'ಆತ್ಮಸಾಕ್ಷಿಯ ಮಾತನ್ನು ಕೇಳಿದೆ' ಖಲಿಸ್ತಾನಿ ಪ್ರತಿಭಟನೆಯ ವೇಳೆ ದೇಶದ ಧ್ವಜ ರಕ್ಷಿಸಿದ ವಿದ್ಯಾರ್ಥಿಯ ಮಾತು!

Published : Oct 06, 2023, 07:15 PM IST
'ಆತ್ಮಸಾಕ್ಷಿಯ ಮಾತನ್ನು ಕೇಳಿದೆ'  ಖಲಿಸ್ತಾನಿ ಪ್ರತಿಭಟನೆಯ ವೇಳೆ ದೇಶದ ಧ್ವಜ ರಕ್ಷಿಸಿದ ವಿದ್ಯಾರ್ಥಿಯ ಮಾತು!

ಸಾರಾಂಶ

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ರಸ್ತೆಯ ಎರಡೂ ಬದಿಗಳನ್ನು ಖಲಿಸ್ತಾನಿ ಪ್ರತಿಭಟನಾಕಾರರು ಸೋಮವಾರ ಸುತ್ತುವರಿದಿದ್ದರು. ಬ್ಯಾರಿಕೇಡ್‌ಅನ್ನು ದಾಟಿದ ಇವರು ಭಾರತದ ಧ್ವಜದ ಮೇಲೆ ಗೋಮೂತ್ರ ಎಂದು ಹೇಳಲಾದ ದ್ರವವನ್ನು ಎಸೆದಿದ್ದರು.

ನವದೆಹಲಿ (ಅ.6): ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಎದುರು ಸೋಮವಾರ ನಡೆದ ಖಲಿಸ್ತಾನಿ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಧ್ವಜವನ್ನು ರಕ್ಷಿಸಲು ಪ್ರಯತ್ನಿಸಿದ ಬಾಲಕ ಭಾರತೀಯ ವಿದ್ಯಾರ್ಥಿ ಸತ್ಯಂ ಸುರಾನಾ, 'ಭಾರತೀಯ ಧ್ವಜವನ್ನು ಈ ರೀತಿ ಅವಮಾನಿಸಿರುವುದನ್ನು ನಾನು ಹಿಂದೆಂದೂ ನೋಡಿಲ್ಲ' ಎಂದು ಹೇಳಿದ್ದಾರೆ. ಆತ್ಮಸಾಕ್ಷಿಯ ಮಾತನ್ನು ಕೇಳಿ ತ್ರಿವರಣ ಧ್ವಜವನ್ನು ಕಾಪಾಡಬೇಕು ಎಂದು ನಿರ್ಧಾರ ಮಾಡಿದ್ದೆ ಎಂದು ಹೇಳಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿದ್ಯಾರ್ಥಿಯಾಗಿರುವ  ಪುಣೆ ಮೂಲದ ಸತ್ಯಂ, "ಭಾರತೀಯ ಧ್ವಜವನ್ನು ಅವಮಾನಿಸುತ್ತಿರುವುದನ್ನು ನಾನು ನೋಡಿದೆ, ಉದ್ದೇಶಪೂರ್ವಕವಾಗಿ ಧ್ವಜದ ಮೇಲೆ ಹೆಜ್ಜೆ ಹಾಕಿದ್ದ ಪೊಲೀಸ್ ಮಹಿಳೆಯ ಹಿಂದೆ ಹೋದ ನಾನು, ಧ್ವಜವನ್ನು ಎತ್ತಿಕೊಂಡು ಆ ಸ್ಥಳದಿಂದ ದೂರ ಹೋದೆ; ಎಂದು ಹೇಳಿದ್ದಾರೆ. ಭಾರತದ ಧ್ವಜಕ್ಕೆ ಈ ರೀತಿಯ ಅವಮಾನ ಆಗುತ್ತಿರುವುದನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಇದು ಹೇಗೆ ಸಂಭವಿಸಲು ಸಾಧ್ಯ ಎಂದು ನನ್ನ ಒಳಮನಸ್ಸು ಆತ್ಮಸಾಕ್ಷಿ ಕೇಳುತ್ತಿತತು. ಕೇಳುತ್ತಿತ್ತು. ಆಗುತ್ತಿದ್ದ ಘಟನೆಯನ್ನು ನೋಡಿ ಆಘಾತಗೊಂಡಿದ್ದ ನಾನು, ಧ್ವಜವನ್ನು ಎತ್ತಿಕೊಳ್ಳಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ.

ಸೋಮವಾರ ಖಲಿಸ್ತಾನಿ ಪ್ರತಿಭಟನಾಕಾರರು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎರಡೂ ಕಡೆಯ ರಸ್ತೆಯನ್ನು ಸುತ್ತುವರಿದಿದ್ದರು. ಅದರಲ್ಲೂ ಕೆಲವು ಪ್ರತಿಭಟನಾಕಾರರು ಕಚೇರಿಯ ಎದುರಿನ ಬ್ಯಾರಿಕೇಡ್‌ಗಳನ್ನು ಮುರಿದು, ರಾಯಭಾರ ಕಚೇರಿಗೆ ನುಗ್ಗಿದ್ದರು. ಈ ವೇಳೆ ಭಾರತದ ಧ್ವಜವನ್ನು ಕೆಳಗಿಳಿಸಿ ಅದರ ಮೇಲೆ ಗೋಮೂತ್ರವನ್ನು ಹಾಕಿದ್ದಾರೆ.

ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯಗೆ ಪ್ರತಿಭಟನೆ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಖಲಿಸ್ತಾನ್ ಬೆಂಬಲಿಗರು ಹೇಳಿದ್ದಾರೆ. ಭಾರತದ ಎನ್‌ಐಎಯಿಂದ ಭಯೋತ್ಪಾದಕ ಎಂದು ಘೋಷಣೆಯಾಗಿದ್ದ ನಿಜ್ಜರ್‌ನ್ನು ಜೂನ್ 18 ರಂದು ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಅಪರಿಚಿತರು ಹತ್ಯೆ ಮಾಡಿದ್ದರು. ಪ್ರತಿಭಟನಾಕಾರರಲ್ಲಿ ಒಬ್ಬರು ಎಚ್‌ಸಿಐ ಲಂಡನ್‌ನ ಮುಂದೆ ಭಾರತ ಮತ್ತು ಸುನಕ್ ವಿರೋಧಿ ಭಾಷಣವನ್ನು ಮಾಡಿದರು ಮತ್ತು ನಂತರ ಭಾರತದ ಧ್ವಜವನ್ನು ನೆಲದ ಮೇಲೆ ಎಸೆದಿದ್ದರು. ಈ ವೇಳೆ ವಿದ್ಯಾರ್ಥಿ ಸತ್ಯಂ ಸ್ಥಳದಲ್ಲಿದ್ದ. 

ಭಾಷಣ ಮುಂದುವರಿಯುತ್ತಿರುವಾಗಲೇ ಕೊಂಚ ಒಳನುಗ್ಗಿದ ಸತ್ಯಂ ನೆಲದ ಮೇಲೆ ಬಿದ್ದಿದ್ದ ಭಾರತದ ಧ್ವಜವನ್ನು ಎತ್ತಿಕೊಂಡಿದ್ದರು.  ಕೆಲವು ಖಲಿಸ್ತಾನಿಗಳು ಈ ಕೃತ್ಯದಿಂದ ಸಿಟ್ಟಾದರಾದರೂ, ಸತ್ಯಂ ಮೇಲೆ ಕೂಗಲು ಆರಂಭಿಸಿದ್ದರು. ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಲ್ಲದೆ, ಸತ್ಯಂ ಅವರನ್ನು ಆ ಸ್ಥಳದಿಂದ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದರು.

ಸ್ವಿಗ್ಗಿ ಡೆಲಿವರಿ ಬಾಯ್ಸ್‌ ಅಲ್ಲಾರೀ, ಇವರು ಟೀಮ್‌ ಇಂಡಿಯಾ ಪ್ಲೇಯರ್ಸು..!

ಯುಕೆ ಸರ್ಕಾರದ ಮಾಜಿ ಸಲಹೆಗಾರ ಕಾಲಿನ್ ಬ್ಲೂಮ್ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಇಡೀ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಸತ್ಯಂ ಅವರು, ಭಾರತೀಯ ಧ್ವಜವನ್ನು ಎತ್ತಿಕೊಂಡು ಹೋಗುತ್ತಿರುವುದು ವೈರಲ್ ಆಗಿದೆ. 'ಭಾರತೀಯ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಯುತ್ತಿತ್ತು. ನಾನು ಏನು ನಡೆಯುತ್ತಿದೆ ಎಂದು ನೋಡಲು ಹೋದಾಗ, ಇದು ಖಲಿಸ್ತಾನ್ ಪರ ಗುಂಪಿನ ಪ್ರತಿಭಟನೆ ಎಂದು ನಾನು ಅರಿತುಕೊಂಡೆ ಮತ್ತು ದೇಶದ ವಿರದ್ಧ ಅವರು ಪ್ರತಿಭಟನೆ ಮಾಡುತ್ತಿದ್ದರು. ಕೆಲವರು ತಮ್ಮ ಕಾಲಿನಲ್ಲಿ ರಾಷ್ಟ್ರಧ್ವಜವನ್ನು ತುಳಿಯುತ್ತಿರುವುದನ್ನು ನಾನು ನೋಡಿದೆ. ಭಾರತದ ಧ್ವಜಕ್ಕೆ ಅವಮಾನ ಮಾಡಬೇಕು ಎಂದೇ ಅವರು ನಿರ್ಧಾರ ಮಾಡಿದ್ದರು. ಹಾಗಾಗಿ ಸಾಕಷ್ಟು ಸಮಯ ಹಿಂದೆಯೇ ಉಳಿದು ಪ್ರತಿಭಟನೆಯನ್ನು ವೀಕ್ಷಣೆ ಮಾಡುತ್ತಿದ್ದೆ ಎಂದಿದ್ದಾರೆ.

ನಾನು ಸಿಕ್ಕಾಪಟ್ಟೆ ಮಾತಾಡ್ತೀನಿ ನಾರಾಯಣ ಮೂರ್ತಿ ಕೇಳ್ತಾ ಇರ್ತಾರಷ್ಟೇ, ಪತಿಯ ಬಗ್ಗೆ ಸುಧಾಮೂರ್ತಿ ಮಾತು ವೈರಲ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!