ಶಹೀದ್ ಭಗತ್ ಸಿಂಗ್ ನಗರ್(ಮಾ.14): ಪಂಜಾಬ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಾರ್ಟಿ ಇದೀಗ ಸರ್ಕಾರ ರಚನೆಗೆ ಎಲ್ಲಾ ತಯಾರಿ ಪೂರ್ಣಗೊಳಿಸಿದೆ. ಮಾರ್ಚ್ 16 ರಂದು ಭಗವಂತ್ ಮಾನ್ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ವೀರ ಭಗತ್ ಸಿಂಗ್ ಹೂಟ್ಟೂರಲ್ಲಿ ಪ್ರಮಾಣ ವಚನ ಸ್ವೀಕರಿಸುದಾಗಿ ಭಗವಂತ್ ಮಾನ್ ಘೋಷಿಸಿ ಭಾರಿ ಸಂಚಲನ ಸೃಷ್ಟಿಸಿದ್ದರು. ಆದರೆ ಇದಕ್ಕಾಗಿ ಬರೋಬ್ಬರಿ 40ಕ್ಕೂ ಹೆಚ್ಚು ಎಕರೆ ಪ್ರದೇಶದ ಗೋಧಿ ಬೆಳೆಯನ್ನು ನಾಶ ಮಾಡಲಾಗಿದೆ ಅನ್ನೋ ಕಹಿ ಸತ್ಯ ಹೊರಬಿದ್ದಿದೆ.
ಭಗತ್ ಸಿಂಗ್ ಹುಟ್ಟೂರಾದ ಖಾಟ್ಕರ್ ಖಲಾನ್ ಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಭಗವಂತ್ ಮಾನ್ ಘೋಷಿಸಿದ್ದರು. ಇದು ಕ್ರಾಂತಿ ಕಾರಿ ನಡೆ ಎಂದು ಎಲ್ಲರೂ ಬಣ್ಮಿಸಿದ್ದರು. ಆದರೆ ಈ ನಡೆ ರೈತರ ಮೇಲೆ ಕೌರ್ಯಕ್ಕೆ ಕಾರಣವಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿರುವ ಗಣ್ಯರು, ಸೆಲೆಬ್ರೆಟಿಗಳು, ವಿವಿಧ ಸಂಘಟನೆಗಳ ಪ್ರಮುಖರ ಕಾರು ಪಾರ್ಕ್ ಮಾಡಲು 40ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ ಬೆಳೆಯನ್ನು ಕಡಿದು ನಾಶ ಮಾಡಲಾಗಿದೆ. ಈ ಗೋಧಿ ಬೆಳೆ ಹಸುರಾಗಿಯೇ ಇದೆ. ಇನ್ನೂ ಕಟಾವಿಗೆ ಬಂದಿಲ್ಲ.
ಭಗವಂತ್ ಮಾನ್ ಸಿಎಂ ಆಗುವ ಮೊದಲೇ ಭಾರಿ ಸಂಚಲನ, ಸಿಧು ಪತ್ನಿ ಸೇರಿ 122 ನಾಯಕರ ಭದ್ರತೆ ವಾಪಸ್!
ಆಮ್ ಆದ್ಮಿ ಪಾರ್ಟಿ ನಡೆಗೆ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ರೈತರಿಗೆ ಪ್ರತಿ ಎಕರೆ ಬೆಳೆಗೆ 46,000 ರೂಪಾಯಿ ಸರ್ಕಾರ ಪರಿಹಾರ ನೀಡುವುದಾಗಿ ಘೋಷಿಸಿದೆ. ಹಣದ ಆಸೆಗೆ ಇದೀಗ ಸ್ಥಳೀಯ ರೈತರು ಸುಮ್ಮನಾಗಿದ್ದಾರೆ. ಆದರೆ ಈ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹಲವು ಪ್ರಗತಿಪರ ರೈತರು ಆಮ್ ಆದ್ಮಿ ಪಾರ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇಷ್ಟೇ ಅಲ್ಲ ಜನರ ತೆರೆಗಿ ಹಣವನ್ನು ಪೋಲು ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
Rs 61 lakh for roadshow.
Rs 2 crore for oath-taking show.
40 acres, possibly more, of standing wheat for parking at ceremony.
All with aam admi’s tax money.
As the proverb goes, morning shows the day. https://t.co/wJ7FnucOh6
ಆಮ್ ಆದ್ಮಿ ಗೆಲುವಿನ ರೋಡ್ ಶೋಗೆ 61 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನು ಪ್ರಮಾಣ ವಚನ ಸಮಾರಂಭಕ್ಕೆ 2 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದರ ಜೊತೆಗೆ ಬೆಳೆ ನಾಶ ಮಾಡಿದ ರೈತರಿಗೆ ಸರ್ಕಾರದ ಬೊಕ್ಕಸದಿಂದ ಪ್ರತಿ ಎಕರೆಗೆ 46,000 ರೂಪಾಯಿ ನೀಡಬೇಕಾಗಿದೆ. ಆಮ್ ಆದ್ಮಿ ಪಾರ್ಟಿ ಇದೀಗ ಆಮ್ ಆದ್ಮಿ ತೆರಿಗೆ ಹಣದಲ್ಲಿ ಜಾತ್ರೆ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬಂದಿದೆ.
ಸಿಎಂ ಅಭ್ಯರ್ಥಿ ಘೋಷಣೆಗಾಗಿ ಎಎಪಿ ಹಾಸ್ಯಮಯ ವಿಡಿಯೋ... ಒಂದು ಗಂಟೆಯಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ
ಹಕ್ಕು ಮಂಡನೆ
ಪಂಜಾಬ್‌ನಲ್ಲಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚನೆಯ ಅವಕಾಶ ಪಡೆದುಕೊಂಡಿರುವ ಆಮ್‌ಆದ್ಮಿ ಪಕ್ಷ, ಶನಿವಾರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಸಿಂಗ್ ಮಾನ್ ಅವರನ್ನು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಈ ಹಕ್ಕು ಮಂಡಿಸಿದರು. ಮಾ.16ರಂದು ಪ್ರಮಾಣ ವಚನ ಸ್ವೀಕರಿಸಲು ಈಗಾಗಲೇ ಆಮ್ ಆದ್ಮಿ ಪಕ್ಷದ ನಿರ್ಧರಿಸಿದೆ.
ಪಂಜಾಬ್‌ನ 122 ಮಾಜಿ ಸಚಿವರು ಶಾಸಕರ ವಿಐಪಿ ಭದ್ರತೆ ವಾಪಸ್!
ಚಂಡೀಗಢ: ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ 122 ಮಂದಿ ಸಚಿವರ ಮತ್ತು ಶಾಸಕರ ಭದ್ರತೆಯನ್ನು ಹಿಂತೆಗೆದುಕೊಳ್ಳಲು ಎಎಪಿ ನಾಯಕ, ನಿಯೋಜಿತ ಸಿಎಂ ಭಗವಂತ್ ಮಾನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಆಯೋಜಿಸಿರುವ ಭದ್ರತೆಯನ್ನು ಹೊರತುಪಡಿಸಿ ಉಳಿದ ಎಲ್ಲರ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗೆ ಪತ್ರ ಬರೆದಿದ್ದಾರೆ.