
ನವದೆಹಲಿ (ಜೂ.04): ಟ್ವೀಟರ್ನಲ್ಲಿ 1.8 ಕೋಟಿ ಜನರ ಫಾಲೋವರ್ಗಳನ್ನು ಹೊಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಪತ್ರಕರ್ತರು ಹಾಗೂ ತಮ್ಮ ಆಪ್ತರಾದ ಕೆ.ಬಿ ಬೈಜು, ಕನ್ನಡಿಗರಾದ ನಿಖಿಲ್ ಮತ್ತು ನಿವೇದಿತ್ ಆಳ್ವಾ ಸೇರಿದಂತೆ ಒಟ್ಟಾರೆ 50 ಖ್ಯಾತನಾಮರನ್ನು ಅನ್‌ಫಾಲೋ ಮಾಡಿದ್ದಾರೆ.
ಇದು ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಮತ್ತು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಕೊರೋನಾ ಎರಡನೇ ಅಲೆಗೆ ಮೋದಿಯ ಡ್ರಾಮಾಗಳೇ ಕಾರಣ ಎಂದ ರಾಹುಲ್ ಗಾಂಧಿ ...
ಸದಾ ಕಾಲ ಜೊತೆಯಾಗಿಯೇ ಕೆಲಸ ಮಾಡುವವರನ್ನು ಟ್ವೀಟರ್ ವೇದಿಕೆಯಲ್ಲಿ ಯಾಕೆ ಫಾಲೋ ಮಾಡಬೇಕು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ತಮ್ಮ ಆಪ್ತವಲಯದಲ್ಲಿದ್ದವರನ್ನು ಅನ್‌ಫಾಲೋ ಮಾಡಿದ್ದಾರಷ್ಟೇ.
ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಕನ್ನಡಿಗ ಸೋದರರಾದ ನಿಖಿಲ್ ಮತ್ತು ನಿವೇದಿತ್ ಆಳ್ವಾ ಸೇರಿ 50 ಮಂದಿಯನ್ನು ರಾಹುಲ್ ಗಾಂಧಿ ಅನ್‌ಫಾಲೋ ಮಾಡುವ ವಿಚಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಮೊದಲೇ ಗೊತ್ತಿತ್ತು ಎಂದು ಪಕ್ಷದೊಳಗಿನ ಕೆಲವೊಂದು ಗುಂಪು ಮಾತನಾಡಿಕೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ