ಭಾರತಕ್ಕೆ ಮತ್ತೆ ಬರುತ್ತಿದೆ ಪಬ್‌ಜಿ ಮೊಬೈಲ್‌ ಗೇಮ್‌!

Published : Nov 13, 2020, 09:01 AM ISTUpdated : Nov 13, 2020, 09:14 AM IST
ಭಾರತಕ್ಕೆ ಮತ್ತೆ ಬರುತ್ತಿದೆ ಪಬ್‌ಜಿ ಮೊಬೈಲ್‌ ಗೇಮ್‌!

ಸಾರಾಂಶ

 ಚೀನಾ ಜತೆ ನಂಟು ಹೊಂದಿದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್‌ ಗೇಮ್‌ ‘ಪಬ್‌ಜಿ’| ಭಾರತಕ್ಕೆ ಮತ್ತೆ ಬರುತ್ತಿದೆ ಪಬ್‌ಜಿ ಮೊಬೈಲ್‌ ಗೇಮ್‌

 

ನವದೆಹಲಿ(ನ.13): ಚೀನಾ ಜತೆ ನಂಟು ಹೊಂದಿದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್‌ ಗೇಮ್‌ ‘ಪಬ್‌ಜಿ’ ಇದೀಗ ಮತ್ತೆ ಭಾರತಕ್ಕೆ ಬರುತ್ತಿದೆ. ‘ಪಬ್‌ಜಿ ಮೊಬೈಲ್‌ ಇಂಡಿಯಾ’ ಹೆಸರಿನಲ್ಲಿ ಈ ಗೇಮ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗುತ್ತಿರುವುದಾಗಿ ಪಬ್‌ಜಿ ಕಾರ್ಪೋರೇಷನ್‌ ತಿಳಿಸಿದೆ.

ಭಾರತೀಯ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಹೊಸ ಗೇಮ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ಗೇಮ್‌ ಬಳಕೆದಾರರಿಗೆ ಗರಿಷ್ಠ ಭದ್ರತೆಯನ್ನು ಒದಗಿಸುತ್ತದೆ ಮತ್ತು ಸ್ಥಳೀಯ ನಿಯಮಗಳಿಗೆ ಬದ್ಧವಾಗಿರುತ್ತದೆ ಎಂದು ದಕ್ಷಿಣ ಕೊರಿಯಾ ಮೂಲದ ಕಂಪನಿ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಪಬ್‌ಜಿ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಪಬ್ಜಿ ಕಾರ್ಪೋರೇಶನ್‌ ತಿಳಿಸಿದೆ. ಅಲ್ಲದೆ ಇದಕ್ಕಾಗಿಯೇ ಸ್ಥಳೀಯವಾಗಿ ಕಚೇರಿಗಳನ್ನು ತೆರೆಯುವ ಉದ್ದೇಶವೂ ಇದೆ ಎಂದು ತಿಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಪಬ್ಜಿ ಮೊಬೈಲ್‌, ಪಬ್ಜಿ ಮೊಬೈಲ್‌ ಲೈಟ್‌ ಸೇರಿದಂತೆ 116 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಪ್ಲೇಸ್ಟೋರ್‌ನಿಂದಲೂ ತೆಗೆದುಹಾಕಲಾಗಿತ್ತು. ಆದಾಗ್ಯೂ ಅದಕ್ಕೂ ಮೊದಲೇ ಇದ್ದ ಆ್ಯಂಡ್ರಾಯ್ಡ್‌ ಮತ್ತು ಈಒಎಸ್‌ ಸಾಧನಗಳಲ್ಲಿ ಇನ್ನೂ ಈ ಆಟ ಆಡಬಹುದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್