
ಚಂಡೀಘಡ(ಫೆ.03) ಪಂಜಾಬ್‌ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ನಡುವಿನ ಗುದ್ದಾಟಗಳು ನಡೆಯುತ್ತಿದೆ. ಲೋಕಸಭೆ ಚುನಾವಣೆಗೆ ಯಾವುದೇ ಮೈತ್ರಿ ಇಲ್ಲದೆ ಆಮ್ ಆದ್ಮಿ ಪಾರ್ಟಿ ಏಕಾಂಗಿ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ರಾಜಕೀಯ ಬೆಳವಣಿಗೆ ನಡುವೆ ಇದೀಗ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ದಿಢೀರ್ ರಾಜೀನಾಮೆ ನೀಡಿದ್ದಾರೆ. 83 ವರ್ಷದ ಬನ್ವರಿಲಾಲ್ ಪುರೋಹಿತ್ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದೌಪದಿ ಮುರ್ಮುಗೆ ಕಳುಹಿಸಲಾಗಿದ್ದು, ಅಂಗೀಕರಿಸುವಂತೆ ಕೋರಿದ್ದಾರೆ.
ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯಪಾಲ ಹಾಗೂ ಚಂಡಿಘಡ ಆಡಳಿತ ಮುಖ್ಯಸ್ಥ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಚಂಡೀಘಡ ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಇದರ ಆಡಳಿತ ಜವಾಬ್ದಾರಿಯೂ ಪಂಜಾಬ್ ರಾಜ್ಯಪಾಲರ ಹೊಣೆಯಾಗಿದೆ. ವೈಯುಕ್ತಿಕ ಹಾಗೂ ಇತರ ಕೆಲ ಬದ್ಧತೆ ಕಾರಣಗಳಿಂದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಬನ್ವರಿಲಾಲ್ ಪುರೋಹಿತ್ ಹೇಳಿದ್ದಾರೆ. ಸೆಪ್ಟೆಂಬರ್ 9, 2021ರಿಂದ ಪಂಜಾಬ್ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಬನ್ವಿರಿಲಾಲ್ ಪುರೋಹಿತ್ ರಾಜೀನಾಮೆಯಿಂದ ಕೇಂದ್ರ ಸರ್ಕಾರ ಇದೀಗ ಹೊಸ ರಾಜ್ಯಪಾಲರ ನೇಮಕ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ರಾಜ್ಯಪಾಲರು ಕನ್ನಡ ನಾಮಫಲಕ ಸುಗ್ರಿವಾಜ್ಞೆ ವಾಪಸ್ ಕಳಿಸಲು ಕಾರಣವೇನು?
ಪಂಜಾಬ್ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಮೊದಲು ಬನ್ವರಿಲಾಲ್ ಪುರೋಹಿತ್ ತಮಿಳುನಾಡು ಹಾಗೂ ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2017ರಿಂದ 2021ರ ವರೆಗೆ ತಮಿಳುನಾಡು ರಾಜ್ಯಪಾಲರಾಗಿ ಹಾಗೂ 2026ರಿಂದ 2017ರ ವರೆಗೆ ಅಸ್ಸಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಬನ್ವಿರಿಲಾಲ್, 1991ರ ವೇಳೆ ಎಲ್‌ಕೆ ಅಡ್ವಾನಿ ರಾಮಜನ್ಮಭೂಮಿ ರಥಯಾತ್ರೆ ವೇಳೆ ಬಿಜೆಪಿ ಸೇರಿಕೊಂಡಿದ್ದರು. 1991ರಿಂದ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯರಾಗಿ1996 ಹಾಗೂ 1999ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸೋಲು ಕಂಡಿದ್ದರು. 2003ರಲ್ಲಿ ವಿದರ್ಭ ರಾಜ ಪಾರ್ಟಿ ಸ್ಥಾಪಿಸಿ ಮತ್ತೆ ಸೋಲು ಕಂಡರು. 2009ರಲ್ಲಿ ಮತ್ತೆ ಬಿಜೆಪಿ ಸೇರಿಕೊಂಡರು.
ಕೇರಳ ರಾಜ್ಯಪಾಲರಿಗೆ ಕಪ್ಪುಬಾವುಟ ಪ್ರದರ್ಶಿಸಿದ SFI, ರಸ್ತೆಯಲ್ಲೇ ಧರಣಿ ಕುಳಿತ ಆರೀಫ್ ಮೊಹಮ್ಮದ್!
2021ರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರ ಅದಲು ಬದಲಾವಣೆ ಮಾಡಿತ್ತು. ಈ ಪೈಕಿ ಪಂಜಾಬ್, ಅಸ್ಸಾಂ, ನಾಗಾಲ್ಯಾಂಡ್, ತಮಿಳುನಾಡಿನ ರಾಜ್ಯಪಾಲರ ಬದಲಾವಣೆ ಮಾಡಲಾಗಿತ್ತು. ಇದೇ ವೇಳೆ ಬನ್ವರಿಲಾಲ್ ತಮಿಳುನಾಡಿನಿಂದ ಪಂಜಾಬ್‌ಗೆ ವರ್ಗಾವಣೆಗೊಂಡಿದ್ದರು. ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್ ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ. ರವಿ ಅವರ ವರ್ಗಾವಣೆಯಿಂದ ತೆರವಾದ ನಾಗಾಲ್ಯಾಂಡ್ ರಾಜ್ಯಪಾಲ ಸ್ಥಾನವನ್ನು ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅವರ ಸ್ಥಾನಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರನ್ನು ನೇಮಿಸಲಾಗಿದೆ. ತಮಿಳುನಾಡಿನ ರಾಜ್ಯಪಾಲರಾಗಿದ್ದ ಬನ್ವರಿಲಾಲ್ ಪುರೋಹಿತ್ ಅವರನ್ನು ಪಂಜಾಬ್‌ಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ