
ಪುಣೆ(ಜು.03): ಕೊರೋನಾ ವೈರಸ್ ಇಡೀ ಭಾರತವನ್ನೇ ವ್ಯಾಪಿಸಿದೆ. ಗಲ್ಲಿ ಗಲ್ಲಿಯಲ್ಲೂ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಬಚಾವ್ ಆಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧಾರಣೆ, ಶುಚಿತ್ವ ಸೇರಿದಂತೆ ಕೆಲ ವಿಧಾನಗಳನ್ನು ಪಾಲಿಸಬೇಕು. ಕೊರೋನಾ ವಕ್ಕರಿಸಿದ ಬಳಿಕ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಸ್ಕ್‌ಗಳು ಲಭ್ಯವಿದೆ.
ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್..
ತರಹೇವಾರಿಯ ಮಾಸ್ಕ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಮೋದಿ ಹೆಸರಿನ ಮಾಸ್ಕ್ ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಕೆಲವರಂತೂ ಮಾಸ್ಕ್‌ಗಳಿಗೆ ಕರೊನಾ ಮಾಸ್ಕ್ ಎಂದೇ ಹೆಸರಿಸಿ ವ್ಯಾಪಾರ ಮಾಡ್ತಿದ್ದಾರೆ. ಇನ್ನು ಶ್ರೀಮಂತರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮಾಸ್ಕ್ ಖರೀದಿಸಿ, ಧರಿಸುತ್ತಾರೆ. ಇಷ್ಟರ ನಡುವೆ ಪುಣೆಯಲ್ಲೊಬ್ಬ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್, ಮಾಸ್ಕ್ ಗಿಫ್ಟ್..!.
ಈತನ ಹೆಸರು ಶಂಕರ್. ಈತ ಪಿಂಪ್ರಿ ಚಿಂಚವಾಡದ ಶಂಕರ್ ಎಂದೆ ಪುಣೆಯಲ್ಲಿ ಪ್ರಸಿದ್ಧಿ. ಇಡೀ ದೇಶದಲ್ಲಿ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವಾಗಲೇ ಶಂಕರ್ ಚಿನ್ನದ ಮಾಸ್ಕ್ ಮಾಡಿಸಿಕೊಡಿದ್ದಾನೆ. ಇನ್ನೂ ಈ ಚಿನ್ನದ ಮಾಸ್ಕ್ಗೆ ಬರೋಬ್ಬರಿ 2.89 ಲಕ್ಷ ರೂ. ಖರ್ಚು ಮಾಡಲಾಗಿದೆ. ಶಂಕರ್ ಧರಿಸಿರುವ ಚಿನ್ನದ ಮಾಸ್ಕ್ ತೀರಾ ತೆಳುವಾಗಿದ್ದು, ಸಣ್ಣಸಣ್ಣ ರಂಧ್ರಗಳಿವೆಯಂತೆ. ಉಸಿರಾಟಕ್ಕೆ ತೊಂದರೆ ಆಗದಂತೆ ರಂಧ್ರಗಳನ್ನು ತೆರೆಯಲಾಗಿದೆ.
ಉಸಿರಾಟಕ್ಕೆ ರಂಧ್ರ ಮಾಡಲಾಗಿದೆ ನಿಜ. ಆದರೆ ಇದು ಕೊರೋನಾ ತಡೆಗಟ್ಟುವ ಯಾವ ಲಕ್ಷಣಗಳಿಲ್ಲ. ಕೊರೋನಾ ಮಹಾಮಾರಿಗೆ ಶ್ರೀಮಂತಿಕೆ ಮೂಲಕ ಬೆದರಿಕೆ ಹಾಕಿರುವ ಶಂಕರ್ ಪರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ