ರಸ್ತೆಯಲ್ಲಿ ಆಟೋ ಡ್ರೈವರ್ ಲಾವಣಿ ಡ್ಯಾನ್ಸ್; ಅದ್ಭುತ ಸ್ಟೆಪ್ಸ್ ವಿಡಿಯೋ ವೈರಲ್!

Published : Mar 15, 2021, 03:33 PM IST
ರಸ್ತೆಯಲ್ಲಿ ಆಟೋ ಡ್ರೈವರ್ ಲಾವಣಿ ಡ್ಯಾನ್ಸ್; ಅದ್ಭುತ ಸ್ಟೆಪ್ಸ್ ವಿಡಿಯೋ ವೈರಲ್!

ಸಾರಾಂಶ

ಆಟೋ ಡ್ರೈವರ್ ಹಾಡು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವುದು, ಇತರ ಪ್ರತಿಭಾ ಪ್ರದರ್ಶನದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಆಟೋ ಡ್ರೈವರ್ ನಡು ರಸ್ತೆಯಲ್ಲಿ ಲಾವಣಿ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಆಟೋ ಡ್ರೈವರ್ ವೈರಲ್ ಡ್ಯಾನ್ಸ್ ವಿಡಿಯೋ ಇಲ್ಲಿದೆ.

ಪುಣೆ(ಮಾ.15): ಲಾವಣಿ ಡ್ಯಾನ್ಸ್ ಸುಲಭದಲ್ಲಿ ಕರಗತ ಮಾಡುವ ಕಲೆ ಅಲ್ಲ. ಬೇಕಾ ಬಿಟ್ಟಿ ಸ್ಟೆಪ್ಸ್ ಹಾಕಿದರೆ ಲಾವಣಿ ಡ್ಯಾನ್ಸ್ ಆಗಲ್ಲ. ಭರತನಾಟ್ಯದ ಕೆಲ ಕೌಶಲ್ಯಗಳು ಈ ಲಾವಣಿಗೆ ಡ್ಯಾನ್ಸ್‌ಗೆ ಬೇಕು. ಆದರೆ ಇದೇ ಲಾವಣಿ ಡ್ಯಾನ್ಸ್‌ನ್ನು ಆಟೋ ಡ್ರೈವರ್ ಸಲೀಸಾಗಿ ಮಾಡಿ ಎಲ್ಲರ ಮನ ಗೆದ್ದಿದ್ದಾನೆ.

ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!

ಪುಣೆಯ ಬಾರಮತಿಯ ಆಟೋ ಡ್ರೈವರ್ ಬಾಬಾಜಿ ಕಾಂಬ್ಳೆ ಲಾವಣಿ ಡ್ಯಾನ್ಸ್ ಮೂಲಕ ಸಾಮಾಡಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾನೆ. ಆಟೋ ನಿಲ್ದಾಣದಲ್ಲಿ ಬಾಬಾಜಿ  ಮಾಲಾ ಜೌ ಧ್ಯಾನ ಘರಿ ಹಾಡಿಗೆ ಲಾವಣಿ ಡ್ಯಾನ್ಸ್ ಮೂಲಕ ಮತ್ತಷ್ಟು ರಂಗು ತುಂಬಿದ್ದಾನೆ.

 

ಆಟೋ ಡ್ರೈವರ್ ಅದ್ಭುತ ಡ್ಯಾನ್ಸ್ ವಿಡಿಯೋವನ್ನು ಮಹಾರಾಷ್ಟ್ರ ಮಾಹಿತಿ ಕೇಂದ್ರದ ಉಪನಿರ್ದೇಶಕರಾದ ದಯಾನಂದ್ ಕಾಂಬ್ಳೆ ಮೊದಲು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಕಾಂಬ್ಳೆ ಎಕ್ಸ್‌ಪ್ರೆಶನ್, ಸ್ಟೆಪ್ಸ್ ಇದೀಗ ಎಲ್ಲರ ಮನಗೆದ್ದಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು