'ಸಿಧು ದೇಶದ್ರೋಹಿ' ಹೇಳಿಕೆಗೆ ಮಾಜಿ DGP ಗರಂ, ಕ್ಯಾಪ್ಟನ್ ವಿರುದ್ಧ ಗಂಭೀರ ಆರೋಪ!

Published : Sep 19, 2021, 01:30 PM ISTUpdated : Sep 19, 2021, 01:31 PM IST
'ಸಿಧು ದೇಶದ್ರೋಹಿ' ಹೇಳಿಕೆಗೆ ಮಾಜಿ DGP ಗರಂ, ಕ್ಯಾಪ್ಟನ್ ವಿರುದ್ಧ ಗಂಭೀರ ಆರೋಪ!

ಸಾರಾಂಶ

* ಪಂಜಾಬ್‌ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ * ಸಿಧು, ಕ್ಯಾಪ್ಟನ್ ಸಂಘರ್ಷ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅಮರಿಂದರ್ ಸಿಂಗ್ * ರಾಜೀನಾಮೆ ಬಳಿಕ ಸಿಧು ವಿರುದ್ಧ ಕಿಡಿ ಕಾರಿ ಕ್ಯಾಪ್ಟನ್ * ಅಮರಿಂದರ್ ಸಿಂಗ್ ವಿರುದ್ಧವೂ ಕೇಳಿ ಬಂತು ಗಂಭೀರ ಆರೋಪ

ಚಂಡೀಗಢ(ಸೆ.19). ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ, ಅವರ ಹಾಗೂ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯಗಳು ಭಾರೀ ಚರ್ಚೆ ಹುಟ್ಟಿಸಿವೆ. ಅವರಿಬ್ಬರ ನಡುವಿನ ಆರೋಪ, ಪ್ರತ್ಯಾರೋಪಳ ಮಧ್ಯೆ ಈ ಮಾತಿನ ಅಮರ ಸದ್ಯ ಮತ್ತೊಂದು ಹಂತಕ್ಕೆ ತಲುಪಿದೆ.  

ಹೌದು ರಾಜೀನಾಮೆ ಬೆನ್ನಲ್ಲೇ ಸಿಧುವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಮತ್ತು ಬಾಜ್ವಾ ಸ್ನೇಹಿತ ಎಂದು ಕರೆದಿದ್ದ ಕ್ಯಾಪ್ಟನ್ ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಆಗಿ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು. ಆದರೀಗ ಇದಕ್ಕೆ ತಿರುಗೇಟು ಎಂಬಂತೆ ಸಿಧು ಅವರ ಬೆಂಬಲಿಗ, 
ಮಾಜಿ ಡಿಜಿಪಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಐಎಸ್ಐ ಏಜೆಂಟ್ ಜೊತೆ 14 ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ನವಜೋತ್ ಸಿಂಗ್ ಸಿಧು ಅವರನ್ನು ದೇಶವಿರೋಧಿ ಎಂದು ಕರೆದ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ 14 ವರ್ಷಗಳಿಂದ ಐಎಸ್ಐ ಏಜೆಂಟ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಾಜಿ ಐಪಿಎಸ್ ಮುಸ್ತಫಾ ಆರೋಪಿಸಿದ್ದಾರೆ.

ಟ್ವೀಟ್ ಮಾಡಿದ ಮಾಜಿ ಐಪಿಎಸ್ ಮೊಹಮ್ಮದ್ ಮುಸ್ತಫಾ

'ಕ್ಯಾಪ್ಟನ್ ಸರ್, ನಾವು ಬಹಳ ಸಮಯದಿಂದ ಕುಟುಂಬ ಸ್ನೇಹಿತರು. ನಾನು ಬಾಯಿ ಬಿಡುವಂತೆ ಮಾಡಬೇಡಿ. ನಿಮಗೆ ಸುಳ್ಳು ಹೇಳುವಲ್ಲಿ, ಮಿತಿ ಮೀರಿದ ಸಾಮರ್ಥ್ಯವಿದೆ ಎಂದು ನನಗೆ ತಿಳಿದಿದೆ. ನವಜೋತ್ ಸಿಂಗ್ ಸಿಧು ದಿನದಿಂದ ದಿನಕ್ಕೆ ರಾಜಕೀಯವಾಗಿ ಎಲ್ಲ ರೀತಿಯಿಂದಲೂ ದಾಳಿಗೊಳಗಾಗುತ್ತಿದ್ದಾರೆ, ಆದರೆ ಅವರ ದೇಶಭಕ್ತಿ/ರಾಷ್ಟ್ರೀಯತೆಯನ್ನು ಪ್ರಶ್ನಿಸುವುದು ನಿಮ್ಮ ಬಾಯಿಂದ ಚೆನ್ನಾಗಿ ಕಾಣುತ್ತಿಲ್ಲ. 

ನೀವೇ 14 ವರ್ಷಗಳಿಂದ ಐಎಸ್‌ಐ ಏಜೆಂಟ್‌ನೊಂದಿಗೆ ಸಂಬಂಧ ಹೊಂದಿದ್ದೀರಿ. ಅವರು ನಿಮ್ಮ ಸರ್ಕಾರಿ ಕೆಲಸದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದರು. ನೀವು ಆವರ ವಿದೇಶಿ ಖಾತೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಕಳುಹಿಸಿದ್ದೀರಿ. ಮತ್ತು ನೀವು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ.

'ನಿಮಗೆ ಗೊತ್ತಿರುವುದು ನನಗೂ ಗೊತ್ತು. ಪ್ರಪಂಚದಿಂದ ಮರೆಮಾಚಿರುವ ವಿಚಾರಗಳೂ ನನಗೆ ತಿಳಿದಿದೆ. ನಿಮ್ಮ ಹಲವು ವರ್ಷಗಳ ಅಕ್ರಮ ಕೆಲಸಗಳಿಗೆ ಪುರಾವೆಯೂ ಇದೆ' ಎಂದು ಎಚ್ಚರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?