
ನವದೆಹಲಿ: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಜರ್ಮನಿ ಜತೆಗಿನ 70 ಸಾವಿರ ಕೋಟಿ ರು. ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದ ಸದ್ಯದಲ್ಲೇ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಭೆ ಮುಂದೆ ಚರ್ಚೆಗೆ ಬರುವ ನಿರೀಕ್ಷೆ ಇದೆ.
ಕ್ಯಾಬಿನೆಟ್‌ನ ಒಪ್ಪಿಗೆ ಸಿಕ್ಕರೆ ಮುಂದಿನ 6ರಿಂದ 8 ವಾರಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಜರ್ಮನಿಯ ಭಾರತದ ರಾಯಭಾರಿ ಫಿಲಿಫ್ ಎಕರ್‌ಮನ್ ಹೇಳಿದ್ದಾರೆ. ಯೋಜನೆಯಡಿ ಭಾರತೀಯ ನೌಕಾಪಡೆಗೆ ಅತ್ಯಾಧುನಿಕ 6 ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ಜರ್ಮನಿಯ ಕಂಪನಿ ನಿರ್ಮಿಸಿ ಕೊಡಲಿದೆ. ಇವು ಬಹುತೇಕ ಭಾರತದಲ್ಲೇ ನಿರ್ಮಾಣವಾಗಲಿವೆ. ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಸರ್ಕಾರಿ ಹಡಗು ನಿರ್ಮಾಣ ಕಂಪನಿ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿ. ಸಹಭಾಗಿತ್ವದಲ್ಲಿ ಈ ಸಬ್‌ಮರೀನ್ ನಿರ್ಮಾಣವಾಗಲಿವೆ.
ಹಲವು ವರ್ಷಗಳಿಂದ ಈ ಒಪ್ಪಂದ ಕುರಿತು ಚರ್ಚೆ ನಡೆಯುತ್ತಿದ್ದರೂ ವಾಣಿಜ್ಯ ಷರತ್ತುಗಳು ಹಾಗೂ ತಾಂತ್ರಿಕ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ