯನ್ನು ಪ್ರಕರಣದಲ್ಲಿ ಬಂಧನ ಮಾಡಿದ್ದರು.

ಸಿಸಿಟಿವಿಯಲ್ಲಿ ರಹಸ್ಯ ಬಯಲು!

ಮನೆಯಲ್ಲಿ ಕುಟುಂಬ ಸದಸ್ಯರು ರಹಸ್ಯ ಕ್ಯಾಮೆರಾ ಅಳವಡಿಕೆ ಮಾಡಿದ್ದರು. ಈ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ದೃಶ್ಯಗಳು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿ, ಅಸಲಿ ಸತ್ಯ ಬೆಳಕಿಗೆ ಬರುವಂತೆ ಮಾಡಿದೆ. ಸಿಸಿಟಿವಿ ದೃಶ್ಯಗಳು ಪೊಲೀಸತ ತನಿಖೆ ಮೇಲೆಯೇ ಅನುಮಾನ ಮಾಡುವಂತೆ ಮಾಡಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಸಿವೀಲ್ ಬಟ್ಟೆಯಲ್ಲಿದ್ದ ಎಸ್ಐ ಸುಖದೇವ್ ಸಿಂಗ್ ತಂಡ ಸರ್ಚ್ ಆಪರೇಷನ್‌ಗೆ ಬರುವ ಮುನ್ನವೇ ರೂಮ್‌ಗೆ ಎಂಟ್ರಿ ಕೊಟ್ಟಿರುವುದು ಕಂಡು ಬರುತ್ತದೆ. ಅಲ್ಲಿ ರಹಸ್ಯವಾಗಿ ಒಂದು ಪ್ಯಾಕೆಟ್ ತೆಗೆದು ಮಂಚದ ಕೆಳಗೆ ಇಡುವುದು ಸ್ಪಷ್ಟವಾಗಿ ಕಾಣುತ್ತದೆ. ಇದಾದ ಕೆಲವೇ ದಿನಗಳಲ್ಲಿ ಪೊಲೀಸರು ಎಂಟ್ರಿ ಕೊಟ್ಟು ಕಾಶ್ಮೀರ್ ಗಿರಿಯನ್ನು ಕರೆದುಕೊಂಡು ಈ ರೂಮ್‌ಗೆ ಬಂದಿದ್ದರು. ಆ ಬಳಿಕ ನಡೆದ ತನಿಖೆಯಲ್ಲಿ ಎಸ್‌ಐ ಸುಖ್‌ದೇವ್ ಮುಚ್ಚಿಟ್ಟ ಸ್ಥಳದಿಂದಲೇ ಹೇರಾಯಿನ್ ವಶಕ್ಕೆ ಪಡೆದುಕೊಂಡಂತೆ ಡ್ರಾಮಾ ಮಾಡಿದ್ದರು.

ತನಿಖೆ ಎಸ್ಐಟಿ ಏರ್ಪಾಡು?

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ವೈರಲ್ ವಿಡಿಯೋ ಹಿಂದಿನ ಸತ್ಯಾಂಶ, ಅಮಾನತು ಆದ ಎಸ್‌ಐ ಪಾತ್ರ, ಮಾದಕ ವಸ್ತುಗಳ ವಶಕ್ಕೆ ಪಡೆದಿರುವ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಅಲ್ಲದೇ, ಆಪರೇಷನ್‌ನಲ್ಲಿ ಇತರ ಪೊಲೀಸ್ ಸಿಬ್ಬಂದಿಯ ಪಾತ್ರವನ್ನು ತನಿಖೆ ನಡೆಸಲಾಗುತ್ತಿದೆ.

ಆಪ್ ಸರ್ಕಾರದ ವಿರುದ್ಧ ವಿಮರ್ಶೆ

ಘಟನೆ ವೈರಲ್ ಆದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಸರ್ಕಾರ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಿಮರ್ಶೆಗಳು ಕೇಳಿ ಬಂದಿದೆ. ಪಂಜಾಬ್ ಪೊಲೀಸರ ನಡೆಯ ಬಗ್ಗೆ ಶಿರೋಮಣಿ ಅಕಾಲಿದಳ ನಾಯಕ ಸುಖ್‌ಬಿರ್ ಸಿಂಗ್ ಬಾದಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಆಪ್ ಸರ್ಕಾರ ಆಡಳಿತ ಅವಧಿಯಲ್ಲಿ ಶಾಂತಿ ಮತ್ತು ಭದ್ರತೆಗಳ ವ್ಯವಸ್ಥೆ ಹೀಗಿದೆ! ಖನ್ನಾ ಪೊಲೀಸ್ ಎಸ್‌ಐ ಒಬ್ಬರ ಮನೆಯಲ್ಲಿ ರಹಸ್ಯವಾಗಿ ಡ್ರಗ್ಸ್ ಇಡುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಪಂಜಾಬ್ ಜನರಿಗೆ ಮನೆಗೆ ಬಂದು ಸೇವೆ ಮಾಡ್ತೀವಿ ಎಂದು ಆಪ್ ಪಕ್ಷ ಭರವಸೆ ನೀಡಿತ್ತು. ಆದರೆ ಈಗ ಸ್ವತಃ ಡ್ರಗ್ಸ್ ಸಪ್ಲೇ ಮಾಡ್ತಿದೆ ಅಂತ ಗೊತ್ತಾ? ಪಂಜಾಬ್ ಪೊಲೀಸರಿಂದ ನೀವು ಜನರಿಗೆ ನೀಡುತ್ತಿರುವ ಬದಲಾವಣೆ ಇದೇನಾ' ಎಂದು ಸಿಎಂ ಅವರಿಗೆ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಗುಡ್ ಮಾರ್ನಿಂಗ್ ಅಣ್ಣಾ' ಎನ್ನುವವರಿಗೇ ಪಿಂಕ್ ಸ್ಲಿಪ್ ನೀಡಬೇಕಾಯ್ತು; 12 ಉದ್ಯೋಗಿಗಳಿಗಾಗಿ ಕಣ್ಣೀರಿಟ್ಟ ಐಟಿ ಮ್ಯಾನೇಜರ್!
₹1 ಲಕ್ಷ ಗಳಿಸ್ತಿದ್ರೂ ಹಳ್ಳಿಯ ಸಹವಾಸವೇ ಬೇಡೆಂದು ನಗರಕ್ಕೆ ಹೊರಟ ಯುವಕ.. ಆತ ನೀಡಿದ ಕಾರಣವೇ ವಿಚಿತ್ರ!