ಭಾರತದ ಶಿಕ್ಷಣ ಕ್ಷೇತ್ರ ಬಲಪಡಿಸಲು ತಂತ್ರಜ್ಞಾನ ಬಳಕೆ, ಸಂಸದರಿಂದ ಮಹತ್ವದ ಸಭೆ

Published : Aug 16, 2026, 10:46 PM IST
Education and Emerging Technologies

ಸಾರಾಂಶ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ (AI), ಡೇಟಾ ಅನಾಲಿಟಿಕ್ಸ್, ಹಾಗೂ ಡಿಜಿಟಲ್ ಕಲಿಕಾ ಉಪಕರಣಗಳು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ತರಬಹುದಾದ ಕ್ರಾಂತಿಕಾರಿ ಬದಲಾವಣೆ ಕುರಿತು ಮಹತ್ವದ ಸಭೆ ನಡೆದಿದೆ.

ಭಾರತದ ಶೈಕ್ಷಣಿಕ ಕ್ಷೇತ್ರವನ್ನು ತಂತ್ರಜ್ಞಾನಗಳ (Emerging Technologies) ಮೂಲಕ ಬಲಪಡಿಸುವ ಮತ್ತು ಜಾಗತಿಕ ಸವಾಲುಗಳಿಗೆ ತಕ್ಕಂತೆ ರೂಪಾಂತರಿಸುವ ನಿಟ್ಟಿನಲ್ಲಿ ಮಹತ್ವದ ಸಮಾಲೋಚನೆ ಸಭೆ ನಡೆದಿದೆ. ಸಂಸದರಾದ ಮನೀಶ್ ತಿವಾರಿ, ಅತುಲ್ ಗರ್ಗ್, ಕಾರ್ತಿ ಚಿದಂಬರಂ, ಸುಜೀತ್ ಕುಮಾರ್ ಮತ್ತು ಕೊಂಡ ವಿಶ್ವೇಶ್ವರ ರೆಡ್ಡಿ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಈ ಸಭೆ ಆಯೋಜಿಸಲಾಗಿತ್ತು.

ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ & ಚೇಂಜ್ (NFPRC) ಮತ್ತು PANJ ಫೌಂಡೇಶನ್‌ಗಳ ಜಂಟಿ ಆಶ್ರಯದಲ್ಲಿ ನಡೆದ ಈ ‘ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು’ (Emerging Technologies to Strengthen India's Education Sector) ಸಭೆಯಲ್ಲಿ ಸಂಸದರ ಜೊತೆ ಸರ್ಕಾರಿ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಹಾಗೂ ಶಿಕ್ಷಣ ರಂಗದ ದಿಗ್ಗಜರು ಪಾಲ್ಗೊಂಡಿದ್ದರು.

ಅವಕಾಶಗಳ ಸಮಗ್ರ ಪರೀಕ್ಷೆ: ಆರ್ಟಿಫೀಶಿಯಲ್ ಇಂಟಲಿಜೆನ್ಸ್ (AI), ಡೇಟಾ ಅನಾಲಿಟಿಕ್ಸ್, ಹಾಗೂ ಡಿಜಿಟಲ್ ಕಲಿಕಾ ಉಪಕರಣಗಳು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ತರಬಹುದಾದ ಕ್ರಾಂತಿಕಾರಿ ಬದಲಾವಣೆಗಳನ್ನು ಪರಿಶೀಲಿಸುವುದು.

ಭವಿಷ್ಯನೋಟದ ದೃಷ್ಟಿಕೋನ: ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮಾನ ಮತ್ತು ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯುವಂತೆ ಭವಿಷ್ಯದ ಶೈಕ್ಷಣಿಕ ಚೌಕಟ್ಟನ್ನು ಸಿದ್ಧಪಡಿಸುವುದು.

ರಾಷ್ಟ್ರೀಯ ನೀತಿಗೆ ಪೂರಕ ಕೊಡುಗೆ: ಸಭೆಯಲ್ಲಿ ದೊರೆತ ಪ್ರಮುಖ ಒಳನೋಟಗಳು ಮತ್ತು ಶಿಫಾರಸುಗಳು ನೇರವಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಹಾಗೂ ಕಾರ್ಯಕ್ರಮಗಳ ಜಾರಿಗೆ ಪೂರಕ ಪಾಲಿಸಿ ಬೆಂಬಲ ನೀಡುವಂತೆ ಮಾಡುವುದು.

ಸಂಸದರಿಂದ ವಿಚಾರ ಮಂಡನೆ

ಈ ಸಮಾಲೋಚನಾ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ಸಂಸದರು ಭಾಗವಹಿಸಿ ತಮ್ಮ ಪ್ರಾಯೋಗಿಕ ಅನುಭವ ಹಾಗೂ ದೃಷ್ಟಿಕೋನಗಳನ್ನು ಹಂಚಿಕೊಂಡರು

ಸಂಸದ ಮನೀಶ್ ತಿವಾರಿ: ಡಿಜಿಟಲ್ ತಂತ್ರಜ್ಞಾನದ ಬಳಕೆಯು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪುವಂತಾಗಬೇಕು ಹಾಗೂ ತಂತ್ರಜ್ಞಾನದ ಜೊತೆಗೆ ಶೈಕ್ಷಣಿಕ ಸೈಬರ್ ಭದ್ರತೆಗೂ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.

ಸಂಸದ ಅತುಲ್ ಗರ್ಗ್: ಉದಯೋನ್ಮುಖ ತಂತ್ರಜ್ಞಾನಗಳು ಭಾರತದ ತಳಮಟ್ಟದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ವಹಿಸುವ ಪಾತ್ರವನ್ನು ಒತ್ತಿಹೇಳಿದರು.

ಸಂಸದ ಕಾರ್ತಿ ಚಿದಂಬರಂ: ಜಾಗತಿಕ ಸ್ಪರ್ಧೆಗೆ ತಕ್ಕಂತೆ ನಮ್ಮ ಪಠ್ಯಕ್ರಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸೇರ್ಪಡೆಗೊಳಿಸುವ ಆವಶ್ಯಕತೆಯನ್ನು ಪ್ರಸ್ತಾಪಿಸಿದರು.

ಸಂಸದ ಸುಜೀತ್ ಕುಮಾರ್: ಪ್ರಾದೇಶಿಕ ಭಾಷೆಗಳಲ್ಲಿ ಎಐ-ಚಾಲಿತ ಕಲಿಕಾ ತಂತ್ರಜ್ಞಾನಗಳನ್ನು ತರುವ ಮೂಲಕ ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸುವ ಕುರಿತು ಮಾತನಾಡಿದರು.

ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ: ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದ ಅಗತ್ಯತೆಗಳಿಗೆ (Industry-Academia bridge) ತಕ್ಕಂತೆ ಉದ್ಯೋಗ ಆಧಾರಿತ ತರಬೇತಿಯನ್ನು ಶಿಕ್ಷಣದಲ್ಲಿ ಅಳವಡಿಸುವ ಅಗತ್ಯವನ್ನು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುಜಿಸಿ NET ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪು, 3 ಪರೀಕ್ಷೆ ರದ್ದುಗೊಳಿಸಿ ರೀ ಎಕ್ಸಾಂಗೆ ದಿನಾಂಕ ಘೋಷಣೆ
ಐಐಟಿ ಕನಸು ಭಂಗವಾಯ್ತೆಂದು ಗೂಗಲ್ ಬೆನ್ನೇರಿದ ಭಾರತೀಯ ಯುವಕ, ಸೋಲೊಪ್ಪದೇ ಗೆದ್ದ ಕಂಟೆಂಟ್ ಕ್ರಿಯೇಟರ್ ಸ್ಪೂರ್ತಿಯ ಕಥೆ!