ಓಯೋ ರೂಮ್ ಬಂದ್ ಮಾಡಿಸಿದ್ದಕ್ಕೆ ಸಿಟ್ಟು: ಬಿಜೆಪಿ ಶಾಸಕನ ಕಚೇರಿ ಮುಂದೆಯೇ ಜೋಡಿಯ ಕಿಸ್ಸಿಂಗ್

Published : May 12, 2024, 09:54 AM ISTUpdated : May 12, 2024, 09:56 AM IST
ಓಯೋ ರೂಮ್ ಬಂದ್ ಮಾಡಿಸಿದ್ದಕ್ಕೆ ಸಿಟ್ಟು: ಬಿಜೆಪಿ ಶಾಸಕನ ಕಚೇರಿ ಮುಂದೆಯೇ ಜೋಡಿಯ ಕಿಸ್ಸಿಂಗ್

ಸಾರಾಂಶ

ನಗರದಲ್ಲಿ ಓಯೋ ರೂಮ್‌ಗಳನ್ನು ಓಯೋ ಹೊಟೇಲ್‌ಗಳನ್ನು ಬಂದ್ ಮಾಡಿಸಿದ್ದಕ್ಕೆ ಸಿಟ್ಟಿಗೆದ್ದ ಜೋಡಿಯೊಂದು ಪ್ರತಿಭಟನಾ ರೂಪವಾಗಿ ಬಿಜೆಪಿ ಶಾಸಕನ ಕಚೇರಿ ಮುಂದೆಯೇ  ಪರಸ್ಪರ ಕಿಸ್ಸಿಂಗ್‌ನಲ್ಲಿ ತೊಡಗಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. 

ವೈಶಾಲಿನಗರ: ನಗರದಲ್ಲಿ ಓಯೋ ರೂಮ್‌ಗಳನ್ನು ಓಯೋ ಹೊಟೇಲ್‌ಗಳನ್ನು ಬಂದ್ ಮಾಡಿಸಿದ್ದಕ್ಕೆ ಸಿಟ್ಟಿಗೆದ್ದ ಜೋಡಿಯೊಂದು ಪ್ರತಿಭಟನಾ ರೂಪವಾಗಿ ಬಿಜೆಪಿ ಶಾಸಕನ ಕಚೇರಿ ಮುಂದೆಯೇ  ಪರಸ್ಪರ ಕಿಸ್ಸಿಂಗ್‌ನಲ್ಲಿ ತೊಡಗಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಛತ್ತೀಸ್‌ಗಢದ ವೈಶಾಲಿ ನಗರದಲ್ಲಿ ಸ್ಥಳೀಯ ಬಿಜೆಪಿ ನಾಯಕ ಹಾಗೂ ಶಾಸಕ ರಿಕೇಶ್ ಸೇನ್ ಅವರು ಒಯೋ ರೂಮ್‌ಗಳಲ್ಲಿ ವೇಶ್ಯಾವಾಟಿಕೆ ಹೆಚ್ಚಳವಾಗುತ್ತಿದೆ ಎಂದು ಆರೋಪಿಸಿ ಇಂತಹ ಹೊಟೇಲ್‌ಗಳನ್ನು ಬಂದ್‌ಗೆ ಸೂಚಿಸಿದ್ದರು. ಜೊತೆಗೆ ಎಲ್ಲೆಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆಯೋ ಅಲ್ಲಿಗೆ ಸ್ವತಃ ದಾಳಿ ನಡೆಸುವುದಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಿಕೇಶ್ ಸೇನ್ ಅವರ ಈ ನಿರ್ಧಾರದ ವಿರುದ್ಧ ಪ್ರತಿಭಟನೆಯಾಗಿ ಅಪರಿಚಿತ ಜೋಡಿಯೊಂದು ಅವರ ಕಚೇರಿ ಮುಂದೆಯೇ ಕಿಸ್ಸಿಂಗ್‌ನಲ್ಲಿ ತೊಡಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಕೆಲವರು ಶಾಸಕನ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕವಾಗಿ ನಡೆಯುವ ಹೊಟೇಲ್‌ಗಳನ್ನು ಶಾಸಕ ಮುಚ್ಚುವುದು ಹೇಗೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 

ಬಿಜೆಪಿ ಶಾಸಕ ರಿಕೇಶ್ ಸೇನ್ ಅವರ ಪಕ್ಷದ ಕಚೇರಿಯೂ ವೈಶಾಲಿ ನಗರದ ಜಲೇಬಿ ಚೌಕ್‌ನಲ್ಲಿ ಇದ್ದು, ಅಪರಿಚಿತ ಜೋಡಿಯೊಂದು ಇಲ್ಲಿ ಬಹಿರಂಗವಾಗಿಯೇ ಕಿಸ್ಸಿಂಗ್‌ನಲ್ಲಿ ತೊಡಗಿದೆ. ಒಯೋ ರೂಮ್‌ಗಳ ನೆಪದಲ್ಲಿ ನಗರದಲ್ಲಿ ವೇಶ್ಯಾವಾಟಿಕೆ ಹಾವಳಿ ವ್ಯಾಪಕವಾಗಿದ್ದು, ಎಲ್ಲೆಲ್ಲಿ ಹೀಗೆ ವೇಶ್ಯಾವಾಟಿಕೆ ನಡೆಯುತ್ತಿದೆಯೋ ಅಲ್ಲೆಲ್ಲಾ ಪೊಲೀಸರೊಂದಿಗೆ ತಾನು ಸ್ವತಃ ಭೇಟಿ ನೀಡಿ ದಾಳಿ ನಡೆಸುವುದಾಗಿ ಶಾಸಕ ರಿಕೇಶ್ ಸೇನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈಗ ಪ್ರೇಮಿಗಳು ಸಾರ್ವಜನಿಕ ಸ್ಥಳದಲ್ಲೇ ಅದರಲ್ಲೂ ಶಾಸಕನ ಕಚೇರಿ ಮುಂದೆಯೇ ಕಿಸ್ಸಿಂಗ್‌ನಲ್ಲಿ ತೊಡಗಿದ್ದಾರೆ. ಇದಕ್ಕೂ ಮೊದಲು ಕೂಡ ಶಾಸಕ ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ಮಾಡ್ತಿದ್ದ ಪ್ರೇಮಿಗಳಿಗೆ ವಿರೋಧ ವ್ಯಕ್ತಪಡಿಸಿದ್ದ ವೀಡಿಯೋವೊಂದು ವೈರಲ್ ಆಗಿತ್ತು. ಈ ವೇಳೆ ಜೋಡಿ ನೀವು ಒಯೋ ರೂಮ್ ಬ್ಯಾನ್ ಮಾಡಿದ ಮೇಲೆ ನಮಗೆ ಹೋಗುವುದಕ್ಕೆ ಎಲ್ಲೂ ಜಾಗವೇ ಇಲ್ಲ ಎಂದು ಹೇಳಿದ್ದರು ಎಂದು ವರದಿ ಆಗಿದೆ.

ಚುನಾವಣಾ ಪ್ರಚಾರದ ವೇಳೆ ಮಹಿಳೆಗೆ ಕಿಸ್‌ ಕೊಟ್ಟ ಬಿಜೆಪಿ ಅಭ್ಯರ್ಥಿ, ಫೋಟೋ ವೈರಲ್‌!

ಅನೇಕರು ಶಾಸಕನ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನೈತಿಕ ಪೊಲೀಸ್ ಗಿರಿಯನ್ನು ಮೊದಲು ನಿಲ್ಲಿಸಬೇಕು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವು ಸ್ವಾತಂತ್ರ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಜೋಡಿ ಬೆಡ್‌ರೂಮ್ ರಾಜಕೀಯವನ್ನು ಬೇರೆ ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮನುಷ್ಯರು ಕಿಸ್‌ ಮಾಡೋಕೆ ಶುರು ಮಾಡಿದ್ದು ಯಾವಾಗ, ಯಾಕೆ?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!