ವಿದ್ಯುತ್ ತಂತಿ ಮೇಲೆ ಟವೆಲ್ ಹಾಕಿ ವ್ಯಕ್ತಿ ಸಾವು; ರಕ್ಷಣೆಗೆ ಹೋದ ತಾಯಿ-ಮಗನ ಪ್ರಾಣಪಕ್ಷಿಯೂ ಹಾರಿ ಹೋಯ್ತು!

By Mahmad RafikFirst Published Jun 19, 2024, 11:56 AM IST
Highlights

ಸುರೇಂದ್ರ ರಕ್ಷಣೆಗೆ ಮುಂದಾದ ಪತ್ನಿ ಅದಿಕಾ (40), ಮಗ ಪ್ರಸಾದ್‌ಗೂ ವಿದ್ಯುತ್ ಶಾಕ್ ತಗುಲಿದೆ. ಈ ಸಂಬಂಧ ಪೊಲೀಸರು ಆಕಸ್ಮಿಕ  ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುಣೆ: ವಿದ್ಯುತ್ ತಂತಿ ಮೇಲೆ ಒಣಗಲು ಟವೆಲ್ ಹಾಕಿದ ಕಾರ್ಮಿಕ ಶಾಕ್ ತಗುಲಿ, ಆತನ ರಕ್ಷಣೆಗೆ ಹೋದ ತಾಯಿ ಮತ್ತು ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಪುಣೆ  ನಗರದಿಂದ  85 ಕಿಲೋ ಮೀಟರ್‌ ದೂರದಲ್ಲಿರುವ ದೌಂಡ್ ತಾಲೂಕಿನ ದಾಪೋಡಿ ಎಂಬಲ್ಲಿ ನಡೆದಿದೆ. ಸುರೇಂದ್ರ ಭಾಲೇಕರ್ (47) ವಿದ್ಯುತ್ ಶಾಕ್‌ ನಿಂದ ಸಾವನ್ನಪ್ಪಿದ್ದಾರೆ ಎಂದು ಪುಣೆಯ ಯಾವತ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸುರೇಂದ್ರ ರಕ್ಷಣೆಗೆ ಮುಂದಾದ ಪತ್ನಿ ಅದಿಕಾ (40), ಮಗ ಪ್ರಸಾದ್‌ಗೂ ವಿದ್ಯುತ್ ಶಾಕ್ ತಗುಲಿದೆ. ಈ ಸಂಬಂಧ ಪೊಲೀಸರು ಆಕಸ್ಮಿಕ  ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಸುರೇಂದ್ರ ಭಾಲೇಕರ್ ಕುಟುಂಬ ದಾಪೋಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುರೇಂದ್ರ ಕಟ್ಟಡ ಕಾರ್ಮಿಕರಾಗಿದ್ದು, ಪತ್ನಿ ಅದಿಕಾ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮಗ ಪ್ರಸಾದ್ 12ನೇ ತರಗತಿಯಲ್ಲಿ ಓದುತ್ತಿದ್ದನು ಎಂದು ಯಾವತ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ನಾರಾಯಣ್ ದೇಶ್‌ಮುಖ್ ಪ್ರಕರಣದ ಮಾಹಿತಿ ನೀಡಿದ್ದಾರೆ. 

Latest Videos

ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವಿರೋಧಿಸಿದ್ದಕ್ಕೆ ಕೊಲೆ ಮಾಡಿದ ಎಸ್‌ಎಸ್‌ಎಲ್‌ಸಿ ಬಾಲಕ

ಮಗಳು ಬಚಾಜ್

ಸುರೇಂದ್ರ ಕುಟುಂಬದವರು ಬಟ್ಟೆ ಒಣಗಲು  ತಮ್ಮ ತಗಡಿನ ಗೋಡೆಗೆ ಕಬ್ಬಿಣದ ತಂತಿಯನ್ನು ಕಟ್ಟಿದ್ದರು. ಭಾನುವಾರ ಮಳೆಯಾಗಿದ್ರಿಂದ ವಿದ್ಯುತ್ ತಂತಿ, ಬಟ್ಟೆ ಹಾಕಲು ವೈರ್‌ಗೆ ತಾಗಿದೆ. ಇದನ್ನು ಅರಿಯದ ಸುರೇಂದ್ರ ಭಾಲೇಕರ್,  ಸ್ನಾನದ  ನಂತರ ಟವೆಲ್ ವೈರ್‌ಗೆ ಹಾಕಿದ್ರಿಂದ ವಿದ್ಯುತ್ ಶಾಕ್ ತಗುಲಿದೆ. ತಂದೆಯ ಸಹಾಯಕ್ಕೆ ಮುಂದಾದ ಮಗನಿಗೂ ವಿದ್ಯುತ್ ತಗುಲಿದೆ. ಕೂಡಲೇ ಪತ್ನಿ ಸಹಾಯಕ್ಕಾಗಿ  ಕೂಗಿಕೊಂಡು ಮಗ ಹಾಗೂ ಗಂಡನ ರಕ್ಷಿಸಲು ಹೋಗಿದ್ರಿಂದ ಅವರಿಗೂ  ವಿದ್ಯುತ್ ತಗುಲಿದೆ. ಈ ಸಮಯದಲ್ಲಿ ದಂಪತಿ ಮಗಳು ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ.

ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಗೆ ವಿದ್ಯುತ್ ಮೀಟರ್‌ನಿಂದ ಸಂಪರ್ಕ ಕಲ್ಪಿಸಲಾಗಿತ್ತು. ನಿರಂತರ ಬಳಕೆಯಿಂದಾಗಿ ತಂತಿಯ ಪ್ಲಾಸ್ಟಿಕ್ ಕೋಟ್ ಕಳಚಿಸಿದೆ. ಇದು ಬಟ್ಟೆ ಹಾಕಲು ಹಾಕಿರುವ ವೈರ್‌ಗೆ ತಗುಲಿದ್ದರಿಂದ ವಿದ್ಯುತ್ ಶಾಕ್ ತಗುಲಿದೆ ಎಂದು ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಸಾರ್ವಜನಿಕ ಸಂಪಕರ್ಕ ಅಧಿಕಾರಿ ವಿಕಾಶ್ ಪುರಿ ಮಾಹಿತಿ ನೀಡಿದ್ದಾರೆ. ವಿದ್ಯುತ್ ಇಲಾಖೆ ಅಧಿಕಾರಿಳು ನೀಡಿದ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇನ್‌ಸ್ಪೆಕ್ಟರ್ ನಾರಾಯಾಣ್ ದೇಶ್‌ಮುಖ್ ಹೇಳದ್ದಾರೆ. 

ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

ಸಾಲು ಸಾಲು ವಿದ್ಯುತ್ ಅವಘಡಗಳು

ವಿದ್ಯುತ್ ಶಾಕ್‌ನಿಂದ ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ನಾಲ್ಕು ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಪುಣೆಯ ಭಾಗದಲ್ಲಿ ವಿದ್ಯುತ್ ಅವಘಡಗಳು ಸಂಭವಿಸಿವೆ. ಜೂನ್ 4ರಂದು ಬಾಳೆವಾಡಿಯಲ್ಲಿ ವಿದ್ಯುತ್ ಸ್ಪರ್ಶಿಸಿ 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಜೂನ್ 11ರಂದು ಖರಬ್ವಾಡಿಯಲ್ಲಿ 14 ವರ್ಷದ ಬಾಲಕ, ಜೂನ್ 12ರಂದು 10 ವರ್ಷದ ಬಾಲಕ ವಿದ್ಯುತ್ ಶಾಕ್‌ನಿಂಡ ಸಾವನ್ನಪ್ಪಿದ್ದಾನೆ.

click me!