ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದ ರೈತ ಸಂಘಟನೆ; ಇಟಲಿ ಪ್ರಯಾಣಕ್ಕೆ ಪ್ರತಿಕ್ರಿಯೆ!

By Suvarna NewsFirst Published Dec 27, 2020, 10:33 PM IST
Highlights

ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ರಾಹುಲ್ ಗಾಂಧಿ, ಪ್ರತಿಭಟನೆ ನಡುವೆ ಇಟಲಿಗೆ ಪ್ರಯಾಣ ಮಾಡಿದ್ದಾರೆ. ಇದು ತೀವ್ರ ಟೀಕೆಗೆ ಕಾರಣವಾಗಿದೆ. ಇತ್ತ ರಾಹುಲ್ ಇಟಲಿ ಪ್ರಯಾಣದ ಕುರಿತು ರೈತ ಸಂಘಟನೆ ಖಡಕ್ ಪ್ರತಿಕ್ರಿಯೆ ನೀಡಿದೆ.

ನವದೆಹಲಿ(ಡಿ.27): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿಢೀರ್ ಇಟಲಿಗೆ ಹಾರಿದ್ದಾರೆ. ಇದೀಗ ಕಾಂಗ್ರೆಸ್ ಕೂಡ ರಾಹುಲ್ ವಿದೇಶಕ್ಕೆ ತೆರಳಿರುವುದನ್ನು ಖಚಿತಪಡಿಸಿದೆ. ಆದರೆ ಇತರ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ. ಇತ್ತ ವಿದೇಶ ಪ್ರಯಾಣಕ್ಕೆ ರಾಹುಲ್ ಗಾಂಧಿ ವಿರುದ್ಧ ಟೀಕೆ ವ್ಯಕ್ತವಾಗಿದೆ. ರೈತ ಪ್ರತಿಭಟನೆ ನಡುವೆ ವಿದೇಶ ಪ್ರಯಾಣವನ್ನು ಹಲವು ಪ್ರಶ್ನಿಸಿದ್ದಾರೆ. ಇದೀಗ ಪ್ರತಿಭಟನಾ ನಿರತ ರೈತ ಸಂಘಟನೆ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದೆ.

ರೈತರ ಪ್ರತಿಭಟನೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡುವೆ ಇಟಲಿಗೆ ಹಾರಿದ ರಾಹುಲ್ ಗಾಂಧಿ!

ರಾಹುಲ್ ಪ್ರಯಾಣದ ಕುರಿತು ಪ್ರತಿಭಟನಾ ನಿರತ ಭಾರತೀಯ ಕಿಸಾನ್ ಯುನಿಯನ್(BKU)ನಾಯಕ ರಾಕೇಶ್ ಟಿಕೈಟ್ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಇದುವರೆಗೆ ನಮ್ಮ ಜೊತೆಯಾಗಲಿ, ಪ್ರತಿಭಟನಾ ನಿರತ ರೈತರ ಜೊತೆ ಮಾತನಾಡಿಲ್ಲ. ಇಲ್ಲಿಗೆ ಬೇಟಿ ನೀಡಿಲ್ಲ. ನಮ್ಮ ವಿರೋಧ ಪಕ್ಷ ತುಂಬಾ ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಹಳೇ ವಿಡಿಯೋ ಶೇರ್ ಮಾಡಿದ ಜೆಪಿ ನಡ್ಡಾ; ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್!

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ರೈತರ ಜೊತೆ ನಾವು ನಿಲ್ಲಲಿದ್ದೇವೆ ಎಂದಿತ್ತು.  ರಾಹುಲ್ ಗಾಂಧಿ ಇತ್ತೀಚೆಗೆ ವಾಗ್ದಾಳಿ ನೆಡೆಸಿದ್ದರು. ಕೃಷಿ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣ ಮಾಡಿರುವುದು ಇದೀಗ ರೈತರನ್ನೇ ಕೆರಳಿಸಿದೆ.

click me!