
ಚಂಡೀಗಢ (ಜೂ.04): ಲಸಿಕೆ ಪೂರೈಕೆ ಕುರಿತು ಕೇಂದ್ರ ಸರ್ಕಾರದ ಬಗ್ಗೆ ಹಲವು ದಿನಗಳಿಂದ ದೂರುತ್ತಲೇ ಇರುವ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ, ಇದೀಗ ತಾನೇ ಲಸಿಕೆಯನ್ನು ಹಣಗಳಿಕೆಯ ಮಾರ್ಗ ಮಾಡಿಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಪಂಜಾಬ್ ಸರ್ಕಾರ, ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್‌ನಿಂದ ಇತ್ತೀಚೆಗೆ 1ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು 600 ರು.ನಂತೆ ಖರೀದಿಸಿದೆ. ಈ ಲಸಿಕೆಯನ್ನು ಅದು ಜನರಿಗೆ ಉಚಿತವಾಗಿ ವಿತರಿಸುವ ಬದಲು, ಕನಿಷ್ಠ 20000 ಡೋಸ್ ಅನ್ನು ಖಾಸಗಿ ಆಸ್ಪತ್ರೆಗಳಿಗೆ 1060 ರು.ಗೆ ಮಾರಾಟ ಮಾಡಿದೆ. ಅಂದರೆ ಪ್ರತಿ ಡೋಸ್ ಮೇಲೆ 660 ರು. ಲಾಭ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಇದಕ್ಕೆ 500 ರು. ಸೇರಿಸಿ 1560 ರು.ಗೆ ಒಂದು ಡೋಸ್‌ನಂತೆ ಮಾರಾಟ ಮಾಡುತ್ತಿವೆ. ಸರ್ಕಾರದ ಈ ಕ್ರಮ ಭಾರೀ ಅಚ್ಚರಿ ಮತ್ತು ಟೀಕೆಗೆ ಕಾರಣವಾಗಿದೆ.
ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ?
ಸಾಮಾಜಿಕ ಹೊಣೆಗಾರಿಕೆ : ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಾವು ‘ಲಸಿಕೆ ಸಾಮಾಜಿಕ ಹೊಣೆಗಾರಿಕಾ ನಿಧಿ’ ಎಂಬ ಹೆಸರಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದಿದ್ದೇವೆ. ಲಸಿಕೆ ಮಾರಾಟದಿಂದ ಬಂದ ಹೆಚ್ಚುವರಿ ಹಣವನ್ನು ಈ ಖಾತೆಗೆ ಹಾಕಿ, ಬಳಿಕ ಅದನ್ನು ಹೊಸದಾಗಿ ಲಸಿಕೆ ಖರೀದಿಸಲು ಬಳಸಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪನಿಯಿಂದ ಖರೀದಿಸಿದ್ದರೆ ಅವರು 1200 ರು. ನೀಡಬೇಕಿತ್ತು. ನಾವು ಅದಕ್ಕಿಂತಲೂ ಕಡಿಮೆ ದರದಲ್ಲಿ ಪೂರೈಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ಟೀಕೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, 400 ರು.ಗೆ ಪಡೆದುಕೊಂಡ ಲಸಿಕೆ ಇದೀಗ 1560 ರು.ಗೆ ಮಾರಾಟವಾಗುತ್ತಿದೆ. ಗಾಂಧೀ ಕುಟುಂಬಕ್ಕೆ ಆಪ್ತರಾಗಿರುವ ಪಂಜಾಬ್ ಸರ್ಕಾರದ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ